ಮನೋರಂಜನೆ

ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದಲುತ್ತಿದ್ದ ದಕ್ಷಿಣ ಭಾರತದ ಹಿರಿಯ ನಟಿ ಲೀಲಾವತಿ ವಿಧಿವಶವಾಗಿದ್ದಾರೆ. 50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದ ಲೀಲಾವತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು.  

Read More »

ಬಿಗ್‌ ಬಾಸ್‌ ಸ್ಪರ್ಧಿ ತನಿಷಾ ವಿರುದ್ಧಎಫ್‌‌ಐಆರ್‌

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಲ್ಲಿ ಸ್ಪರ್ಧಿಯಾಗಿರುವ ನಟಿ ತನಿಷಾ ಕುಪ್ಪಂಡ ಅವರ ವಿರುದ್ಧ ಜಾತಿ ನಿಂದನೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪಿಸಿ ಅವರು ದೂರು ನೀಡಿದ್ದಾರೆ. ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

Read More »

ಗ್ರಹಚಾರ ಕೆಟ್ಟು ಮೊಸಳೆಯ ಬಾಯಿಗೆ ತನ್ನ ತಲೆಯಿಟ್ಟ ವ್ಯಕ್ತಿ, ಮುಂದೇನಾಯ್ತು ಇಲ್ಲಿ ನೋಡಿ!

ಮೃಗಾಲಯದ ರಕ್ಷಕನೊಬ್ಬ ಬಾಯ್ಬಿಟ್ಟು ಮಲಗಿದ್ದ ಮೊಸಳೆಯ ಬಾಯಿಗೆ ತನ್ನ ತಲೆಯಿಟ್ಟು ಎಡವಟ್ಟು ಮಾಡ್ಕೊಂಡ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗುತ್ತಿದೆ. ವಿಡಿಯೋದಲ್ಲಿ, ಮೊಸಳೆಯೊಂದು ಬಾಯ್ಬಿಟ್ಟು ಮಲಗಿದೆ. ಈ ವೇಳೆ, ಮೃಗಾಲಯದ ರಕ್ಷಕನೊಬ್ಬ ಅದರ ಬಾಯೊಳಕ್ಕೆ ತನ್ನ ತಲೆಯನ್ನಿಟ್ಟಿದ್ದಾನೆ. ಸ್ವಲ್ಪ ಸಮಯ ಸುಮ್ಮನೇ ಇದ್ದ ಮೊಸಳೆ ಇದ್ದಕ್ಕಿದ್ದಂತೆ ತಲೆಯನ್ನು ಕಚ್ಚಿದೆ. ಆದ್ರೆ, ಆದರೆ ಅದೃಷ್ಟವಶಾತ್, ಕೆಲವು ಸೆಕೆಂಡುಗಳ ನಂತರ ಮೊಸಳೆ ಮತ್ತೆ ನೀರಿಗೆ ಜಾರಿದೆ. ಈ ವೇಳೆ ಗಾಯಗೊಂಡ ವ್ಯಕ್ತಿ ಏನೂ ಮಾಡಲಾಗದೇ ನೋವಿನಿಂದ ಸುಮ್ಮನೆ ಕುಳಿತುಕೊಳ್ಳುವುದನ್ನು ನೋಡಬಹುದು.

Read More »

ಡ್ಯಾಶ್ ಹಾಡಿನ ಮೂಲಕ ಕೋಟಿ ಹೃದಯ ಗೆದ್ದ ಚಂದನ್ ಶೆಟ್ಟಿ

ಹೊಸ ವರ್ಷದ ಸಂಭ್ರಮಕ್ಕಾಗಿ  ಡಿಸೆಂಬರ್ ಕೊನೆಯಲ್ಲಿ  ‘ಸೂತ್ರಧಾರಿ’ ಚಿತ್ರದ ಡ್ಯಾಶ್ (Dash) ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ.  ಕಡಿಮೆ ಸಮಯದಲ್ಲೇ   ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ. ಇತ್ತೀಚಿಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್,  ‘ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ …

