ಕರಕುಶಲ ಕರ್ಮಿಗಳಿಗೆ ಸಿಹಿ ಸುದ್ದಿ, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿ

ವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷದ ನಮ್ಮ ಬೆಳವಣಿಗೆಯನ್ನು 7.0% ಎಂದು ಅಂದಾಜಿಸಲಾಗಿದೆ, ಇದು ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದ ಉಂಟಾದ ಬೃಹತ್ ಜಾಗತಿಕ ಮಂದಗತಿಯ ಹೊರತಾಗಿಯೂ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ ಅಂತ ತಿಳಿಸಿದರು.

 

ಇದೇ ವೇಳೆ ಬಜೆಟ್‌ ಮಂಡನೆಗೂ ಮುನ್ನ ಭಾರತದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್‌ಗೆ ಸಂಬಂಧಪಟ್ಟಂತೆ ಭೇಟಿ ಮಾಡಿದರು. ಬಳಿಕ ಅವರು ಸಂಸತ್ತು ಭವನಕ್ಕೆ ತೆರಳಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಭಾಗವಹಿಸಿ ಸಚಿವ ಸಂಪುಟವನ್ನು ಮುಗಿಸಿ ನೇರವಾಗಿ ಬಜೆಟ್‌ ಕಲಾಪಕ್ಕೆ ಆಗಮಿಸಿದರು. ಬಜೆಟ್‌ ಮಂಡನೆಗೂ ಮುನ್ನ ಮಾತನಾಡಿದ ಅವರು ಅಮೃತ ಕಾಲದ ಮೊದಲ ಬಜೆಟ್‌ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಅಂತ ತಿಳಿಸಿದರು. ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯುವಾಗಿದೆ. ಇದಲ್ಲದೇ ಕೋವಿನ್‌, ಆಧಾರ್‌, ಯುಪಿಐ ವಿಶ್ವದ ಮಾನ್ಯತೆಯನ್ನು ಪಡೆದುಕೊಂಡಿದೆ ಅಂತ ತಿಳಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳವರೆಗೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದೇ ವೇಳೆ ಅವರು ಗರೀಬ್‌ ಕಲ್ಯಾಣ ಯೋಜನೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಅಂತ ತಿಳಿಸಿದರು.

ಇದೇ ವೇಳೆ ಅವರು ಮಾತನಾಡಿ, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿ ಮಾಡಲಾಗುವುದು ಅಂತ ತಿಳಿಸಿದರು. ಪ್ರಧಾನಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ನೆರವು ನೀಡಲಾಗುವುದು ಅಂತ ತಿಳಿಸಿದರು.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.