

ಉಡುಪಿ: ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೋಟ ಠಾಣೆಯಲ್ಲಿದ್ದ ಪುಷ್ಪಾ ಅವರನ್ನು ಕುಮಟಾ ಠಾಣೆಗೆ, ಕುಂದಾಪುರ ಸಂಚಾರ ಠಾಣೆಯ ಸುಬ್ಬ ಬಿ. ಅವರನ್ನು ಹೊನ್ನಾವರ ಠಾಣೆಗೆ, ಉಡುಪಿ ಸೆನ್ ಅಪರಾಧ ಠಾಣೆಯ ಲಕ್ಷ್ಮಣ ಪಿ. ಅವರನ್ನು ಅಜೆಕಾರ್ ಠಾಣೆಗೆ, ಉಡುಪಿ ಸಂಚಾರ ಠಾಣೆಯ ಸಕ್ತಿವೇಲು ಇ ಅವರನ್ನು ಗೋಕರ್ಣ ಠಾಣೆಗೆ ವರ್ಗಾಯಿಸಲಾಗಿದೆ.
ಉಡುಪಿ ಸಂಚಾರ ಠಾಣೆಯ ಶೇಖರ- ಚಿಕ್ಕಮಗಳೂರಿನ ಎನ್.ಆರ್ ಪುರ, ಉಡುಪಿ ಮಹಿಳಾ ಠಾಣೆಯ ವೈಲೆಟ್ ಫೆಮಿನಾ- ಹೊನ್ನಾವರ, ಮಣಿಪಾಲ ಠಾಣೆಯ ಅಬ್ದುಲ್ ಖಾದರ್- ಉತ್ತರ ಕನ್ನಡ ಸೆನ್ ಅಪರಾಧ, ಮಣಿಪಾಲ ಠಾಣೆಯ ಸುಧಾಕರ ತೋನ್ಸೆ- ಉಪ್ಪಿನಂಗಡಿ, ಬ್ರಹ್ಮಾವರ ಠಾಣೆಯ ರಾಜಶೇಖರ ವಂದಲಿ- ಪುತ್ತೂರು ಸಂಚಾರ, ಕಾರ್ಕಳ ನಗರ ಠಾಣೆಯ ದಾಮೋದರ ಕೆ.ಬಿ.- ಸೆನ್ ಅಪರಾಧ ಠಾಣೆ ಉಡುಪಿ, ಹೆಬ್ರಿ ಠಾಣೆಯ ಸುದರ್ಶನ ದೊಡ್ಡಮನಿ- ಶಂಕರನಾರಾಯಣ, ಮಲ್ಪೆ ಠಾಣೆಯ ಸುಷ್ಮಾ ಜೆ.ಭಂಡಾರಿ- ಮಹಿಳಾ ಠಾಣಿ ಉಡುಪಿ, ಕಾಪು ಠಾಣೆಯ ಶ್ರೀಶೈಲ ದುಂಡಪ್ಪ ಮುರಗೋಡ- ವೇಣೂರು, ಭಟ್ಕಳ ನಗರ ಠಾಣೆಯ ವೀಣಾ ರಾಮಚಂದ್ರ ಚಿತ್ರಾಪುರ- ಉಪ್ಪಿನಂಗಡಿ, ಹೊನ್ನಾವರ ಠಾಣೆಯ ಮಹಂತೇಶ್ ಉದಯ್ ನಾಯ್ಕ್- ಅವರನ್ನು ಬ್ರಹ್ಮಾವರ ಠಾಣೆಗೆ ವರ್ಗಾಯಿಸಲಾಗಿದೆ.