
ಉಡುಪಿ : ಜಿಲ್ಲಾ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಮುಖಂಡ ಮಂಜುನಾಥ ಕೊಳ (ಮಂಜು ಕೊಳ) ಅವರಿಗೆ ಚೂರಿ ಇರಿದ ಘಟನೆ ಮಂಗಳ ವಾರ ರಾತ್ರಿ ಮಲ್ಪೆಯಲ್ಲಿ ನಡೆದಿದೆ.
ತೀವ್ರ ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜು ಕೊಳ ಅವರು ಮಂಗಳವಾರ ಬೀಚ್ ಬಳಿ ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿ ಮಾತುಕತೆಗೆ ಕರೆದಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಯುವಕ ಚೂರಿ ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಬಂಧನ
ಚೂರಿ ಇರಿತ ನಡೆಸಿದವನ ಬಂಧನ ಮಾಡಲಾಗಿದೆ. ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಇರಿತವಾಗಿದ್ದು ಇದರಲ್ಲಿ ಕೋಮು ಸಂಘರ್ಷ ಇಲ್ಲ. ಅದನ್ನು ತರುವ ಪ್ರಯತ್ನಕ್ಕೂ ಅವಕಾಶ ನೀಡುವುದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
