ಮಂಗಳೂರು : ‘ರಸ್ತೆ, ಒಳಚರಂಡಿಯಂತಹ ಸಮಸ್ಯೆ ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಜಿಸಿ, ಲವ್ ಜಿಹಾದ್ ತಡೆಯೋದಕ್ಕೆ ಮುಖ್ಯವಾಗಿ ಭಾರತಿಯ ಜನತಾ ಪಕ್ಷ ಬೇಕು ‘ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಸ್ತೆ, ಒಳಚರಂಡಿಯಂತಹ ಸಮಸ್ಯೆಗಳನ್ನು ಮಾತನಾಡುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಲವ್ ಜಿಹಾದ್‌ನಿಂದ ರಕ್ಷಿಸಿ ಎಂದು ಕರೆ ನೀಡಿದ್ದಾರೆ. ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ ಎಂದಿದ್ದಾರೆ. ಇನ್ನು ಲವ್ ಜಿಹಾದ್ ಇತ್ತೀಚೆಗೆ ಕಾಡುತ್ತಿರುವ ಬಹಳ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ. ಅದಕ್ಕೆ ಬಿಜೆಪಿಗೆ ಗೆಲ್ಲಿಸಿ ಅಧಿಕಾರ ನೀಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕ-ಯುವತಿಯರ ರಕ್ಷಣೆಗೆ ಬದ್ಧವಾಗಿದೆ ಎಂದರು.
ಇದೇ ವೇಳೇ ಡಿಕೆ ಶಿವಕುಮಾರ್ ಅವರ ವಿರುದ್ದ ಕಿಡಿಕಾರಿ, ಡಿಕೆ ಸಿಎಂ ಆದ್ರೆ ಉಗ್ರರು ರಸ್ತೆಗೆ ಬರ್ತಾರೆ, ಯೋಚನೆ ಮಾಡಿ ಅಂತ ಹೇಳಿದರು. ಇನ್ನೂ ಗೋಹತ್ಯೆ ನಿಷೇಧಿಸಿದ ಬಿಜೆಪಿ ಸರ್ಕಾರ ಲವ್ ಜಿಹಾದ್ ಕುರಿತಂತೆಯೂ ಕಾನೂನು ತರಲಿದೆ ಎಂದು ಹೇಳಿದರು.