

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟದ ಪ್ರಕರಣವನ್ನು ಪತ್ತೆಹಚ್ಚಿದ ವೇಣೂರು ಪೊಲೀಸರು, ಎರಡು ಪಿಕಪ್ ಹಾಗೂ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ, ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ಎ.7ರಂದು ರಾತ್ರಿ ಮಾಹಿತಿ ಬಂದ ಮೇರೆಗೆ, ಪಿಎಸ್‌ಐ ಶ್ರೀಶೈಲ್ ಡಿ. ಮುರಗೋಡ್, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ವೇಣೂರು ಡ್ಯಾಂ ಬಳಿ ಕರಿಮಣೇಲು ಗ್ರಾಮದ ನಿವಾಸಿ ಸತೀಶ್ (44) ಮತ್ತು ಮೂಡುಕೋಡಿ ಗ್ರಾಮದ ನವೀನ್ (35) ಎಂಬವರು, ಎರಡು ಪಿಕಪ್ ಗಳಲ್ಲಿ ತಲಾ 30 ಬುಟ್ಟಿ – ಗಳಷ್ಟು ಮರಳನ್ನು ತುಂಬಿಸಿರುವುದು ಕಂಡುಬಂದಿದೆ. ಆರೋಪಿಗಳು ಪ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ನದಿಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ವಾಹನಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.