
ಸೆ. 5ರಿಂದ ನಾಪತ್ತೆಯಾಗಿದ್ದ ಉಡುಪಿಯ ಬಾಲಕನೊಬ್ಬ ಮರಳಿ ಮನೆಗೆ ಬಂದಿದ್ದಾನೆ. ನವೀನ್ ಚಂದ್ರ ಕಾಮತ್ ಅವರ ಪುತ್ರ ರತನ್ ಕಾಮತ್ (16) ಮನೆಗೆ ಬಂದಿರುವುದಾಗಿ ತಿಳಿದು ಬಂದಿದೆ.
ಈತ ಸೆ. 5ರಂದು ಉಡುಪಿ ಕೊರಂಗ್ರಪಾಡಿಯ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಬಳಿಯಿಂದ ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ತಂದೆ ನವೀನ್ ಚಂದ್ರ ಅವರು ಉಡುಪಿ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಇದೀಗ ಬಾಲಕ ಮರಳಿ ಮನೆಗೆ ಬಂದಿದ್ದಾನೆ.
