March 21, 2026
WhatsApp Image 2024-05-12 at 6.05.54 PM

ಶಂಕರನಾರಾಯಣ: ವ್ಯಾಪಾರ ಮುಗಿಸಿ ಹಾವೇರಿಗೆ ವಾಪಾಸ್ಸು ಹೋಗುತ್ತಿದ್ದ ವ್ಯಾಪಾರಿಯ ವಾಹನದಲ್ಲಿದ್ದ 4.5 ಲಕ್ಷ ರೂ. ಹಣವನ್ನು ಕಳ್ಳರು ಕಳವು ಮಾಡಿರುವ ಘಟನೆ ಸಿದ್ದಾಪುರ ಪೇಟೆಯಲ್ಲಿ ಸಂಭವಿಸಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಹಾವೇರಿ ಜಿಲ್ಲೆಯ ಮಹಮ್ಮದ್ ರಫಿ(43) ಎಂಬವರು ಬ್ರಹ್ಮಾವರದ ಸಂತೆಯಲ್ಲಿ ಮೆಣಸಿನ ವ್ಯಾಪಾರ ಮಾಡಿ ತನ್ನ ಕೆಲಸದವರೊಂದಿಗೆ ವಾಹನದಲ್ಲಿ ವಾಪಾಸ್ಸು ಊರಿಗೆ ಹೋಗುತ್ತಿದ್ದರು.ದಾರಿ ಮಧ್ಯೆ ಸಿದ್ದಾಪುದ ಪೇಟೆಯಲ್ಲಿ ವಾಹನವನ್ನು ನಿಲ್ಲಿಸಿ ಊಟಕ್ಕೆಂದು ಹೊಟೇಲಿಗೆ ತೆರಳಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಹನದ ಹಿಂದುಗಡೆ ಇರಿಸಿದ್ದ 4,50,000ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.