January 22, 2025
WhatsApp Image 2025-01-22 at 5.31.47 PM

ಉಡುಪಿ : ಗಂಗೊಳ್ಳಿ ಪಂಚಾಯತ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಪಿಡಿಓ‌ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಶೇಖರ ಜಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.

9/11 ಮಾಡಿಕೊಡಲು ಪಿಡಿಒ 20 ಸಾವಿರ ಲಂಚ ಕೇಳಿದ್ದ. 9/11 ಮಾಡಿಸಲು ದ್ವಿತೀಯ ದರ್ಜೆ ಗುಮಾಸ್ತ 2 ಸಾವಿರ ರೂಪಾಯಿ ಹಣ ಪಡೆದಿದ್ದ. ಒಟ್ಟು 22 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಓ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಮ್ಮದ್ ಹನೀಫ್ ಎಂಬವರ ದೂರಿನ ಮೇಲೆ‌ ಈ ಕಾರ್ಯಾಚರಣೆ ನಡೆದಿತ್ತು. ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.

About The Author

Leave a Reply

Your email address will not be published. Required fields are marked *

You cannot copy content of this page.