

ಮಂಗಳೂರು: 2ಬಸ್ಸುಗಳ ನಡುವೆ ಪರಸ್ಪರ ಡಿಕ್ಕಿಯಾದ ಘಟನೆ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ಬಸ್ಸುಗಳು ಸಂಪೂರ್ಣ ನುಜ್ಜು ಗುಜ್ಜುವಾಗಿದ್ದು, 14 ವಿದ್ಯಾರ್ಥಿಗಳು ಸೇರಿ 25 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಮದ್ಯದಿಂದ ಚೆಲ್ಯಾರು ಕಡೆಗೆ ಒಂದು ಬಸ್ಸು ಪ್ರಯಾಣಿಸುತ್ತಿದ್ದಾಗ, ನಿರ್ಲಕ್ಷ್ಯದಿಂದ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ ಇನ್ನೊಂದು ಬಸ್ ಅದಕ್ಕೆ ಡಿಕ್ಕಿ ಹೊಡೆದಿದೆ.