ಉಪ್ಪಿನಂಗಡಿ: ಟಯರ್ ರಿಸೋಲ್ ಸಂಸ್ಥೆಯೊಂದರಲ್ಲಿ ಏರ್ ಕಂಪ್ರೈಸರ್ ಸ್ಫೋಟಗೊಂಡು ಓರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.
ಆಲಂಕಾರು ನಿವಾಸಿ ರಾಜೇಶ್ ಪೂಜಾರಿ (43) ಮೃತ ವ್ಯಕ್ತಿ.
ಏರ್ ಕಂಪ್ರೆಸರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ ಆದರೆ ಅವರು ಮೃತಪಟ್ಟಿದ್ದರು. ಇನ್ನು ಸ್ಫೋಟದಿಂದಾಗಿ ಅಂಗಡಿಯಲ್ಲೆ ಹೊಗೆ ಕಾಣಿಸಿದೆ. ಅಂಗಡಿಗೂ ಹಾನಿಯಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.