BPL ಕಾರ್ಡ್ ಹಾಗೂ APL ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಲ್ಲ ವರ್ಗದ ರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಜಾರಿಗೊಂಡಿರುವ ಆಯುಷ್ಮನ್ ಭಾರತ್ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್​ನಲ್ಲಿ ಪ್ರಾರಂಭಿಸಿದ್ದರು.

ದೇಶದ ಪ್ರತಿಯೊಬ್ಬ ನಾಗರಿಕರಿಕನಿಗೂ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಈ ಯೋಜನೆಯಡಿ ಅರ್ಹತೆಯನ್ನು ಪರಿಶೀಲಿಸುವ ಮಾರ್ಗವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದಲೇ ಹೇಳಲಾಗಿದೆ.

ಈಗಾಗಲೇ ಆಯುಷ್ಮನ್ ಭಾರತ್ ಜನ ಅರೋಗ್ಯ ಯೋಜನೆ ಹಾಗೂ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ BPL ಕಾರ್ಡ್ ದಾರರಿಗೆ 5 ಲಕ್ಷ, APL ಕಾರ್ಡ್ ದಾರರಿಗೆ 2 ಲಕ್ಷ ರೋ. ಸೌಲಭ್ಯವನ್ನು ನೀಡಲಾಗುತ್ತದೆ. ಆರೋಗ್ಯ ಯೋಜನೆಗಳ ಕಾರ್ಡ್ ಗಳನ್ನೂ ಪಡೆದುಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಆಯುಷ್ಮಾನ್ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ಲಭ್ಯವಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು 5 ಲಕ್ಷ ರೂ. ವರೆಗೆ ಚಿಕಿತ್ಸೆ ಪಡೆಯಬಹುದು ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅಥವಾ ಕಾರ್ಡ್ ಇಲ್ಲದವರು 1.5 ರಿಂದ 2 ಲಕ್ಷ ರೂ. ವರೆಗೆ ಚಿಕಿತ್ಸೆ ಪಡೆಯಬಹುದು. ನೀವು ಮನೆಯಲ್ಲಿಯೇ ಕುಳಿತು ಆಯುಷ್ಮನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು.

ಆಯುಷ್ಮಾನ್  ಕಾರ್ಡ್ ಗಾಗಿ‌ ಮೊಬೈಲ್ ನಲ್ಲಿಯೇ ಅರ್ಜಿಸಲ್ಲಿಸಿ
•ನೀವು abdm.gov.in/ ಗೆ ಭೇಟಿ ನೀಡುವ ಮೂಲಕ ಆಯುಷ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

  • ವೆಬ್‌ಸೈಟ್ ತೆರೆದ ತಕ್ಷಣ, ABHA ಕಾರ್ಡ್ ಮೇಲೆ ಕ್ಲಿಕ್ ಮಾಡಿ. ನಿಮ್ಮ Aadhaar Card ಸಂಖ್ಯೆಯನ್ನು ನಮೂದಿಸಿದ ನಂತರ OTP ಸಂಖ್ಯೆಯನ್ನು ಕೇಳುತ್ತದೆ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಸಂಖ್ಯೆಯನ್ನು ಸಲ್ಲಿಸಿದ ನಂತರ, ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಿ. ನೀವು ಸಲ್ಲಿಸಿದ ಅರ್ಜಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ ಮತ್ತು ಎಲ್ಲಾ ದಾಖಲೆಗಳು ಮತ್ತು ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ.
  • ಎಲ್ಲವೂ ಸರಿಯಾಗಿದ್ದರೆ ಅರ್ಜಿಯನ್ನು Submit ಮಾಡಿ. ನಂತರ ನೀವು ಸಲ್ಲಿಸಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸಂಬಂಧಿಸಿದ ಇಲಾಖೆಯು ನಿಮಗೆ ಆಯುಷ್ಮಾನ್ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ಪಡೆದ ನಂತರ ನೀವು ಉಚಿತ ಚಿಕಿತ್ಸೆಗೆ ಅರ್ಹರಾಗುತ್ತೀರಿ.

ಯೋಜನೆಯಲ್ಲಿಏನಿದೆವಿಶೇಷ ?
1. ಈ ಯೋಜನೆಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತದೆ, ಅದರ ಎಲ್ಲಾ ಹಣವನ್ನು ಸರ್ಕಾರವೇ ನೀಡುತ್ತದೆ.
2. ಈ ಯೋಜನೆಯ ಅಡಿಯಲ್ಲಿ, ನೀವು ಆಯುಷ್ಮಾನ್ ಯೋಜನೆಯಲ್ಲಿ ಪಟ್ಟಿ ಮಾಡಲಾದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಲಾಭವನ್ನು ಪಡೆಯಬಹುದು.
3. ಈ ಯೋಜನೆಯಡಿ, 5 ಲಕ್ಷ ರೂ.ವರೆಗಿನ ಚಿಕಿತ್ಸೆಯ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ.
4. ಕುಟುಂಬವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಈ ಯೋಜನೆಯ ಲಾಭವನ್ನು ಸಮಾನವಾಗಿ ನೀಡಲಾಗುತ್ತದೆ.

Check Also

ಶಿರಾಡಿಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್, ಸಂಚಾರ ಸಂಪೂರ್ಣ ಸ್ಥಗಿತ..!

ಹಾಸನ: ಭಾರೀ ಮಳೆಗೆ ಸಕಲೇಶಪುರ ಎತ್ತಿನಹಳ್ಳದ ಸಮೀಪ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಶಿರಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ …

Leave a Reply

Your email address will not be published. Required fields are marked *

You cannot copy content of this page.