Uncategorized

ವೇಣೂರು ಉಪಕೇಂದ್ರದಲ್ಲಿ ನಾಳೆ ವಿದ್ಯುತ್ ನಿಲುಗಡೆ

ವೇಣೂರು, ಮೇ 30: ತುರ್ತು ಕಾಮಗಾರಿಯ ಪ್ರಯುಕ್ತ ಮೇ 31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ 33/11ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Read More »

ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ರಕ್ಷಿತ್ ಶಿವರಾಮ್

ಮಂಗಳೂರು: ಸಂತೋಷ್ ನಿನ್ನಿಕಲ್ಲು ಅವರ ತಾಯಿ ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ತುರ್ತಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Read More »

ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜ, ಟರ್ಪಾಲು, ಸ್ಪಿಂಕ್ಲರ್ ಪೈಪ್, ಕೃಷಿ ಯಂತ್ರೋಪಕರಣಗಳು ಬೇಕೆ? ವೇಣೂರು ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ

ವೇಣೂರು, ಮೇ 29: ವೇಣೂರು ಕೃಷಿಇಲಾಖೆಯಿಂದ ಸದ್ಯಕ್ಕೆ ರೈತರಿಗೆ ಸಿಗುವ ಸಲವತ್ತುಗಳ ಮಾಹಿತಿ ನೀಡಿದ್ದಾರೆ.ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜ (ಎಂಒ೪), ಟರ್ಪಾಲು, ಸ್ಪಿಂಕ್ಲರ್ ಪೈಪ್, ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಪವರ್ ಟ್ರಾಕ್ಟರ್, ಪವರ್ ವೀಡರ್ ಹಾಗೂ ಪವರ್ ಸ್ಪ್ರೇಯರ್‌ಗಳು ಸಹಾಯಧನದಲ್ಲಿ ಲಭ್ಯವಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ದಾಖಲಾತಿಗಳುಅರ್ಜಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಆರ್‌ಟಿಸಿ, ಪೊಟೋ ದಾಖಲೆಗಳೊಂದಿಗೆ ವೇಣೂರು ರೈತಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೇಣೂರು ರೈತಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Read More »

ಕರಾವಳಿ ಜಿಲ್ಲೆಗಳಲ್ಲಿ ಇಂದು ರಾತ್ರಿ ಉತ್ತಮ ಮಳೆ: ಹವಮಾನ ಇಲಾಖೆ ಮುನ್ಸೂಚನೆ

ಮಂಗಳೂರು, ಮೇ 29: ಕರಾವಳಿ ಜಿಲ್ಲೆಗಳಲ್ಲಿ ಇಂದು ರಾತ್ರಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಮಧ್ಯಾಹ್ನವೇ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದೆ. ಬೆಂಗಳೂರು, ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ಕಡೆ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಕೂಡ ರಾಜ್ಯದ ಹಲವು ಪ್ರದೇಶಗಳಲ್ಲಿ ಗುಡುಗು ಮಿಂಚು, ಬಿರುಗಾಳಿ ಸಹಿತ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More »

ಜೈ ತುಳುನಾಡು ಸಂಘಟನೆಯ ಅಧ್ಯಕ್ಷರಾಗಿ ವಿಶು ಶ್ರಿಕೇರ ಆಯ್ಕೆ

ಈದು: ಜೈ ತುಳುನಾಡು ಸಂಘಟನೆಯ 2023-24 ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನಾರಾವಿ: ವಿಶು ಶ್ರಿಕೇರ ಅವರು ತುಳುನಾಡಿನ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರಕ್ಕೆ ಮೈಗೂಡಿಸಿಕೊಮಡಿದ್ದು, ಅದಕ್ಕೆ ಧಕ್ಕೆಯಾದಾಗ ಧ್ವನಿಯೆತ್ತುವ ಯುವ ನಾಯಕರಾಗಿದ್ದಾರೆ.ಕಾರ್ಯದರ್ಶಿಯಾಗಿ ಕಿರಣ್ ತುಳುವ, ಉಪಾಧ್ಯಕ್ಷರಾಗಿ ಉದಯ ಪೂಂಜ, ಉಮೇಶ್ ಕಾಸರಗೋಡು ಆಯ್ಕೆಯಾದರು.ವರದಿ : ಸಂಪತ್ ಜೈನ್ ನೂರಾಳಬೆಟ್ಟು

Read More »

ಬೆಳ್ತಂಗಡಿ ತಾ|ನೆಲ್ಲೆಡೆ ಪುತ್ತಿಲ ಹವಾ! ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಕಾಶಿಪಟ್ಣ: ಕಾಶಿಪಟ್ಣ ಗ್ರಾಮದ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ದೇವರ ದರ್ಶನ ಪಡೆದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜತೆಗಿದ್ದರು.ಕಳೆದ ಹಲವು ದಿನಗಳಿಂದ ತಾಲೂಕಿನೆಲ್ಲೆಡೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಪುತ್ತಿಲ ಅವರು ತಾಲೂಕಿನ ಯುವಪಡೆಯಲ್ಲಿ ಹವಾ ಸೃಷ್ಟಿಸಿದ್ದಾರೆ.

Read More »

ಅಂಡಿಂಜೆ ಗ್ರಾ.ಪಂ.ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ

ಅಂಡಿಂಜೆ, ಮೇ 28: ಅಂಡಿಂಜೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಇತ್ತೀಚೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅಂಡಿಂಜೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಯಂತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಕಾರ್ಯದರ್ಶಿ ಚಂಪಾ, ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು. ಮಕ್ಕಳಿಗೆ ತರಬೇತಿಯನ್ನು ಗ್ರಾ.ಪಂ ಸದಸ್ಯೆ ಶ್ರೀಮತಿ ವಂದನಾ ನೀಡಿದರು.