Read More »

ಬಟ್ಟೆ ಇಲ್ಲದೆ ಕೆಸರಿನಲ್ಲಿ ಉರುಳಾಡಿ ಫೋಟೋಶೂಟ್ ಮಾಡಿಸಿದ ನವ ಜೋಡಿ..! ಫೋಟೋಸ್ ಇಲ್ಲಿವೆ ನೋಡಿ

ಇಂದು ಜನರ ಅಭಿರುಚಿ ಬಹಳ ವಿಭಿನ್ನವಾಗಿದೆ. ಎಲ್ಲಾ ವಿಷಯದಲ್ಲೂ ಹೊಸತನ್ನು ಹುಡುಕುತ್ತಾರೆ ಜನರು. ಅದರಲ್ಲೂ ಸಾಮಾಜಿಕ ಜಾಲತಾಣಗಳ ಪರಿಣಾಮದಿಂದಾಗಿ ಜನರು ವಿಶೇಷ ಫೋಟೋ ಶೂಟ್ ವಿಡಿಯೋ ಮೊದಲಾದವುಗಳಿಗೆ ಹೆಚ್ಚು ಮಾರುಹೋಗಿದ್ದಾರೆ. ಹಾಗಾಗಿಯೇ ಇಂದು ಪ್ರತಿಯೊಬ್ಬರು ತಮ್ಮ ಜೀವನದ ವಿಶೇಷ ಗಳಿಗೆಗಳನ್ನ ಸೆರೆಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಮರೆಯಲಾಗದ ಹಾಗೂ ನೆನಪಿನಲ್ಲಿ ಇರುವಂತಹ ಅತ್ಯುತ್ತಮ ಘಳಿಗೆ ಅಂದ್ರೆ ಅದು ಮದುವೆ. ಹಾಗಾಗಿ ಮದುವೆಯ ಸಂದರ್ಭದಲ್ಲಿ ಅಥವಾ ಮದುವೆ ಗೊತ್ತಾದ ನಂತರದ ಪ್ರತಿಯೊಂದು ಕ್ಷಣವನ್ನು ಮೆಮೊರೇಬಲ್ ಆಗಿ ಇಡಲು ಜನ ಪ್ರಯತ್ನಿಸುತ್ತಾರೆ. …

Read More »

ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಹಾಟ್​ ಲುಕ್​ ಕೊಟ್ಟ ನಟಿ ಜಾಹ್ನವಿ ಕಪೂರ್

ಮಾಲ್ಡೀವ್ಸ್ : ಮತ್ತೆ ಸೆಲೆಬ್ರೆಟಿಗಳ ಮಾಲ್ಡೀವ್ಸ್ ಪ್ರವಾಸ ಆರಂಭಗೊಂಡಿದ್ದು, ಇದೀಗ ಶ್ರೀದೇವಿ ಮಗಳ ನಟಿ ಜಾಹ್ನವಿ ಕಪೂರ್​ ಮಾಲ್ಡೀವ್ಸ್ ಸಮುದ್ರ ಕಿನಾರೆಯಲ್ಲಿ ಬಿಕಿನಿಯಲ್ಲಿ ಹಾಟ್​ ಫೋಸ್​​ ನೀಡಿದ್ದಾರೆ. ಹಸಿರು ಬಣ್ಣದ ಬಿಕಿನಿಯಲ್ಲಿ ಜಾಹ್ನವಿ ಕಪೂರ್​ ಮಿಂಚಿದ್ದು, ನಟಿಯ ಬೋಲ್ಡ್​​ ಅವತಾರ ನೋಡಿ ಪಡ್ಡೆ ಹುಡುಗರು ಹೌಹಾರಿದ್ದಾರೆ. ಇನ್ಸ್ಟಾಗ್ರಾಮ್​ ಫೋಟೋಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದು, ‘ನಾನು ಕಳೆದ 24 ಗಂಟೆಗಳು ತುಂಬಾ ವಿನೋದಮಯವಾಗಿತ್ತು’ ಎಂದಿದ್ದಾರೆ. https://www.instagram.com/p/Cl87NFAsDDd/?igshid=ZTA1ZTQyMGU=

