

ಕೋಟ: ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಕೋಟದ ಬೆಳೂರು ಗ್ರಾಮದ ದೇಲಟ್ಟು ಎಂಬಲ್ಲಿ ನಡೆದಿದೆ.
ಗಿಳಿಯಾರು ಗ್ರಾಮದ ಇಪ್ಪತ್ತೇಳು ವರ್ಷದ ರಾಘವೇಂದ್ರ, ಬೇಳೂರು ಗ್ರಾಮದ ಮೂವತ್ತೆರಡು ವರ್ಷದ ಶಿವರಾಜ್ ಎಂಬವರನ್ನು ಕೋಟ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಗಾಂಜಾ, ಡ್ರಗ್ಸ್ ಸೇವನೆ ಕಾನೂನಿನ ಭಯವಿಲ್ಲದೆ ಸಾರ್ವಜನಿಕ ಪ್ರದೇಶದಲ್ಲೇ ನಡೆಯುತ್ತಿದೆ. ಈ ಬಗ್ಗೆ ಅಲರ್ಟ್ ಆಗಿರುವ ಪೊಲೀಸರು ಮಣಿಪಾಲದಲ್ಲೂ ಗಾಂಜಾ ಸೇವಿಸುತ್ತಿದ್ದವರನ್ನು ಇತ್ತೀಚೆಗೆ ಬಂಧಿಸಿದ್ದರು.