Uncategorized

ಬಂಟ್ವಾಳ-ವೇಣೂರು ಸಂಚಾರ ವಿಳಂಬ ಸಾಧ್ಯತೆಕುದ್ರೋಳಿ ಕ್ರಾಸ್ ಬಳಿ ರಸ್ತೆಗೆ ಅಡ್ಡಬಿದ್ದ ಬೃಹತ್ ಮರ

ಆರಂಬೋಡಿ: ಬಂಟ್ವಾಳ-ಮೂಡುಬಿದಿರೆ ರಸ್ತೆಯ ಕುದ್ರೋಳಿ ಕ್ರಾಸ್ ಬಳಿ ಬೃಹತ್ ಮರವೊಂದು ಇಂದು ಸಂಜೆ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಂಟ್ವಾಳದಿಂದ ಸಿದ್ದಕಟ್ಟೆ ಮಾರ್ಗವಾಗಿ ಆರಂಬೋಡಿ, ವೇಣೂರಿಗೆ ಬರುವ ವಾಹನಗಳು ವಿಳಂಬವಾಗುವ ಸಾಧ್ಯತೆ ಇದೆ. ಮರದ ತೆರವು ಕಾರ್ಯ ಆರಂಭವಾಗಿದೆ.

Read More »

ಹೊಸ್ಮಾರ್‌ನಲ್ಲಿ ಸುನೀಲ್ ಕುಮಾರ್ ಪರ ಬಿಜೆಪಿ ಕಾರ್ಯಕರ್ತರ ಭರ್ಜರಿ ಮತಭೇಟೆ!

ಹೊಸ್ಮಾರು, ಎ. 26: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪರ ಹೊಸ್ಮಾರಿನ ಬಿಜೆಪಿ ಕಾರ್ಯಕರ್ತರು ಮನೆ, ಅಂಗಡಿ, ಮಳಿಗೆಗಳಿಗೆ ತೆರಳಿ ಭರ್ಜರಿ ಮತಭೇಟೆ ನಡೆಸಿದರು.ಅಮಿತ್ ಜೈನ್ ಮುಂದಾಳತ್ವದಲ್ಲಿ ಕಾರ್ಯಕರ್ತರು ಬಿರುಸಿನ ಮತಯಾಚನೆ ನಡೆಸಿದ್ದು, ಸಚಿವ ಸುನಿಲ್ ಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿದರು.

Read More »

ವೇಣೂರು, ಅಳದಂಗಡಿ ಪರಿಸರದಲ್ಲಿ ತುಂತುರು ಮಳೆ

ವೇಣೂರು/ಅಳದಂಗಡಿ: ಇಂದು ಬೆಳಿಗ್ಗೆಯಿಂದಲೇ ಮೋಡಕವಿದ ವಾತಾರವಣವಿದ್ದರೂ ವೇಣೂರು ಹೋಬಳಿಯ ಕೆಲವೆಡೆ ಇದೀಗ ತುಂತುರು ಮಳೆಯಾಗಿದೆ.ಮೋಡ ಕವಿದ ವಾತಾವರಣದ ಜತೆಗೆ ಹೆಚ್ಚಿನ ಸೆಖೆ ಇತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿದರೂ ಮಳೆಯಾಗಲಿಲ್ಲ. ವೇಣೂರು ಹಾಗೂ ಅಳದಂಗಡಿ ಪರಿಸರಲ್ಲಿ ತುಂತುರು ಮಳೆಯಷ್ಟೇ ಆಗಿದೆ. ಇದರಿಂದಾಗಿ ಜನ ಮತ್ತಷ್ಟು ಸೆಖೆ ಅನುಭವಿಸುವಂತಾಗಿದೆ.