Read More »

ಮಂಗಳೂರಿನಲ್ಲಿ ಸ್ಫೋಟಗೊಂಡ ಕುಕ್ಕರ್ ಬಾಂಬ್ ಇದೀಗ ಯಕ್ಷಗಾನದಲ್ಲೂ ಹಾಸ್ಯ ರೂಪದಲ್ಲಿ ವೈರಲ್

ಮುಲ್ಕಿ: ಮಂಗಳೂರಿನಲ್ಲಿ ಸ್ಫೋಟಗೊಂಡ ಕುಕ್ಕರ್ ಬಾಂಬ್ ಇದೀಗ ಯಕ್ಷಗಾನದಲ್ಲೂ ಹಾಸ್ಯ ರೂಪದಲ್ಲಿ ಸುದ್ದಿಯಾಗುತ್ತಿರುವುದು ಮಾತ್ರವಲ್ಲದೆ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಪ್ಪನಾಡು ಮೇಳದ ಭಂಡಾರ ಚಾವಡಿ ಪ್ರಸಂಗದಲ್ಲಿ ಕೊಡಪದವು ದಿನೇಶ್ ಮತ್ತು ನಂದಿಕೂರು ರಾಮ ಕೃಷ್ಣ ಅವರ ಸಂಭಾಷಣೆಯಲ್ಲಿ ಕೊಡಪದವು ತನ್ನ ಚೀಲದಿಂದ ಒಂದೊಂದೇ ವಸ್ತುಗಳನ್ನು ತೆಗೆದು ನಂತರ ಕುಕ್ಕರ್ ತೆಗೆಯುವಾಗ ನಂದಿಕೂರು ರಾಮಕೃಷ್ಣ ಹೆದರಿ ಒಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಡಪದವು ದಿನೇಶ್ ಖ್ಯಾತ ಹಾಸ್ಯಗಾರರಲ್ಲಿ ಒಬ್ಬರಾಗಿದ್ದು, ಪ್ರತೀ ವರ್ಷ ಬಪ್ಪನಾಡು ಯಕ್ಷಗಾನ ಮೇಳದಲ್ಲಿ …

Read More »

ವಿಮಾನದಲ್ಲಿ ಬಾಲಕಿ ಮಾಡಿದ ಕಿಲಾಡಿ ಕೆಲಸಕ್ಕೆ ಅಪ್ಪ-ಅಮ್ಮ ಸುಸ್ತು

ಚಿಕ್ಕ ಮಕ್ಕಳೊಂದಿಗೆ ಪ್ರವಾಸ ಹೋಗುವುದು ಎಂದರೆ ಪ್ರಯಾಸದ ಕೆಲಸವೇ. ಅದರಲ್ಲಿಯೂ ವಿಮಾನದಲ್ಲಿ ಇವರ ಜತೆ ಪ್ರಯಾಣಿಸುವುದು ಎಂದರೆ ಅದು ಬಲು ಕಷ್ಟ. ಹಲವು ತುಂಟ ಮಕ್ಕಳನ್ನು ಸಂಭಾಳಿಸುವುದೇ ಬಲು ಕಷ್ಟ. ದೂರದ ಪ್ರಯಾಣವಾಗಿದ್ದರೆ ವಿಮಾನಗಳಲ್ಲಿ ಮಕ್ಕಳು ಕಿರಿಕಿರಿ ಮಾಡುತ್ತಾರೆ, ಅದು ಹಲವರಿಗೆ ಹಿಂಸೆಯೂ ಆಗುತ್ತದೆ. ಅಂಥದ್ದೇ ಒಂದು ಕಿಲಾಡಿ ಬಾಲಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಎಂಟು ವರ್ಷದ ಕಿಲಾಡಿ ಬಾಲಕಿಯೊಬ್ಬಳು ಅಪ್ಪ-ಅಮ್ಮನಿಗೆ ತೊಂದರೆ ಕೊಡುತ್ತಾಳೆ ಎಂದು ಅವಳು ಹೇಳಿದಂತೆ ಆಕೆಗೆ ವಿಮಾನದಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು ಅವರು. ಆದರೆ ಆಕೆ ಮಾಡಿದ …

