May 30, 2025 8:33:37 AM
WhatsApp Image 2023-02-23 at 5.09.51 PM

ಫೆ. 10 ರಂದು ಬಿಡುಗಡೆಯಾಗಬೇಕಿದ್ದ ತುಳು ಚಲನಚಿತ್ರ ”ಪಿಲಿ” ಸಿನಿಮಾಕ್ಕೆ ತಡೆಯುಂಟಾಗಿದ್ದು ಇದೀಗ ಫೆ.24 ರಂದು ಮತ್ತೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಬಿಡುಗಡೆಗೆ ತಡೆಯುಂಟಾಗಿತ್ತು. ಇದಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಹಲವಾರು ತುಳುನಾಡಿನ ಗಣ್ಯರು ಕಾನೂನಾತ್ಮಕ ಹೋರಾಟ‌ ನಡೆಸಿದ್ದರ ಪರಿಣಾಮ ಪಿಲಿ ಚಿತ್ರ ಬಿಡುಗಡೆಗೆ ಎದುರಾಗಿದ್ದ ಆತಂಕ ಈಗ ನಿವಾರಣೆಯಾಗಿದೆ.‌ ಹೀಗಾಗಿ ಫೆಬ್ರವರಿ 24 ರಂದು ಈ ಹಿಂದಿನ ಸಿದ್ಧತೆಯಂತೆ, ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>