

ಕೊಡಗು : ಮಡಿಕೇರಿಯಿಂದ ಅಯ್ಯಪ್ಪಸ್ವಾಮಿ ಮಾಲೆಯನ್ನು ಧರಿಸಿ ಶಬರಿಮಲೆಗೆ ಹೋಗಿದ್ದ ಯುವಕನೊಬ್ಬ ಸಮುದ್ರ ಪಾಲಾದ ಘಟನೆ ಕೇರಳದ ಕಣ್ಣೂರು ಬೀಚ್ ನಲ್ಲಿ ನಡೆದಿದೆ.
ಮೃತನನ್ನು ಮಡಿಕೇರಿ ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಎಂದು ಗುರುತಿಸಲಾಗಿದೆ.
ಶಬರಿಮಲೆಯಿಂದ ವಾಪಸ್ ಆಗುವ ವೇಳೆ ಕಣ್ಣೂರು ಬೀಚ್ ಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಮುಳುಗಿ ಶಶಾಂಕ್ ಮೃತಪಟ್ಟಿದ್ದಾನೆ.
ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿ ಹೋಗುತ್ತಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಕೇರಳದ ಕಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.