ಮೂಡುಬಿದಿರೆ: ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ; ಪೊಲೀಸರಿಂದ ತೆರವು

ಮೂಡುಬಿದಿರೆ: ತಾಲೂಕಿನ‌ ಪುಚ್ಚೆಮುಗೇರು ಗ್ರಾಮದಲ್ಲಿ ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ನೆಟ್ಟ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್​ ಎಂಬುವವರು ಪಂಚಾಯತ್ ಅನುಮತಿ ಪಡೆಯದೆ ಹಾಕಿರುವ ಧ್ವಜ ಇದಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಪಿಡಿಒ ಕರ್ತವ್ಯದ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಮ್ಮ ಮೇಲೆ ಕೇಸ್ ಹಾಕೋದಾಗಿ ಎಚ್ಚರಿಸಿದ್ದಾರೆ. ಇನ್ನು ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಧ್ವಜ ಕಾರಣವಾಗುತ್ತಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಪ್ರಕರಣ ತಿಳಿಯಾಗಿದೆ. ಇನ್ನು ಧ್ವಜ ನೆಟ್ಟವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Check Also

BIG NEWS: ವಿಧಾನಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ‘ಸಿಎಂ ಆಸನ’ದ ಮೇಲೆ ಕುಳಿತು ಮಹಾ ಯಡವಟ್ಟು

ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡೋದಕ್ಕೆ ವಿಧಾನಸಭೆಯ ಸದನಕ್ಕೆ ತೆರಳಿದ್ದಂತ ಮೂಡುಗೆರೆ ಶಾಸಕಿ ನಯನಾ ಮೋಟಮ್ಮ …

Leave a Reply

Your email address will not be published. Required fields are marked *

You cannot copy content of this page.