
ಬೆಳ್ತಂಗಡಿ :ಅಕ್ರಮವಾಗಿ ಮರಳು ಸಾಗಾಟದ ಪ್ರಕರಣವೊಂದನ್ನು ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಬಂಧಿತ ಆರೋಪಿ ಧನಕೀರ್ತಿ ಎಂಬಾತನಾಗಿದ್ದಾನೆ.
ಸೆ. 2ರಂದು ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊಕ್ರಾಡಿ ಬಳಿ ನಾರಾವಿ- ವೇಣೂರು – ಸಾರ್ವಜನಿಕ ರಸ್ತೆಯಲ್ಲಿ ನಾರಾವಿ ಕಡೆಯಿಂದ ವೇಣೂರು ಕಡೆಗೆ ಬರುತ್ತಿದ್ದ 407 ಗೂಡ್ಸ್ ಮಿನಿ ಟಿಪ್ಪರ್ ನಂಬ್ರ KA 70.4468 ನೇದರಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಆರೋಪಿತ ಟಿಪ್ಪರ್ ಚಾಲಕನಲ್ಲಿ ಮರಳು ಸಾಗಾಟದ ಬಗ್ಗೆ ಯಾವುದೇ ದಾಖಲೆ/ಪರವಾನಿಗೆ ಇಲ್ಲದಿರುವುದು ಕಂಡುಬಂದಿದೆ ಅಲ್ಲದೇ ಸದ್ರಿ ಮರಳನ್ನು ಸುಲ್ಕೇರಿ ಗ್ರಾಮದ ಸುಲ್ಕೇರಿ ಎಂಬಲ್ಲಿ ಹರಿಯುವ ನದಿಯಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಇದರಲ್ಲಿದ್ದ ಸುಮಾರು ಒಂದೂವರೆ ಯೂನಿಟ್ ಮರಳು ಇದ್ದು ಅದರ ಅಂದಾಜು ಮೌಲ್ಯ ರೂ 6,000/- ಗಳಾಗಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ, ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ 2 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ
