ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ತುರವೇ ಮುಖಂಡ ಇಬ್ರಾಹಿಂ ಜಪ್ಪು ಒತ್ತಾಯ

ಮಂಗಳೂರು: ತುಳುನಾಡು ರಕ್ಷಣಾ ವೇದಿಕೆ ಸಮಾಲೋಚನ ಸಭೆ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಭೆಯು ದಿನಾಂಕ 02-07-2023 ರಂದು ಸಂಜೆ 4:00 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಮುಖಂಡರಾದ ಕ್ಲೀಟಸ್ ಲೋಬೊ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಸಭೆ ಉದ್ಘಾಟಿಸಿದರು. ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ 15ನೇ ವರ್ಷದ ಅಂಗವಾಗಿ ನಡೆಸಲು ಉದ್ದೇಶಿಸಿದ ವಿಶ್ವ ತುಳು ಸಮ್ಮೇಳನದ ಬಗ್ಗೆ ಕಾರ್ಯಕ್ರಮಗಳ ರೂಪರೇಷೆಗಳ ಕುರಿತು ಚರ್ಚಿಸಲಾಯಿತು ತುಳುನಾಡ ರಕ್ಷಣಾ ವೇದಿಕೆಯ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಹಾಗೂ ಪದಾಧಿಕಾರಿಗಳ ವ್ಯಕ್ತಿತ್ವ ವಿಕಸನ ಕುರಿತು ಒಂದು ದಿನದ ಕಾರ್ಯಗಾರ ನಡೆಸಲು ತೀರ್ಮಾನಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವು ಕಳೆದೆ ಎಂಟು ತಿಂಗಳಿನಿಂದ ಖಾಲಿಯಾಗಿದ್ದು ಅಕಾಡೆಮಿಯಲ್ಲಿ ಯಾವುದೇ ತುಳು ಸಾಹಿತ್ಯ ತುಳು ಭಾಷೆ ಸಂಬಂಧಿಸಿದ ಕಾರ್ಯಕ್ರಮಗಳು ನಿಂತು ಹೋಗಿದ್ದು ಸರಕಾರವು ಕೂಡಲೇ ಅಕಾಡೆಮಿ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲು ಮಾನ್ಯ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ತುರವೇ ಹಿರಿಯ ಉಪಾಧ್ಯಕ್ಷ ಜೆ. ಇಬ್ರಾಹಿಂ ಜಪ್ಪು ನೇತೃತ್ವದಲ್ಲಿ ನಿರ್ಣಯಿಸಲಾಯಿತು. ಈ ಸಭೆಯಲ್ಲಿ ತುರವೇ ಮುಖಂಡರುಗಳಾದ ಭಾಸ್ಕರ್ ಕಾಸರಗೋಡು ವಿವೇಕಾನಂದ ರಾವ್ . ಶಾರದ ಶೆಟ್ಟಿ ಕದ್ರಿ. ಪ್ರಶಾಂತ್ ಪೂಜಾರಿ ಮುಂತಾದವರು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಜ್ಯೋತಿ ಜೈನ್ , ಆಶಾ ಶೆಟ್ಟಿ ಅತ್ತಾವರ, ವಿಂದ್ಯಾ ಶೆಟ್ಟಿ, ನಾಗರಾಜ್ ಶೆಟ್ಟಿ ಸುರತ್ಕಲ್, ಶ್ರೀನಿವಾಸ ಶೆಟ್ಟಿ ಶಕ್ತಿನಗರ, ರೋಹಿನಿ ಕುಲಾಲ್ ಗೈಟನ್ ಡಿಸೋಜಾ, ರೋಷನ್ ಡಿಸೋಜಾ ಶೇಡಿಗುರಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು. ತುರವೇ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಸ್ವಾಗತಿಸಿ ಧನ್ಯವಾದ ಗೈದರು

Check Also

ಬೆಳ್ತಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಕಾರ್ಕಳದಲ್ಲಿ ಶವವಾಗಿ ಪತ್ತೆ..!

ಬೆಳ್ತಂಗಡಿ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ (35) ಕಾರ್ಕಳದ ನಲ್ಲೂರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುಧಾಕರ್ …

Leave a Reply

Your email address will not be published. Required fields are marked *

You cannot copy content of this page.