March 5, 2026
WhatsApp Image 2024-02-19 at 9.31.45 AM

ಉಳ್ಳಾಲ : ಪಾವೂರು ಗ್ರಾಮದ ಹರೇಕಳದಲ್ಲಿರುವ ಡಿವೈಎಫ್ಐ ಕಚೇರಿ ಬಳಿ ಅಳವಡಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ಅನ್ನು ತೆರವಿಗೆ ಕೊಣಾಜೆ ಠಾಣಾ ಪೊಲೀಸರು ಡಿವೈಎಫ್ಐಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಡಿವೈಎಫ್ಐನಿಂದ ತೊಕ್ಕೊಟ್ಟಿನ ಯುನಿಟಿ ಗ್ರ್ಯಾಂಡ್ ನಲ್ಲಿ ನಡೆಯುವ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ ಆರು ಅಡಿ ಉದ್ದದ ಟಿಪ್ಪುವಿನ ಕಟೌಟ್ ಅನ್ನು ಅಳವಡಿಸಲಾಗಿತ್ತು. ಆದರೆ, ಈ ಕಟೌಟ್ ಅಳವಡಿಸಲು ಅನುಮತಿ ಪಡೆದಿಲ್ಲವೆಂದು ಕೊಣಾಜೆ ಪೊಲೀಸರು ತೆರವು ಮಾಡಲು ನೋಟೀಸ್ ಜಾರಿಗೊಳಿಸಿದೆ. ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಯಾವ ಸರ್ಕಾರ ನಿಷೇಧ ಹೇರಿದ್ದು? ಕರ್ನಾಟಕದಲ್ಲಿ ಸರ್ಕಾರ ಬದಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಸರ್ಕಾರ ಇದೆಯೇ? ಕಾಂಗ್ರೆಸ್ ಸರ್ಕಾರದ ಕಾಲದಲ್ಲೂ ಸಂಘಿ ಮನಸ್ಥಿತಿಯಲ್ಲೇ ಪೋಲೀಸರು ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲಾ ಆದರ್ಶರ, ಮಹಾತ್ಮರ ಕಟೌಟ್, ಬ್ಯಾನರ್ ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ ಎಂದು ಡಿವೈಎಫ್ಐ ಹೇಳಿದೆ.

About The Author

Leave a Reply

Your email address will not be published. Required fields are marked *

You cannot copy content of this page.