Read More »

ಬೆಳ್ತಂಗಡಿ ತಾ.ನ ಅಲ್ಲಲ್ಲಿ ಮಳೆ

ಬೆಳ್ತಂಗಡಿ : ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಲಾಯಿಲ, ದಿಡುಪೆ, ನಡ,ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮಗಳ ಜನತೆಗೆ ಮಂಗಳವಾರ ಸುರಿದ ಸಾಮಾನ್ಯ ಮಳೆ ಒಂದಿಷ್ಟು ತಂಪೆರಯಿತು.ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸಾಮಾನ್ಯವಾಗಿ ಸುರಿಯಿತು.ಉಳಿದ ಕೆಲವು‌ ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ.ಏ.7ರಂದು ತಾಲೂಕಿನ ಹಲವೆಡೆ ಗಾಳಿ,ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು.ಮತ್ತೆ 18ದಿನಗಳ ಬಳಿಕ ಮಂಗಳವಾರ ಮಳೆ ಸುರಿದಿದೆ.ಈಗಾಗಲೇ ತಾಲೂಕಿನ ಹಲವೆಡೆ ನೀರಿನ ತೊಂದರೆ ಕಂಡು ಬಂದಿದ್ದು ಜನತೆಗೆ ಸಮಸ್ಯೆ …

Read More »

ಮುದ್ದಾಡಿ ಕ್ಷೇತ್ರ: ಧ್ವಜಾವರೋಹಣದೊಂದಿಗೆ ಇಂದು ಸಂಪನ್ನಗೊಂಡ ವಾರ್ಷಿಕ ಜಾತ್ರೆ

ವೇಣೂರು, ಎ. 25: ಬಜಿರೆ ಶ್ರೀ ಕ್ಷೇತ್ರ ಮುದ್ದಾಡಿ ಶ್ರೀ ಮಾರವಾಂಡಿ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವವು ಎ. 25ರ ಬೆಳಿಗ್ಗೆ ಸಂಪನ್ನಗೊಂಡಿತು.ಎ. 23ರಂದು ಬೆಳಿಗ್ಗೆ ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಶುದ್ಧ ಕಲಶ, ಪ್ರತಿಷ್ಠೆ, ಸಂಜೆ ಮಾರವಾಂಡಿ ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಲುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಿತು. ಎ. 24ರಂದು ಸಂಜೆ ಬಲಿ ಉತ್ಸವ, ಧಾರ್ಮಿಕಸಭೆ ಜರಗಿತು. ಬಳಿಕ ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಿತು. ಇಂದು ಬೆಳಗ್ಗಿನ ಜಾವ ಧ್ವಜಾವರೋಹಣದೊಂದಿಗೆ ಜಾತ್ರೆ ಸಂಪನ್ನಗೊಂಡಿತು. …

Read More »

ವೇಣೂರು ದೇವಸ್ಥಾನಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆಯಿತು ಚಂಡಿಕಾಯಾಗ

ವೇಣೂರು, ಎ. 25: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಚಂಡಿಕಾಯಾಗ ಮತ್ತು ೧೦೦೮ ಹೂವಿನಪೂಜೆ ನಡೆಯಿತು.ತಂತ್ರಿವರ್ಯರಾದ ಶ್ರೀಪಾದ ಪಾಂಗಣ್ಣಾಯರು ಮತ್ತು ದೇಗುಲದ ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್‌ರವರ ಪೌರೋಹಿತ್ಯದಲ್ಲಿ ನಡೆದ ಧಾರ್ಮಿಕ ವಿಧಾನಗಳು ಜರಗಿದವು. ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಧಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Read More »

ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ನೇಮಕವಾದ ಗಂಗಾಧರ ಗೌಡರಿಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಶಾಕ್!

ಬೆಳ್ತಂಗಡಿ, ಎ. 24: ಮಾಜಿ ಸಚಿವ ಕೆ. ಗಂಗಾಧರ ಗೌಡ ವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ನೇಮಕವಾಗಿ ಖುಷಿಯಲ್ಲಿದ್ದ ಗೌಡರಿಗೆ ಐಟಿ ಶಾಕ್ ನೀಡಿದೆ.ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೆಲ ವರ್ಷಗಳಿಂದ ರಾಜಕೀಯವಾಗಿ ತಟಸ್ಥವಾಗಿದ್ದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ಲಭಿಸುತ್ತಲೇ ರಾಜಕೀಯ ಓಡಾಟದಿಂದ ಮತ್ತೆ ಹಿಂದೆ ಸರಿದಿದ್ದರು. ಇದೀಗ ಐಟಿ …

Read More »

