Uncategorized

ಪಡ್ಡಂದಡ್ಕಗೆ ಮೇ 27ಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಹೊಸಂಗಡಿ, ಮೇ 25: ಪಡ್ಡಂದಡ್ಕ ಶ್ರೀ ಮಂಜುನಾಥೇಶ್ವರ ಭಜನ ಮಂಡಳಿ (ರಿ.) ಇದರ ವತಿಯಿಂದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ನಿಶಿಪೂರ್ಣ ಭಜನಾ ಕಾರ್ಯಕ್ರಮ ಹಾಗೂ ಗ್ರಾಮ ಭಜನಾ ಮಂಗಳೋತ್ಸವವು ಮೇ 27ರಂದು ಸಂಜೆ 4 ಗಂಟೆಯಿಂದ ಜರಗಲಿದ್ದು, ಈ ಕಾರ್ಯಕ್ರಮಕ್ಕೆ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲರವರು ಭೇಟಿ ನೀಡಲಿದ್ದಾರೆ.ಈ ಸಂದರ್ಭ ಹಿಂದೂಸಮಾಜದ ಬಂಧುಗಳು, ಹಿಂದೂಕಾರ್ಯಕರ್ತರು, ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಕಟ್ಟೆ-ಪಡ್ಡಂದಡ್ಕ ಅವರ ಪ್ರಕಟಣೆ ತಿಳಿಸಿದೆ.

Read More »

ಕಟೀಲು ದೇವಸ್ಥಾನದ ಎದುರೇ ಹೊತ್ತಿಉರಿದ ಬಸ್!

ಕಟೀಲು ದೇವಸ್ಥಾನದ ಮುಂದೆ ಎಂಆರ್‌ಪಿಎಲ್ ಕಂಪನಿಗೆ ಸೇರಿದ ಬಸ್ ಏಕಾಏಕಿ ಹೊತ್ತಿ ಉರಿದಿದ್ದು ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸುರತ್ಕಲ್ ಸಮೀಪದ ಓಎಂಪಿಎಲ್ ಗೆ ಸಿಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಹೊತ್ತಿ ಉರಿದಿದೆ. ಏನಾಯಿತು ಎಂದು ತಿಳಿಯುವಷ್ಟರಲ್ಲಿ ಸ್ಥಳೀಯರು ಭಯಭೀತರಾಗಿದ್ದು ಕೂಡಲೇ ಸ್ಥಳೀಯವಾಗಿ ನೀರು ಸರಬರಾಜು ಮಾಡುವ ಮೂರು ಕಾವೇರಿ ವಿಶ್ವನಾಥ ಎಂಬುವವರ ನೀರಿನ ಟ್ಯಾಂಕರ್ ಮೂಲಕ ನೀರು ಹಾಯಿಸಿ …

Read More »

ಕುಲಶೇಖರ ಬ್ರಹ್ಮಕಲಶ ವೈಭವ ಕ್ಷೇತ್ರದಲ್ಲಿ ಇಂದು ಸಂಜೆ ಧಾರ್ಮಿಕಸಭೆ: ಯತಿವರ್ಯರಿಂದ ಆಶೀರ್ವಚನ

ಕುಲಶೇಖರ, ಮೇ 15: ಮೇ 14ರಿಂದ 25ರವರೆಗೆ ಜರಗುತ್ತಿರುವ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಇಂದು ಸಂಜೆ 6 ಗಂಟೆಯಿಂದ ನಡೆಯಿರುವ ಪ್ರಥಮ ದಿನದ ಧಾರ್ಮಿಕಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳಿಗ್ಗೆ ಕ್ಷೇತ್ರದಲ್ಲಿ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಬೃಹತ್ ಶ್ರಮದಾನ ನಡೆಯಿತು. ಮಧ್ಯಾಹ್ನ 2-30ರಿಂದ 4 ಗಂಟೆಯವರೆಗೆ ಎಡಪದವು ಶ್ರೀರಾಮ ಮಕ್ಕಳ ಕುಣಿತಾ ಭಜನ ತಂಡದಿಂದ ಭಜನೆ ಬಳಿಕ ಶಿಲ್ಪಿಗಳಿಂದ ದೇವಾಲಯ ಪ್ರತಿಗ್ರಹ ನಡೆಯಲಿದೆ. ಸಂಜೆ 4-30ರಿಂದ ನಡೆಯಲಿರುವ ಪ್ರಥಮ ದಿನದ ಧಾರ್ಮಿಕಸಭೆಯಲ್ಲಿ ಕುಡುಪು …

