ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೆಟ್ಟಂಪಾಡಿ ಪ.ಪೂ ಕಾಲೇಜಿನ ಉಪನ್ಯಾಸಕ ಮಹೇಶ್ ಇಂದು ಬೆಳಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪರ್ಲಡ್ಕ ನಿವಾಸಿಯಾಗಿರುವ ಮಹೇಶ್ ಅವರಿಗೆ ಇಂದು ಮುಂಜಾನೆ ಏಕಾಎಕಿ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಆದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಹೆಚ್ಚುತ್ತಿದ್ದು ವಸ್ಸಿನ ಮಿತಿ ಇಲ್ಲದೆ ಜನ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಯುವಕರಲ್ಲಿ ಹೃದಯಘಾತಗಳು ದಿನೇ ದಿನೇ ಹೆಚ್ಚುತ್ತಿದ್ದು ಧೃಡಕಾಯದ ವ್ಯಕ್ತಿಗಳು, ಮಕ್ಕಳು ಹೃದಯಾಘಾತಕ್ಕೆ ಬಲಿಯಾಗಿತ್ತಿರುವುದು ಆತಂಕ ತಂದಿದೆ.