March 4, 2026
thmb-2025-06-11T194929.500

ಪುತ್ತೂರು  : ಜುಗಾರಿ ಆಟ ಆಡುತ್ತಿದ್ದ ಜಾಗಕ್ಕೆ ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅಲ್ಲಿ ಸಿಕ್ಕ ಬೈಕ್ ಗೆ ಸಂಬಂಧಿಸಿದ ಮಾಹಿತಿ ಪಡೆದು ಜುಗಾರಿ ಆರೋಪಿಯಿಂದ ಹಣಕ್ಕೆ ಬೇಡಿಕೆ ಇಟ್ಟ ವಿಟ್ಲ ಠಾಣೆ ಪಿಎಸ್‌ಐ ಬಿ.ಸಿ ಕೌಶಿಕ್ ಅವರನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಆದೇಶ ಹೊರಡಿಸಿದ್ದಾರೆ.

ಮೇ ತಿಂಗಳ 8ರಂದು ವಿಟ್ಲ ಪೇಟೆ ಬಳಿಯ ಪಳಿಕೆ ಎಂಬಲ್ಲಿ ನಾಲ್ವರು ಯುವಕರು ಜುಗಾರಿ ಆಡುತ್ತಿದ್ದ ಮಾಹಿತಿ ಪಡೆದ ವಿಟ್ಲ ಠಾಣೆ ಪಿಎಸ್ಕೆ ಬಿ.ಸಿ.ಕೌಶಿಕ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ, ಅಲ್ಲಿದ್ದವರು ಪರಾರಿಯಾಗಿದ್ದರೆ, ದ್ವಿಚಕ್ರ ವಾಹನ ಒಂದನ್ನು ಬಿಟ್ಟು ಹೋಗಿದ್ದರು. ಆರೋಪಿಗಳು ಯಾರೆಂದು ತಿಳಿದು ಒಬ್ಬಾತನಿಗೆ ಕರೆ ಮಾಡಿದ್ದ ಎಸೈ ಕೌಶಿಕ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಹಣಕ್ಕೆ ಬೇಡಿಕೆ ಇಟ್ಟ ವಿಟ್ಲ ಠಾಣೆಯ ಪಿಎಸ್‌ಐ ಕೌಶಿಕ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.