ಪುತ್ತೂರು: ಆ್ಯಸಿಡ್ ದಾಳಿ – ವಿಧ್ಯಾರ್ಥಿನಿಯರಿಗೆ ಕೇರಳ ಸರಕಾರ ಪರಿಹಾರ ನೀಡಬೇಕು

ಪುತ್ತೂರು: ಕಡಬದಲ್ಲಿ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಮೇಲೆ ನಡೆದ ಆ್ಯಸಿಡ್ ದಾಳಿ ನಡೆಸಿದ ಆರೋಪಿ ಕೇರಳದ ನಿವಾಸಿಯಾಗಿದ್ದು, ಈ ಹಿನ್ನಲೆ ಕೇರಳ ಸರಕಾರ ವಿಧ್ಯಾರ್ಥಿನಿಯರಿಗೆ ಪರಿಹಾರ ನೀಡಬೇಕೆಂದು ದುರ್ಗಾವಾಹಿನಿ ಆಗ್ರಹಿಸಿದೆ.

ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣವನ್ನು ವಿಶ್ವಹಿಂದೂ ಪರಿಷತ್, ದುರ್ಗಾವಾಹಿನಿ ಖಂಡಿಸಿದ್ದು, ಆರೋಪಿ ಅಬಿನ್ ಸಿಬಿ ಕೇರಳ ಮೂಲದವನಾಗಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಸರಕಾರ ಆನೆ ದಾಳಿಯಲ್ಲಿ ಸಾವನಪ್ಪಿದ ಕೇರಳದವರಿಗೆ ಪರಿಹಾರ ನೀಡಿದೆ. ಆ ರೀತಿಯಲ್ಲಿ ಇದೀಗ ಕೇರಳ ಸರಕಾರವೂ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃತ್ಯ ನಡೆದ ಸ್ಥಳವಾದ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಕಾಲೇಜಿಗೆ ಸರಿಯಾದ ಆವರಣ ಗೋಡೆ ಇಲ್ಲ, ಅಲ್ಲದೆ ಆವರಣ ಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು ಆದರೆ ಈವರೆಗೂ ಆವರಣಗೋಡೆ ಮಾಡಿಲ್ಲ, ಕಾಲೇಜಿನಲ್ಲಿ ಭದ್ರತೆಗೆ ಇಲ್ಲಿ ಯಾವುದೇ ಪ್ರಾಮುಖ್ಯತೆ ನೀಡದ ಕಾರಣ ಈ ಕೃತ್ಯ ನಡೆದಿದೆ ಎಂದು ದುರ್ಗಾವಾಹಿ ಆರೋಪಿಸಿದೆ.

Check Also

ಶಿರಾಡಿಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್, ಸಂಚಾರ ಸಂಪೂರ್ಣ ಸ್ಥಗಿತ..!

ಹಾಸನ: ಭಾರೀ ಮಳೆಗೆ ಸಕಲೇಶಪುರ ಎತ್ತಿನಹಳ್ಳದ ಸಮೀಪ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಶಿರಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ …

Leave a Reply

Your email address will not be published. Required fields are marked *

You cannot copy content of this page.