Read More »

ವೇಣೂರು ಕೆಳಗಿನಪೇಟೆ: ಸಾರ್ವಜನಿಕ ರಸ್ತೆಗೆ ಕೊಳಚೆ ನೀರು

ವೇಣೂರು, ಮೇ 13: ಇಲ್ಲಿಯ ಕೆಳಗಿನಪೇಟೆಯ ಮಸೀದಿ ಸಂಪರ್ಕ ರಸ್ತೆಗೆ ವಾಣಿಜ್ಯ ಸಂಕೀರ್ಣದ ಕೊಳಚೆ ನೀರು ಹರಿದಾಡಿ ದುರ್ನಾತ ಬೀರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.ಸಾರ್ವಜನಿಕ ಸಂಪರ್ಕ ರಸ್ತೆಯ ಬದಿಯಲ್ಲಿ ಇರುವ ಜೆ.ಎಂ. ಟವರ್ ಕಾಂಪ್ಲೆಕ್ಸ್‌ನಿಂದ ಕೊಳಚೆ ನೀರು ರಸ್ತೆಗೆ ಬರುತ್ತಿದ್ದು, ವೇಣೂರು ಗ್ರಾ.ಪಂ. ಸದಸ್ಯರಾದ ಅನೂಪ್ ಜೆ. ಪಾಯಸ್ ಹಾಗೂ ಪಂ. ಸಿಬ್ಬಂದಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡುವ ಭರವಸೆಯನ್ನು ಕಟ್ಟಡ ಮಾಲಿಕರು ನೀಡಿದ್ದಾರೆ.

Read More »

ಕೊನೆಗೂ ಕೃಪೆ ತೋರಿದ ಮಳೆ, ತಂಪಾದ ಇಳೆ ವೇಣೂರು ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಅಲ್ಲಲ್ಲಿ ಮಳೆ

ವೇಣೂರು, ಮೇ 8: ಕೊನೆಗೂ ಇಂದು ಕೃಪೆ ತೋರಿದ್ದಾನೆ. ಇದೀಗ ವೇಣೂರು ಪರಿಸರದಲ್ಲಿ ಮಳೆ ಸುರಿಯುತ್ತಿದ್ದು, ಆಕಾಶದತ್ತ ಮುಖಮಾಡಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆಗಾಗಿ ವೇಣೂರು ಹಾಗೂ ಕರಿಮಣೇಲು ದೇವಸ್ಥಾನದಲ್ಲಿ ಇತ್ತೀಚೆಗೆ ಸಿಯಾಳಭಿಷೇಕ ನಡೆದಿತ್ತು.

Read More »

ಬಡಕೋಡಿ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನ ಮೇ 20-23: ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ

ಹೊಸಂಗಡಿ, ಮೇ 6: ಸರಿಸುಮಾರು 200 ವರ್ಷಗಳ ಇತಿಹಾಸ ಇರುವ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಡಕೋಡಿ ಗ್ರಾಮದ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನಕ್ಕೆ ಜೀರ್ಣೋದ್ಧಾರದ ಪರ್ವಕಾಲ ಕೂಡಿಬಂದಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತಿ, ಮತ ಬೇಧವೆನ್ನದೆ ಎಲ್ಲರ ಕೂಡುವಿಕೆಯಿಂದ ಇದೀಗ ಜೀಣೋದ್ಧಾರ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಇದೇ ತಿಂಗಳ ಮೇ 20ರಿಂದ 23ರವರೆಗೆ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ವಿಜ್ರಂಭನೆಯಿಂದ ಜರಗಲಿದೆ. ಕ್ಷೇತ್ರದ ಇತಿಹಾಸಬಡಕೋಡಿ ಗ್ರಾಮದ ದಂಡ್ಯೊಟ್ಟು ಎಂಬಲ್ಲಿ ಬಡಕೋಡಿ, ಹೊಸಂಗಡಿ, ಕರಿಮಣೇಲು ಗ್ರಾಮದ ಹಿರಿಯರು, ಗುತ್ತು ಬರ್ಕೆಯವರು ಮತ್ತು ಮುಗೇರ …

