ಉಡುಪಿ: ಬೈಕ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂದೆ ಕುಳಿತಿದ್ದ ನಾಗವೇಣಿ (30) ಮೃತಪಟ್ಟ ಘಟನೆ ಜ.5ರಂದು ನಡೆದಿದೆ.
ಬೈಂದೂರಿನ ಬೋಳಂಬಳ್ಳಿ ನಿವಾಸಿಗಳಾದ ಸತೀಶ್ (33) ಮತ್ತು ಅವರ ಪತ್ನಿ ನಾಗವೇಣಿ (30) ಅವರು ಜ.5ರಂದು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಣಿಪಾಲ ಕಡೆಗೆ ಮೋಟಾರು ಸೈಕಲ್‌ನಲ್ಲಿ ತೆರಳುತ್ತಿದ್ದು, ಸಂಜೆ 4.30ರ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಶೆಟ್ಟಿಗಾರ್ ಇಂಡಸ್ಟ್ರೀಸ್ ಬಳಿ ಬರುತ್ತಿದ್ದಂತೆ. KL-07-DC-6401 ನೋಂದಣಿ ಸಂಖ್ಯೆ ಹೊಂದಿರುವ ಅತಿವೇಗ ಮತ್ತು ಅಜಾಗರೂಕ ಕಂಟೈನರ್ ಲಾರಿ, ತೀವ್ರ ಎಡಕ್ಕೆ ತಿರುಗಿ ಮೋಟಾರ್‌ಸೈಕಲ್‌ನ ಬಲ ಹ್ಯಾಂಡಲ್‌ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ದಂಪತಿ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾರೆ. ಸತೀಶ್ ಅವರ ಕೈ ಮತ್ತು ತೊಡೆಯ ಭಾಗಕ್ಕೆ ಗಾಯಗಳಾಗಿದ್ದರೆ, ನಾಗವೇಣಿ ಅವರ ತಲೆ, ಮುಖ ಮತ್ತು ಎಡ ಭುಜಕ್ಕೆ ತೀವ್ರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಗವೇಣಿ ಸಂಜೆ 6.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಕಂಟೈನರ್ ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.