ಡ್ಯಾಶ್ ಹಾಡಿನ ಮೂಲಕ ಕೋಟಿ ಹೃದಯ ಗೆದ್ದ ಚಂದನ್ ಶೆಟ್ಟಿ

ಹೊಸ ವರ್ಷದ ಸಂಭ್ರಮಕ್ಕಾಗಿ  ಡಿಸೆಂಬರ್ ಕೊನೆಯಲ್ಲಿ  ‘ಸೂತ್ರಧಾರಿ’ ಚಿತ್ರದ ಡ್ಯಾಶ್ (Dash) ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ.  ಕಡಿಮೆ ಸಮಯದಲ್ಲೇ   ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ.

ಇತ್ತೀಚಿಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್,  ‘ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ ಚಿತ್ರದಲ್ಲಿ ಹಿಟ್ ಗೀತೆಯೊಂದು ಬರಬೇಕೆಂದು ಆಸೆಯಿತ್ತು.   ಈಗ ಇಡೇರಿದೆ. ಹೊಸ ವರ್ಷಕ್ಕಾಗಿಯೇ ಈ‌‌ ಸಾಂಗ್ ಮಾಡಿದ್ದೆವು.  ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿದ್ದು, ಆ ಹಾಡುಗಳು ಅದ್ಭುತವಾಗಿದೆ.  ಫೆಬ್ರವರಿಯಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತೇವೆ.  ಏಪ್ರಿಲ್, ಮೇನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದೇವೆ. ಈ ಒಂದು ಕೋಟಿ ವೀಕ್ಷಣೆಯ ಸಕ್ಸಸ್ ಚಿತ್ರತಂಡಕ್ಕೆ ಸಲ್ಲುತ್ತದೆ’ ಎಂದರು.

ಈ ಹಾಡನ್ನು ಬರೆದು,   ಸಂಗೀತ ಸಂಯೋಜಿಸುವ ಜೊತೆಗೆ ನಾಯಕನಾಗೂ ನಟಿಸಿರುವ ಚಂದನ್ ಶೆಟ್ಟಿ ಮಾತನಾಡಿ,  ‘ಸಾಂಗ್ ರಿಲೀಸ್ ಆದ ಮೂರು ವಾರದಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಮಾಧ್ಯಮಗಳ ಸಹಕಾರದಿಂದ. ಈ ಗೀತೆಗೆ ನಾನು ಹಾಗೂ  ಚೇತನ್ ಸೇರಿ ಸಾಹಿತ್ಯ ಬರೆದಿದ್ದೇವೆ’ ಎಂದರು. ‘ಪ್ರಾರಂಭದಲ್ಲಿ ನಿರ್ಮಾಪಕರಿಗೆ ಹಾಡು ಚೆನ್ನಾಗಿ ಬರಬೇಕು ಸರ್. ಇದೇ ಮೊದಲಬಾರಿ ನಾನು ಬೇರೆ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೆನೆ ಎಂದಿದ್ದೆ. ಇಂದು ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಸಂಜನಾ ಆನಂದ್.

ಈ ಗೀತೆ ನಮ್ಮ ಸಿನಿಮಾಗೆ ಆಮಂತ್ರಣ ಆಗಿದ್ದು, ಹಾಡು  ನೋಡಿ ಬಂದ ಜನರನ್ನು ಇಡೀ ಸಿನಿಮಾವನ್ನು ನೋಡುವ ಹಾಗೆ ಮಾಡುವ ಜವಾಬ್ದಾರಿ ನನ್ನದು  ಎಂದು ನಿರ್ದೇಶಕ ಕಿರಣ್ ಕುಮಾರ್   ತಿಳಿಸಿದರು. ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಮಾತನಾಡುತ್ತಾ, ಈ ಹಾಡು ಕೇವಲ ಎರಡು ದಿನಗಳಲ್ಲಿ ಆಗಿದೆ.   ನನ್ನ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್ ನ ೨ನೇ ಹಿಟ್  ಗೀತೆ ಇದು ಎಂದರು. ಈ ಸಂತಸದ ಸಮಾರಂಭದಲ್ಲಿ ನಟ ತಬಲಾನಾಣಿ, ಸೆಟ್ ವರ್ಕ್ ಮಾಡಿರುವ ಕಿರಣ್, ನಟಿ ಪಲ್ಲವಿ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಾಹಿತಿ ಕಿನ್ನಾಲ್ ರಾಜ್ ತಮ್ಮ ಅನುಭವ ಹಂಚಿಕೊಂಡರು. ಸಸ್ಪೆನ್ಸ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಈ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.

Check Also

ಊಟಿಗೆ ಹೋಗುವ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್; ಹೊಸ ರೂಲ್ಸ್ ಜಾರಿ; ಏನದು?

ಹನಿಮೂನ್‌ಗೆ ಬೆಸ್ಟ್‌ ಪ್ಲೇಸ್ ಅಂದ್ರೆ ಥಟ್ ಅಂತ ನೆನಪಾಗೋದು ಊಟಿ. ತಮಿಳುನಾಡಿನ ಬೆಟ್ಟಗಳ ರಾಣಿ, ನೀಲಗಿರಿ ತಪ್ಪಲಿನ ಉದಗಮಂಡಲಂ ಯಾರಿಗೆ …

Leave a Reply

Your email address will not be published. Required fields are marked *

You cannot copy content of this page.