ರಾಜ್ಯದ ಜನರಲ್ಲಿ ಭಯ ಹುಟ್ಟಿಸಿದ ಮುಂಗಾರು!ತಡವಾದರೂ ಟೆನ್ಷನ್ ಬೇಡ, ರಾಜ್ಯದಲ್ಲಿ ಭರ್ಜರಿ ಮಳೆ: ಹವಮಾನ ಇಲಾಖೆ

ವೇಣೂರು, ಜೂ. 5: ‘ಮುಂಗಾರು ಮಳೆ’.. ರಾಜ್ಯಕ್ಕೆ ಅದರಲ್ಲೂ ಕರಾವಳಿಗೆ ಈ ಮಳೆ ಅಮೃತಕ್ಕೆ ಸಮಾನ. ಬಿರು ಬೇಸಿಗೆಯಿಂದ ನರಳಿದ ಜಾಗಕ್ಕೆ, ಇದೇ ಮಳೆ ಮತ್ತೆ ಜೀವಕಳೆ ನೀಡುತ್ತದೆ. ನಮ್ಮಲ್ಲಿನ ಕಾಡುಗಳಿಗೆ ಈ ಮಳೆಯೇ ಆಧಾರ. ಆದರೆ ಈ ಬಾರಿ ಮುಂಗಾರು ಮಳೆ ತಡವಾಗುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ.
ದಕ್ಷಿಣ ಭಾರತದ ಕೇರಳ ಕರಾವಳಿ ಮೂಲಕ ಎಂಟ್ರಿ ಕೊಡುವ ಮುಂಗಾರು ಮಾರುತಗಳು ಜೀವಕಳೆ ನೀಡುತ್ತವೆ. ಅದರಲ್ಲೂ ಕನ್ನಡ ನಾಡಿಗೆ ಇದೇ ಮಾರುತಗಳೇ ಆಧಾರ. ಆದರೆ ಈ ಬಾರಿ ಅಂದುಕೊಂಡ ರೀತಿ ಮುಂಗಾರು ಮೋಡಗಳು ಎಂಟ್ರಿ ಕೊಟ್ಟಿಲ್ಲ. ಮುಂಗಾರು ಮಳೆಯ ಆಗಮನ ತಡವಾಗುತ್ತಿರುವುದು ಈ ಬಾರಿ ಬರದ ಪರಿಸ್ಥಿತಿಯ ಭಯ ಹುಟ್ಟಿಸಿದೆ. ಅದರಲ್ಲೂ ಮುಂಗಾರು ಮಳೆ ತಡವಾಗುತ್ತಿರುವ ಬೆಳವಣಿಗೆ ಕರಾವಳಿಯ ರೈತರಲ್ಲಿ ಆತಂಕ ಮೂಡಿಸಿದೆ. ಆದರೆ ಹವಮಾನ ಇಲಾಖೆ ಮಾತ್ರ ಮುಂಗಾರು ತಡವಾದರೂ ಟೆನ್ಷನ್ ಬೇಡ, ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ಗ್ಯಾರಂಟಿ ನೀಡಿದೆ.

ಕೇರಳ ಕರಾವಳಿಗೆ ಬರುತ್ತಿಲ್ಲ ‘ಮುಂಗಾರು’
ಹೌದು ಈಗಾಗಲೇ ಕಳೆದ ಹಲವು ವಾರಗಳಿಂದ ಮುಂಗಾರು ಮಾರುತಗಳ ಬಗ್ಗೆ ಮಾತುಕತೆ ಶುರುವಾಗಿದೆ. ಅದ್ರಲ್ಲೂ ಕೇರಳ ಕರಾವಳಿಗೆ ‘ಮುಂಗಾರು ಮಳೆ’ ಎಂಟ್ರಿ ಕೊಟ್ಟು, ಅಲ್ಲಿ ಮಳೆ ಸುರಿಸಿದ ನಂತರ ಕರ್ನಾಟಕಕ್ಕೂ ಬರುವುದೇ ವಾಡಿಕೆ. ಆದರೆ ಈ ಬಾರಿ ಜೂನ್ ಮೊದಲ ವಾರ ಕೊನೆಯಾಗುತ್ತಾ ಬಂದರೂ ‘ಮುಂಗಾರು ಮಾರುತಗಳ’ ಸುಳಿವೇ ಇಲ್ಲ. ನಿನ್ನೆ ಅಥವಾ ಇಂದು ಕೇರಳಕ್ಕೆ ಮುಂಗಾರು ಮಾರುತಗಳು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ ಇಂದು ಕೂಡ ಮುಂಗಾರು ಮಾರುತ ಕೇರಳಕ್ಕೆ ಪ್ರವೇಶಿಸಲು ವಿಫಲವಾಗಿವೆ. ಹಾಗಾದ್ರೆ ಇದರ ಪರಿಣಾಮವೇನು? ಕರ್ನಾಟಕಕ್ಕೆ ಬರ ಪರಿಸ್ಥಿತಿ ಪಕ್ಕಾನಾ? ಮುಂದೆ ಓದಿ.

ಮುಂಗಾರು ಮಳೆ ತಡವಾದರೆ ಸಂಕಷ್ಟ?
ಭಾರತದ ಮಳೆಯನ್ನ 2 ವಿಭಾಗವಾಗಿ ವಿಂಗಡಣೆ ಮಾಡಲಾಗುತ್ತೆ, 1) ಮುಂಗಾರು ಮಳೆ ಹಾಗೂ ಇನ್ನೊಂದು 2) ಹಿಂಗಾರು ಮಳೆ. ಅದರಲ್ಲೂ ಹಿಂಗಾರು ಮಳೆ ತಡವಾಗಿ ಬಂದ್ರು ಪರವಾಗಿಲ್ಲ, ಮುಂಗಾರು ಮಳೆ ತಡವಾದರೆ ಅನ್ನದಾತ ರೈತ ಚಡಪಡಿಸುತ್ತಾನೆ. ಬಿತ್ತನೆ ಕಾರ್ಯದಿಂದ ಹಿಡಿದು, ಕೃಷಿ ಚಟುವಟಿಕೆಯ ಪ್ರತಿಯೊಂದು ಕೆಲಸ ಕೂಡ ಇದರ ಮೇಲೆ ಅವಲಂಬಿತ. ಹೀಗಾಗಿಯೇ ಮುಂಗಾರು ಮಳೆ ತಡವಾಗುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ನಿಗದಿತ ದಿನಕ್ಕಿಂತಲೂ 3 ದಿನ ತಡವಾಗಲಿದೆ ಅಂತಾ ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಮಳೆ ತಡವಾದಷ್ಟೂ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.