10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ಜೂ.14 ರ ಬಳಿಕ ರದ್ದಾಗುತ್ತಾ.?ಇಲ್ಲಿದೆ ವಿವರ…

10 ವರ್ಷದ ಹಿಂದಿನ ಆಧಾರ್ ಕಾರ್ಡ್ ಜೂ.14 ರ ಬಳಿಕ ರದ್ದಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಜೂ. 14 ರವರೆಗೆ ಗಡುವು ನೀಡಲಾಗಿದೆ. ಜೂನ್ 14 ರೊಳಗೆ ಅಪ್ ಡೇಟ್ ಮಾಡಿಸದೇ ಇದ್ರೆ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದಕ್ಕೆ ಸ್ಪಷ್ಟನೆ ನೀಡಿದ UIDAI ಜೂನ್ 14 ರೊಳಗೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಬೇಕು. ಆದರೆ ಅದರ ನಂತರ ಹಳೆಯ ಆಧಾರ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೂನ್ 14 ರೊಳಗೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಬೇಕು, ಇದರ ನಂತರ ಉಚಿತವಾಗಿ ಆಧಾರ್ ನವೀಕರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್ ಪ್ರಾಧಿಕಾರ 2024ರ ಜೂನ್ 14ರವರೆಗೆ ವಿಸ್ತರಿಸಿದ್ದು, ಜೂನ್ 14 ರೊಳಗೆ ಅಪ್ ಡೇಟ್ ಮಾಡಲು ಸೂಚನೆ ನೀಡಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತ ಆಧಾರ್ ಅಪ್ಡೇಟ್ ಪ್ರಯೋಜನ ಪಡೆಯಬಹುದಾಗಿದೆ.

ಉಚಿತ ಪರಿಷ್ಕರಣೆ ಸೇವೆಯು ಆನ್ಲೈನ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯವಾಗಿದೆ.

ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಸರಳ ಮತ್ತು ಹಂತ ಹಂತದ ಹಂತಗಳು ಇಲ್ಲಿವೆ:
ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ವೆಬ್ಸೈಟ್ಗೆ ಲಾಗ್ ಇನ್ ಮಾಡಿ.
‘ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ’ ಆಯ್ಕೆಯನ್ನು ಆರಿಸಿ.

ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ.
‘ಡಾಕ್ಯುಮೆಂಟ್ ಅಪ್ಡೇಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ; ನಿವಾಸಿಯ ಪ್ರಸ್ತುತ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್ ಲಿಂಕ್ ಕ್ಲಿಕ್ ಮಾಡಿ.
ಈಗ ಡ್ರಾಪ್ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಆಯ್ಕೆ ಮಾಡಿ.
ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ಪುರಾವೆಗಳನ್ನು ಅಪ್ಲೋಡ್ ಮಾಡಿ
ಈಗ ‘ಸಲ್ಲಿಸಿ’ ಬಟನ್ ಕ್ಲಿಕ್ ಮಾಡಿ ಮತ್ತು ನಿರ್ದಿಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕೊನೆಯ 14 ಅಂಕಿಗಳ ನವೀಕರಣ ರೆಡ್ವೆಸ್ಟ್ ಸಂಖ್ಯೆ (ಯುಆರ್‌ಎನ್) ರಚಿಸಿದ ನಂತರ, ನಿಮ್ಮ ಆಧಾರ್ ನವೀಕರಣ ವಿನಂತಿಯನ್ನು ಅನುಮೋದಿಸಲಾಗುತ್ತದೆ.

Check Also

ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ : ಬಂಧಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ್ದು, ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಮಾಜಿ ಸಿಎಂ …

Leave a Reply

Your email address will not be published. Required fields are marked *

You cannot copy content of this page.