Read More »

ಬೆಳ್ತಂಗಡಿ ತಾ| ಪತ್ರಕರ್ತರ ಸಂಘದ ಕಚೇರಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರ

ಬೆಳ್ತಂಗಡಿ, ಮೇ 6: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ವಾರ್ತಾಭವನ ಕಟ್ಟಡದಲ್ಲಿದ್ದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಚೇರಿಯನ್ನು ಮಿನಿವಿಧಾನ ಸೌಧದ ಪಕ್ಕದಲ್ಲಿರುವ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನ ಎರಡನೇ ಮಹಡಿಗೆ ಸ್ಥಳಾಂತರ ಮಾಡಲಾಗಿದ್ದು, ನೂತನ ತಾತ್ಕಾಲಿಕ ಕಚೇರಿಯನ್ನು ಇಂದು ಸರಳ ರೀತಿಯಲ್ಲಿ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು. ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದ್ದು, ಇದಕ್ಕಾಗಿ ವಾರ್ತಾಭವನ ಕಟ್ಟಡವೂ ತೆರವುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ಕಚೇರಿ ಸ್ಥಳಾಂತರವಾಗಿದ್ದು, ಮುಂದಿನ ದಿನಗಳಲ್ಲಿ ಪತ್ರಿಕಾಗೋಷ್ಠಿಗಳು ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಪತ್ರಿಕಾಭವನದಲ್ಲಿ ಕಚೇರಿಯಲ್ಲಿ ನಡೆಯಲಿದೆ.

Read More »

ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವರದಿಗೆ ಬಹುದೊಡ್ಡ ಸ್ಪಂದನೆ ಗುಂಡೂರಿ ಪರಿಸರದಲ್ಲಿ ನೆಟ್ ಸಮಸ್ಯೆ ಪರಿಶೀಲನೆಗೆ ಅಧಿಕಾರಿಗಳ ಭೇಟಿ

ವೇಣೂರು, ಮೇ. 6: ವೇಣೂರು ಗ್ರಾ.ಪಂ. ವ್ಯಾಪ್ತಿಯ ಮಿಯಲಾಜೆ ಹಾಗೂ ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿ ಗ್ರಾಮದ ಪರಿಸರಕ್ಕೆ ಮೊಬೈಲ್ ನೆಟ್‌ವರ್ಕ್ ವಿಸ್ತರಿಸುವ ಬಗ್ಗೆ ಬಿಸ್ಸೆನ್ನೆಲ್ ಅಧಿಕಾರಿಗಳು ಇಂದು ಗ್ರಾಮಗಳಿಗೆ ಭೇಟಿ ಟವರ್ ನಿರ್ಮಾಣಕ್ಕೆ ಜಾಗದ ಪರಿಶೀಲನೆ ನಡೆಸಿದ್ದಾರೆ. ತುಂಬೆದಲೆಕ್ಕಿ ಪರಿಸರದಲ್ಲಿ ಯಾವುದೇ ನೆಟ್‌ವರ್ಕ್ ಕವರೇಜ್ ಆಗದಿರುವ ಬಗ್ಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಇತ್ತೀಚೆಗೆ ವರದಿ ಮಾಡಿತ್ತು. ಇದನ್ನು ಗಮನಿಸಿದ್ದ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದು, ಪೂರ್ವ ಸಮೀಕ್ಷೆಯ ಬಗ್ಗೆ ಅಲ್ಲಲ್ಲಿ ಪರಿಶೀಲಿಸಿದ್ದಾರೆ. ಒಂದೊ ಟವರ್ ನಿರ್ಮಾಣ ಇಲ್ಲವೇ ಸ್ಥಳೀಯ ಟವರ್‌ನಿಂದ ನೆಟ್‌ವರ್ಕ್ ವಿಸ್ತರಿಸುವ …

Read More »

