Uncategorized

ಕೆಎಸ್ಆರ್‌ಟಿಸಿ ಪುತ್ತೂರು ವಿಭಾಗ ಶಿಶಿಕ್ಷು ತರಬೇತಿ; ಜೂನ್ 8ಕ್ಕೆ ನೇರ ಸಂದರ್ಶನ

ಬೆಂಗಳೂರು, ಜೂನ್ 04; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪುತ್ತೂರು ವಿಭಾಗ ಶಿಶಿಕ್ಷು ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜೂನ್ 8ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿದ ಮೆಕ್ಯಾನಿಕಲ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ವೆಲ್ಡರ್, ಫಿಟ್ಟರ್ ಈ ವೃತ್ತಿ ತರಬೇತಿಗೆ ಸಂದರ್ಶನ ನಡೆಯಲಿದೆ. ಐಟಿಐ ವಿದ್ಯಾರ್ಹತೆ ಹೊಂದಿದ …

Read More »

ಸಮಾಜ ಸೇವಾ ಉತ್ಸಾಹಿ ತರುಣವೃಂದ ನಡ್ತಿಕಲ್ಲು ಇದರ ಉದ್ಘಾಟನೆ. ಸನ್ಮಾನ, ಉಚಿತ ಬರವಣಿಗೆ ಪುಸ್ತಕಗಳ ವಿತರಣೆ ಕಾರ್ಯಕ್ರಮ

ವೇಣೂರು, ಜೂ. 4: ಮೂಡುಕೋಡಿ ಗ್ರಾಮದ ನಡ್ತಿಕಲ್ಲುವಿನಲ್ಲಿ ಸಮಾಜ ಸೇವಾ ಉತ್ಸಾಹಿ ತರುಣವೃಂದ ಎಂಬ ನೂತನ ಸಂಘಟನೆಯನ್ನು ನಡ್ತಿಕಲ್ಲು ಶ್ರೀರಕ್ಷಾ ನಿಲಯದಲ್ಲಿ ಇಂದು (ಜೂ. 4) ಉದ್ಘಾಟಿಸಲಾಯಿತು.ಉದ್ಘಾಟನೆಯ ಅಂಗವಾಗಿ ಅರ್ಹಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಬರವಣಿಗೆ ಪುಸ್ತಕದ ವಿತರಣೆ ಮಾಡಲಾಯಿತು. ಸಮಾಜ ಸೇವಾ ಉತ್ಸಾಹಿ ತರುಣವೃಂದ ಇದರ ಸ್ಥಾಪಕ ಅಧ್ಯಕ್ಷರಾಗಿ ರಂಜಿತ್ ಕುಲಾಲ್, ಕಾರ್ಯದರ್ಶಿ ಸುರೇಂದ್ರ ಕುಲಾಲ್ ಹಾಗೂ ಕೋಶಾಧಿಕಾರಿ ಮಮತಾ ರಂಜಿತ್ ಅವರನ್ನು ಆಯ್ಕೆ ಮಾಡಲಾಯಿತು. ಸಂದೇಶ್ ಬಿ.ಇ., ವಿಶ್ವಾಸ್ ಕುಲಾಲ್ ಕಾವೂರು, ಸುಕುಮಾರ್ ಕಾವೂರು, ನಾರಾಯಣ ಕುಲಾಲ್, ವಿದ್ಯಾರ್ಥಿಗಳಾದ ಸಾನಿಧ್ಯ ಕೊಕ್ರಾಡಿ, …

Read More »

ಜೂ. 8ರಂದು ಮರೋಡಿ ಗ್ರಾ.ಪಂ.ನ ಗ್ರಾಮಸಭೆ

ಮರೋಡಿ, ಜೂ. 4: ಮರೋಡಿ ಗ್ರಾ.ಪಂ.ನ ೨೦೨೩-೨೪ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜೂ. 8ರಂದು ಬೆಳಿಗ್ಗೆ 10-30ಕ್ಕೆ ಮರೋಡಿ ಗ್ರಾ.ಪಂ. ಸಭಾಭವನದಲ್ಲಿ ಜರಗಲಿದೆ.ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚಾಯತ್ ವಿನಂತಿಸಿದೆ.

Read More »

ಜೂ.13ರಂದು ಕಾಶಿಪಟ್ಣ ಗ್ರಾಮ ಪಂಚಾಯತ್‌ನ ಗ್ರಾಮಸಭೆ

ಕಾಶಿಪಟ್ಣ, ಜೂ. 4: ಕಾಶಿಪಟ್ಣ ಗ್ರಾ.ಪಂ. ೨೦-೨೪ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜೂ. 13ರಂದು ಬೆಳಿಗ್ಗೆ 10-30ರಿಂದ ಗ್ರಾ.ಪಂ. ಸಭಾಭವನದಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಗ್ರಾಮಸಭೆಯ ನೂಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚಾಯತ್ ವಿನಂತಿಸಿದೆ.