ಮರೋಡಿ ದೇವಸ್ಥಾನ: ನಾಳೆ ಪ್ರತಿಷ್ಠಾ ಮಹೋತ್ಸವ

ಮರೋಡಿ, ಎ. 24: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ ಪ್ರತಿಷ್ಠಾ ಮಹೋತ್ಸವ ಎ. 25ರಂದು ನಡೆಯಲಿದೆ.ಬೆಳಿಗ್ಗೆ 9-00ರಿಂದ ಚಂಡಿಕಾಯಾಗ, ಮೃತ್ಯುಂಜಯ ಹೋಮ, ಧನ್ವಂತರಿ ಹೋಮ, 108 ಸೀಯಾಳ ಅಭಿಷೇಕ ಹಮ್ಮಿಕೊಳ್ಳಲಾಗಿದೆ.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನqಯಲಿದೆ. ರಾತ್ರಿ 6 ಗಂಟೆಗೆ ಶ್ರೀಮತಿ ದೀಪಾ ಮತ್ತು ದೇವೇಂದ್ರ ಹೆಗ್ಡೆ ಕೊಕ್ರಾಡಿ ಕೊಡಂಗೆಗುತ್ತು ಅವರ ಸೇವಾರ್ಥ ಶ್ರೀ ಉಮಾಮಹೇಶ್ವರ ದೇವರಿಗೆ ರಂಗಪೂಜೆ ನಡೆಯಲಿದೆ.ಈ ಪುಣ್ಯ ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ …

Read More »

ಮರೋಡಿ: ಸಾರ್ವಜನಿಕ ಶನೈಶ್ವರ ಪೂಜೆ-ಧಾರ್ಮಿಕಸಭೆ

ಮರೋಡಿ, ಎ. 23: ಭಾರತದ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಗಳು ನಿರಂತರವಾಗಿ ದಾಳಿ ನಡೆಸಿದರೂ ನಮ್ಮ ನೆಲದ ಸಂಸ್ಕೃತಿ ಇನ್ನೂ ಶ್ರೀಮಂತವಾಗಿದೆ. ಇದನ್ನು ನಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಧರ್ಮ ಕಟ್ಟುವ, ಸಮಾಜ ಕಟ್ಟುವ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು. ಮರೋಡಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ ವತಿಯಿಂದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶನಿವಾರ ಆಯೋಜಿಸಿದ್ದ ೯ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯ ಧಾರ್ಮಿಕ ಸಭೆಯಲ್ಲಿ …

Read More »

ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಚಾಲನೆ, 33.1 ಕಿ.ಮೀ. ವ್ಯಾಪಿ, ರೂ. 700 ಕೋಟಿಯ ಯೋಜನೆ

ಬೆಳ್ತಂಗಡಿ, ಎ. 23: ಸುಮಾರು 700 ಕೋಟಿ ರೂ. ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ 33.1 ಕಿಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.ಇದರ ಅಂಗವಾಗಿ ಸಾಕಷ್ಟು ಸಮೀಕ್ಷೆಗಳು ನಡೆದಿದ್ದು, ರಸ್ತೆ ಅಗಲೀಕರಣದ ವೇಳೆ ತೆರವುಗೊಳ್ಳಬೇಕಾದ ಮರ, ಕಟ್ಟಡಗಳ ಗುರುತಿಸುವಿಕೆ ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣದ ರೂಪುರೇಷೆ ಇತ್ಯಾದಿ ಸಿದ್ದಗೊಂಡಿದೆ. ರಸ್ತೆ ವ್ಯಾಪ್ತಿಯನ್ನು ಗುರುತಿಸಿ ಸರಕಾರಿ ಜಾಗದ ಮೂಲಕ ಹಾದು ಹೋಗುವ ರಸ್ತೆಯ ಸ್ಥಳಗಳ ಗಿಡಗಂಟಿ ತೆರವು ಕೆಲಸವು ಪೂರ್ಣಗೊಂಡಿದೆ. ಈಗ ಮುಂಡಾಜೆ ಗ್ರಾಮದ ಸೀಟು ಪ್ರದೇಶದಲ್ಲಿ ರಸ್ತೆಯನ್ನು ಅಗಲಗೊಳಿಸುವ ಕೆಲಸ ನಡೆಯುತ್ತಿದೆ. …

Read More »

You cannot copy content of this page.