ಶಿವಶಿವ ಕಾಪಾಡು… ಮಳೆಗಾಗಿ ವೇಣೂರು ದೇಗುಲದಲ್ಲೂ ಪ್ರಾರ್ಥನೆ ಮೇ 8: ಸೀಯಾಳ ಅಭಿಷೇಕ, ವಿಶೇಷ ಪೂಜೆ

ವೇಣೂರು, ಮೇ 5: ಜೂ. 1 ರಿಂದ ಮಳೆಗಾಲ ತಿಂಗಳ ಆರಂಭ. ಆದರೆ ಎಪ್ರಿಲ್ ಮೇ ತಿಂಗಳಲ್ಲಿ ಒಂದೆರಡು ಮಳೆ ಬಂದು ಭೂವಿಯನ್ನು ತಂಪಾಗಿಸಿ ಕುಡಿಯಲು, ಕೃಷಿಯ ನೀರಿನ ಅಭಾವ ತಪ್ಪುವುದು ವಾಡಿಕೆಯಿತ್ತು. ಈ ಬಾರಿ ನಿರೀಕ್ಷೆ ಹುಸಿಯಾಗಿದೆ. ಎಲ್ಲೆಡೆ ಕುಡಿಯುವ ನೀರಿಗಾಗಿ ಮಾತ್ರವಲ್ಲದೆ ಕೆರೆ, ಕೊಳವೆಬಾವಿ ನದಿಗುಂಡಿಗಳಲ್ಲಿ ನೀರಿನ ಅಬಾವ ಕಂಡು ಬಂದಿದ್ದು, ಕೃಷಿಕರ ಅನ್ನದ ಬಟ್ಟಲು ಕೃಷಿನೀರಿಗೂ ಹಾಹಾಕಾರ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಜನ ದೇವರ ಮೊರೆ ಹೋಗುವುದು ಅನಿವಾರ್ಯವೆನಿಸಿದೆ. ವೇಣೂರು ದೇಗುಲದಲ್ಲಿ ಅಭಿಷೇಕಮೇ 8 ಸೋಮವಾರದಂದು ಪೂ.ಗಂ 11-30ರಿಂದ ವೇಣೂರು …

Read More »

ರೋಟರಿಯಿಂದ ಕೊಡುಗೆಯ ಮಹಾಪೂರ!ಹೊಕ್ಕಾಡಿಗೋಳಿ ಸ.ಹಿ.ಪ್ರಾ. ಶಾಲೆಗೆ ಡಿಜಿಟಲ್ ಸ್ಮಾರ್ಟ್‌ಕ್ಲಾಸ್, ಪೀಠೋಪಕರಣ ವ್ಯವಸ್ಥೆ

ಆರಂಬೋಡಿ, ಮೇ 2: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೂ ಮೂಲಭೂತ ಸೌಲಭ್ಯಗಳು ಇಲ್ಲ ಅನ್ನುವ ಅಪವಾದಗಳು ಇಂದಿಗೂ ಇವೆ. ಆದರೆ ಒಂದು ಸರಕಾರಿ ಶಾಲೆಗೆ ಸಂಘಸಂಸ್ಥೆಗಳು ಸಹಕಾರ ನೀಡಿದರೆ ಯಾವ ರೀತಿ ಬೆಳವಣಿಗೆ ಕಾಣಲು ಸಾಧ್ಯವಿದೆ ಅನ್ನುವುದು ಹೊಕ್ಕಾಡಿಗೋಳಿಯಲ್ಲಿರುವ ಸ.ಹಿ.ಪ್ರಾ. ಶಾಲೆ ಉದಾಹರಣೆಯಾಗಿದೆ. ಹೌದು, ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹೊಕ್ಕಾಡಿಗೋಳಿ ಶಾಲೆಗೆ ಸಿದ್ದಕಟ್ಟೆ ರೋಟರಿ ಕ್ಲಬ್ ಹಾಗೂ ಸೆಲ್ಕೋ ಸೋಲಾರ್ ಅವರ ಸಹಕಾರದಲ್ಲಿ ಸುಮಾರು ರೂ. 1.75 ಲಕ್ಷ ವೆಚ್ಚದಲ್ಲಿ ಸೋಲಾರ್ ಆಧರಿತ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿದೆ. ಇದರ ಕಾಮಗಾರಿ …

Read More »

You cannot copy content of this page.