ಪುತ್ತೂರು : ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಗ್ಯಾರಂಟಿ ನೀಡಿದ್ದು ಸರಕಾರಿ ಬಸ್ಸುಗಳು ಫುಲ್ ರಶ್ ಆಗಿ ತುಂಬು ತುಳುಕುತ್ತಿವೆ. ಸರಕಾರಿ ಬಸ್ ಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಜೀವ ಕೈಯಲ್ಲಿ ಹಿಡಿದು ಬಸ್ ಫುಟ್ ಬೋರ್ಡ್‌ನಲ್ಲೇ ನಿಂತು ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಬಸ್ ನಿಲ್ಲಿಸದೇ ಹೋದಲ್ಲಿ ರಸ್ತೆ ಮಧ್ಯೆ ಬಂದು ವಿದ್ಯಾರ್ಥಿಗಳು ನಿಲ್ಲುತ್ತಿದ್ದಾರೆ ಎಂದು ಬಸ್ ನಿರ್ವಾಹಕರು ದೂರಿದ್ದಾರೆ. ಬಸ್ ನಲ್ಲಿ ಸ್ಥಳಾವಕಾಶ ಇಲ್ಲ ಎಂದು ನಿರ್ವಾಹಕರು ಹೇಳಿದರೂ ಕೇಳದೆ. ಅಪಾಯಕಾರಿ ರೀತಿಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಎಂದು ನಿರ್ವಹಕರು ದೂರಿದ್ದಾರೆ.