Read More »

ಸಿಐಎಸ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೊದಲ ಭಾರತೀಯ ಸಾಧಕಿ ಸಪ್ನ ನಾರಾವಿ! ಅಮೇರಿಕಾದ ಬೋಸ್ಟನ್‌ನಲ್ಲಿ ಡಿಜಿಟಲ್ ಟ್ರಸ್ಟ್ ಕಾನ್ಪರೆನ್ಸ್‌ನಲ್ಲಿ ವಿಶಿಷ್ಟ ಸಾಧನೆಗೆ ಸನ್ಮಾನ ಸ್ವೀಕರಿಸಿದ ಸಪ್ನ

ಬೆಂಗಳೂರು: 2022ನೇ ಸಾಲಿನ ಅಂತರಾಷ್ಟ್ರೀಯ ಸಂಸ್ಥೆ ಐಸಾಕ ((ISACA) ನಡೆಸಿದ ಸಿಐಎಸ್‌ಎ(CISA ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್) ಪರೀಕ್ಷೆಯಲ್ಲಿ ಬೆಳ್ತಂಗಡಿ ಯುವ ಸಾಧಕಿ ಸಾಫ್ಟ್‌ವೇರ್ ಇಂಜಿನಿಯರ್ ಸಪ್ನ ಅವರು ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಐಟಿ ಕಂಪೆನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಉದ್ಯೋಗದಲ್ಲಿರುವವರು ವಿಶ್ವ ಮಟ್ಟದಲ್ಲಿ ಈ ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಉತ್ತೀರ್ಣರಾಗಬೇಕಾದರೆ ತುಂಬಾ ಪರಿಶ್ರಮದ ಅಗತ್ಯವಿದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಸಪ್ನರವರಿಗೆ ಸಲ್ಲುತ್ತದೆ. ಮೇ ೧೦ ರಂದು ಅಮೇರಿಕಾದ ಬೋಸ್ಟನ್‌ನಲ್ಲಿ ನಡೆದ ಡಿಜಿಟಲ್ ಟ್ರಸ್ಟ್ …

Read More »

ಚಿರತೆಯ ಚಲನವನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು! ಮರೋಡಿಯ ಬಜಿಲಪಾದೆಯಲ್ಲಿ ಚಿರತೆ ಪ್ರತ್ಯಕ್ಷ, ಬೋನ್ ಅಳವಡಿಕೆ

ಮರೋಡಿ, ಮೇ 27: ಚಿರತೆ ಇದೆ ಎಂದು ಸುದ್ದಿ ಹಬ್ಬಿದರೆ ಸಾಕು ಜನ ಭಯಭೀತರಾಗುತ್ತಾರೆ. ಆದರೆ ಮರೋಡಿಯಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದ ಪ್ರಮಾಣಿಕರಿಗೆ ದಾರಿಮಧ್ಯೆ ಚಿರತೆ ಎದುರಾಗಿದ್ದು, ಅದರ ಚಲನವಲನದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಕುತ್ಲೂರು ಗ್ರಾಮದ ಬಜಿಲಪಾದೆ ಸಮೀಪ ಗುರುವಾರ ರಾತ್ರಿ ಬೃಹತ್ ಗಾತ್ರದ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಬಜಿಲಪಾದೆ-ಮರೋಡಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರು ಚಿರತೆಯನ್ನು ವೀಕ್ಷಿಸಿ, ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಸಾಹಸ ಮಾಡಿದ್ದಾರೆ.ಕುತ್ಲೂರು, ಮರೋಡಿ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಜನರಿಗೆ ಚಿರಿತೆ ಕಾಣಿಸಿಕೊಳ್ಳುತ್ತಿದ್ದು, ಜನ ಸಾಮಾನ್ಯವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ನಾಡುಪ್ರದೇಶದಲ್ಲಿ ಕಾಣಿಸಿಕೊಳ್ಳುವ …

Read More »

ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ. ಊರಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮನೆಮಾಡಲಿ: ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ

ಹೊಸಂಗಡಿ, ಮೇ 25: ಇಲ್ಲಿಯ ಬಡಕೋಡಿ ದಂಡ್ಯೋಟ್ಟುವಿನ ಬ್ರಹ್ಮಶ್ರೀ ಮುಗೇರ ದೈವಸ್ಥಾನದ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ನೇಮೋತ್ಸವ ಸಮಿತಿ, ಬ್ರಹ್ಮಶ್ರೀ ಮುಗೇರ ದೈವಸ್ಥಾನ ಚಾರಿಟೇಬಲ್ ಟ್ರಸ್ಟ್ ದಂಡ್ಯೋಟ್ಟು ವತಿಯಿಂದ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ವಿಜೃಂಭನೆಯಿಂದ ನಡೆಯಿತು.ಮೇ. ೨೦ರಂದು ಪಡ್ಯಾರಬೆಟ್ಟದ ಬಳಿಯಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಕ್ಷೇತ್ರಕ್ಕೆ ಅತ್ಯಂತ ವೈಭವದಿಂದ ಜರಗಿತು. ಪಡ್ಯಾರಬೆಟ್ಟ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂದರ ಕುಮಾರ್ ಅವರು ಹೊರೆಕಾಣಿಕೆ ಮೆರವಣಿಗೆಗ ಚಾಲನೆ ನೀಡಿದರು. ಮೇ. …

Read More »

You cannot copy content of this page.