Read More »

ಶೀತಲ್ ಟ್ರಾವೆಲ್ಸ್ ಸಂಸ್ಥೆಯ ನೂತನ Sheethal Holiday’s ಲೋಕಾರ್ಪಣೆ

ಮಲ್ಟಿ ಸ್ಪೆಷಾಲಿಟಿ ಬಸ್‌ ಸಂಸ್ಥೆಯಲ್ಲಿ ಹೆಸರುವಾಸಿಯಾಗಿರುವ ಶೀತಲ್‌ ಟ್ರಾವೆಲ್ಸ್‌ ಇದೀಗ ಹೊಸತೊಂದು ಹೆಜ್ಜೆಗೆ ಮುಂದಾಗಿದೆ. ಹೌದು,ಶೀತಲ್‌ ಟ್ರಾವೆಲ್ಸ್‌ ಸಂಸ್ಥೆಯು, ಶೀತಲ್‌ holidays ಎಂಬ ನೂತನ ಟಿಟಿ ವಾಹನವನ್ನು ಲೋಕಾರ್ಪಣೆಗೊಳಿಸಿದೆ. ಪ್ರವಾಸ.ಯಾತ್ರೆ,ಪುಣ್ಯಕ್ಷೇತ್ರಗಳನ್ನು ಇನ್ನು ಮುಂದೆ ಈ ವಾಹನದಲ್ಲಿ ಸುಗಮವಾಗಿ ಸಂಚರಿಸಬಹುದು. ಅದೇ ರೀತಿ ಈ ವಾಹನದಲ್ಲಿ ಒಟ್ಟು 14 ಮಂದಿ ಸುಗಮವಾಗಿ ಸಂಚರಿಸುವ ಸೀಟ್‌ ಗಳಿದ್ದು,ಎಸಿ,ನಾನ್‌ ಎಸಿ ಕೂಡ ಲಭ್ಯವಿದೆ. ಅಲ್ಲದೇ ಮ್ಯೂಸಿಕ್‌ ಸಿಸ್ಟಮ್‌,ಟಿವಿ ಸೇರಿದಂತೆ ಹಲವಾರು ವಿಭಿನ್ನತೆಗಳನ್ನು ಈ ಟಿಟಿ ವಾಹನ ಒಳಗೊಂಡಿದೆ. ಯಾತ್ರಾರ್ಥಿಗಳಿಗೆ 1 day ಪ್ಯಾಕೇಜ್‌, 2 day ಪ್ಯಾಕೇಜ್‌ ಸೇರಿದಂತೆ …

Read More »

ಉಡುಪಿ: ಹಿತಾ ಸುವರ್ಣ ‘ಮಿಸ್ ತುಳುನಾಡು-2022′ ಪ್ರಶಸ್ತಿ

ಉಡುಪಿಯಲ್ಲಿ ನಡೆದ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಹಿತಾ ಸುವರ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಉಡುಪಿಯ ಹೋಟೆಲ್ ಮಣಿಪಾಲ್ ಇನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಮಿಸ್ ತುಳುನಾಡು”  ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ  ಮಾಡುತ್ತಿರುವ ಹಿತಾ ಸುವರ್ಣ  –“2022 ಮಿಸ್ ತುಳುನಾಡು”ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಉಡುಪಿಯ ಜನತೆಗೆ ಹೆಮ್ಮೆ ತಂದು ಕೊಟ್ಟಿದೆ.

Read More »

You cannot copy content of this page.