Read More »

ವೇಣೂರು ನೂತನ ಬಸ್ ತಂಗುದಾಣದ ಅಂಗಡಿಕೋಣೆಗಳಿಗೆ ಏಲಂ ಪ್ರಕಟಣೆ ಹೊರಡಿಸಿದ ವೇಣೂರು ಗ್ರಾ.ಪಂ.

ವೇಣೂರು, ಜೂ. 3: ಇಲ್ಲಿಯ ಸುಸಜ್ಜಿತ ಆಕರ್ಷಕ ಬಸ್ಸು ತಂಗುದಾಣ ಕಟ್ಟಡದ ೧೧ ಅಂಗಡಿ ಕೋಣೆಗಳನ್ನು ಏಲಂ ಮಾಡುವ ಬಗ್ಗೆ ವೇಣೂರು ಗ್ರಾ.ಪಂ. ಅಧಿಕೃತ ಪ್ರಕಟಣೆ ಹೊರಡಿಸಿದೆ.ಈ ಬಗ್ಗೆ ಮೇ 30ರಂದು ಜರಗಿದ್ದ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಜೂ. 15ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಐದು ವರ್ಷಗಳ ಅವಧಿಗೆ ಬಹಿರಂಗ ಏಲಂಗೆ ಕರೆಯಲಾಗಿದೆ. ಆಸಕ್ತರು ಜೂ. 13ರಂದು ಪಂಚಾಯತ್ ನಿಗಧಿ ಪಡಿಸಿದ ಟೆಂಡರ್ ಡಿಪೋಜಿಟ್ ಪಾವತಿಸಿ ಹೆಸರು ನೋಂದಾಯಿಸುವಂತೆ ಪಂಚಾಯತ್ ತಿಳಿಸಿದೆ. ಮೀಸಲಾತಿ, ಇಎಂಡಿ ಮೊತ್ತ ಸೇರಿದಂತೆ ಹೆಚ್ಚಿನ ಮಾಹಿತಿ …

Read More »

ಮಳೆಯ ಮುಂಚೆ ತುರ್ತಾಗಿ ನಾವರ ರಸ್ತೆ ದುರಸ್ತಿಗೆ ಆಗ್ರಹ. ಗ್ರಾ.ಪಂ. ಅಧ್ಯಕ್ಷ ನಾರಾಯಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸುಲ್ಕೇರಿ ಗ್ರಾಮಸಭೆ

ಸುಲ್ಕೇರಿ, ಜೂ. 3 : ಸುಲ್ಕೇರಿ ಗ್ರಾಮ ಪಂಚಾಯತ್‌ನ ೨೦೨೩-೨೪ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಗ್ರಾಮಸಭೆಯನ್ನು ನಡೆಸಿಕೊಟ್ಟರು. ಗ್ರಾಮಸಭೆಯಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಹಲವಾರು ಚರ್ಚೆಗಳು ನಡೆಯಿತು. ಮಳೆಯ ಮುಂಚೆ ನಾವರ ರಸ್ತೆ ದುರಸ್ತಿ ನಡೆಸುವಂತೆ ಆಗ್ರಹ ಕೇಳಿ ಬಂತು. ರಸ್ತೆ, ಕುಡಿಯುವ ನೀರು, ವಿದ್ಯುತ್, ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ …

Read More »

ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು! ವಿಚಾರ ತಿಳಿದಾಗ ಗದ್ಗತೀತರಾದೆವು, ಅಪಘಾತದ ರೈಲಿನಲ್ಲಿದ್ದ ವೇಣೂರು ಯಾತ್ರಿಗಳ ಅನುಭವದ ಮಾತು

ಭುವನೇಶ್ವರ, ಜೂ. ೩: ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತ ನಡೆದ ಘಟನೆ ಒಡಿಶಾದ ಬಾಲಸೋರ್ ಪ್ರದೇಶದ ಬಹನಾಗಾ ರೈಲು ನಿಲ್ದಾಣ ಸಮೀಪ ನಿನ್ನೆ ಸಂಜೆ ೭.೩೦ರ ಸುಮಾಎರಿಗೆ ನಡೆದಿದೆ. ಹಳಿತಪ್ಪಿದ ರೈಲು ಪ್ಯಾಸೆಂಜರ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ನಾಲ್ಕು ಬೋಗಿಗಳು ಪಲ್ಟಿ ಹೊಡೆದಿವೆ. ಪರಿಣಾಮ ೨೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ೯೦೦ ಜನರು ಗಾಯಗೊಂಡಿದ್ದಾರೆ. ಮೂರನೇ ಸರಕು ಸಾಗಣೆ ರೈಲು ಕೂಡ ಈ ಅಪಘಾತದಲ್ಲಿ ಸಿಲುಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ದೇಶದ ಇತಿಹಾಸದಲ್ಲೇ ಭೀಕರ …

Read More »

ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತವೇಣೂರಿನ ಮೂವರು ಸೇರಿದಂತೆ ದ.ಕ. ಜಿಲ್ಲೆಯ 21 ಮಂದಿ ಪಾರಾಗಿದ್ದೇಗೆ ಗೊತ್ತಾ?!

ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು!ವಿಚಾರ ತಿಳಿದಾಗ ಗದ್ಗತೀತರಾದೆವು, ಅಪಘಾತದ ರೈಲಿನಲ್ಲಿದ್ದ ವೇಣೂರು ಯಾತ್ರಿಗಳ ಅನುಭವದ ಮಾತು ಭುವನೇಶ್ವರ, ಜೂ. 3: ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತ ನಡೆದ ಘಟನೆ ಒಡಿಶಾದ ಬಾಲಸೋರ್ ಪ್ರದೇಶದ ಬಹನಾಗಾ ರೈಲು ನಿಲ್ದಾಣ ಸಮೀಪ ನಿನ್ನೆ ಸಂಜೆ 7-10ರ ಸುಮಾರಿಗೆ ನಡೆದಿದೆ. ಹಳಿತಪ್ಪಿದ ರೈಲು ಪ್ಯಾಸೆಂಜರ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ನಾಲ್ಕು ಬೋಗಿಗಳು ಪಲ್ಟಿ ಹೊಡೆದಿವೆ. ಪರಿಣಾಮ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 900 ಜನರು ಗಾಯಗೊಂಡಿದ್ದಾರೆ. ಮೂರನೇ …

Read More »

ಮರೋಡಿ: ಪೊಸರಡ್ಕ ದೈವಸ್ಥಾನ-ಶ್ರೀ ಬ್ರಹ್ಮಬೈದರ್ಕಳ ಗರಡಿ ಪುನರ್ ನಿರ್ಮಾಣ. ಸೀಮೆಯ ಅರಸರಾದ ಡಾ| ಪದ್ಮಪ್ರಸಾದ್ ಅಜಿಲರಿಂದ ಶಿಲಾನ್ಯಾಸ

ಮರೋಡಿ, ಜೂ. 2: ಇಲ್ಲಿಯ ಪೊಸರಡ್ಕ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ದೈವ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ನೂತನವಾಗಿ ನಿರ್ಮಾಣಗೊಳ್ಳಲಿದ್ದು, ಆ ಪ್ರಯುಕ್ತ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ಕೇಳಬೊಟ್ಟ ಅನಂತ ಅಸ್ರಣ್ಣರ ಪೌರೋಹಿತ್ಯದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಜೂ. 1 ರಂದು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಮೂಡಬಿದ್ರೆ ಚೌಟರ ಅರಮನೆ ಕುಲದೀಪ ಯಂ, ಪೆರಿಂಜೆ ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್, ಮೂಡಬಿದ್ರೆ …

Read More »

ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ತೊರ್ಪು ಡ್ಯಾಮ್! ಸರಿಯಾದ ಸಮಯಕ್ಕೆ ಗೇಟ್ ಅಳವಡಿಸಿ, ತೆಗೆಯಲು ಗ್ರಾಮಸ್ಥರ ಆಗ್ರಹ

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮಸಭೆಹೊಸಂಗಡಿ, ಜೂ. 1: ಕಳೆದ ಹಿಂಗಾರಿನ ಬಳಿಕ ಗೇಟ್ ಅಳವಡಿಸಲು ವಿಳಂಬ ಮಾಡಿದ್ದಲ್ಲದೆ ಸರಿಯಾದ ರೀತಿಯಲ್ಲಿ ಅಳವಡಿಸದೆ ನೀರು ಸೋರಿಕೆಯಾಗಿದ್ದರಿಂದ ಈ ಬೇಸಿಗೆಗೆ ತೊರ್ಪು ಫಲ್ಗುಣಿ ನದಿಯಲ್ಲಿ ನೀರು ಬಹುಬೇಗನೇ ಬತ್ತಿದೆ. ಇದರಿಂದ ಕೃಷಿಕರು ಭಾರೀ ತೊಂದರೆ ಅನುಭವಿಸುವಂತಾಗಿದ್ದು, ಸರಿಯಾದ ಸಮಯಕ್ಕೆ ಗೇಟ್ ಅಳವಡಿಸಿ, ಮಳೆಗಾಲದ ಮುಂಚೆ ತೆಗೆಯಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂತು. ಹೊಸಂಗಡಿ ಗ್ರಾ.ಪಂ.ನ ೨೦೨೩-೨೪ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಇಂದು ಹೊಸಂಗಡಿಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಕರುಣಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು. …

Read More »

You cannot copy content of this page.