Uncategorized

ಪಡಂಗಡಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಲಾರಿ ಡಿಕ್ಕಿ, ಯುಕ್ಲಾಂಪ್ ಕಟ್!

ಪಡಂಗಡಿ, ಎ. 19: ಹೆದ್ದಾರಿ ಬದಿ ನಿಂತಿದ್ದ ಈಚರ್ ಟಿಪ್ಪರ್‌ಗೆ ಹಿಂಬದಿಯಿಂದ ಬಂದ ಈಚರ್ ಲಾರಿ ಡಿಕ್ಕಿಯೊಡೆದು ಟಿಪ್ಪರ್ ಮುಂದಕ್ಕೆ ಚಲಿಸಿ ಚರಂಡಿಗೆ ಬಿದ್ದ ಪರಿಣಾಮ ಯುಕ್ಲಾಂಪ್ ತುಂಡಾಗಿ ಟಯರ್‌ನ ಆಕ್ಸೆಲ್ ಹಿಂದಕ್ಕೆ ಜಾರಿದೆ.ಗುರುವಾಯನಕೆರೆ ಕಡೆಯಿಂದ ಬಂದಿದ್ದ ಟಿಪ್ಪರ್ ಪಡಂಗಡಿ ನಂದಿಬೆಟ್ಟದ ಬಳಿ ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ಗುರುವಾಯನಕೆರೆ ಕಡೆಯಿಂದ ಕೋಲ್ಡ್‌ಡ್ರಿಂಕ್ಸ್ ತುಂಬಿಸಿಕೊಂಡು ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಡಿಕ್ಕಿಯೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Read More »

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆಯವರಿಂದ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ ಮಾಹಿತಿ ಕರಪತ್ರದ ಬಿಡುಗಡೆ

ವೇಣೂರು, ಎ. 19: ರೂರಲ್‌ನ್ಯೂಸ್‌ಎಕ್ಸ್‌ಪ್ರೆಸ್ ಕನ್ನಡ ವೈಬ್‌ಸೈಟ್‌ನ ಮಾಹಿತಿ ಕರಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದು ಸಂಜೆ ಉಜಿರೆಯ ಸಿದ್ದವನದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮೂಡಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಹಾಗೂ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಉಪಸ್ಥಿತರಿದ್ದರು.

Read More »

ಹೊಕ್ಕಾಡಿ-ಆರಂಬೋಡಿ ರಸ್ತೆಯಿನ್ನು ದ್ವಿಪಥ ! ರೂ. 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ

ಆರಂಬೋಡಿ, ಎ. 19: ಇಲ್ಲಿಯ ಹೊಕ್ಕಾಡಿಗೋಳಿಯಿಂದ ಆರಂಬೋಡಿವರೆಗಿನ ರಸ್ತೆಯಿನ್ನು ರಾಜಮಾರ್ಗವಾಗಲಿದೆ. ಶಾಸಕರ ವಿಶೇಷ ಮುತುರ್ವಜಿಯಿಂದ ಬರೋಬ್ಬರಿ ರೂ. 2 ಕೋಟಿ ಅನುದಾನದಲ್ಲಿ ಈ ರಸ್ತೆಗೆ ಹೊಸ ಚಿತ್ರಣ ನೀಡಲಾಗುತ್ತಿದೆ. ರಶ್ಮಿ ಕನ್‌ಸ್ಟ್ರಕ್ಷನ್ ಕಾರ್ಲ ಅವರು ಇದರ ಕಾಮಗಾರಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ತೀರಾ ಗ್ರಾಮೀಣ ಭಾಗದಲ್ಲಿ ದ್ವಿಪಥ ರಸ್ತೆಯ ನಿರ್ಮಾಣದಿಂದ ಗ್ರಾಮೀಣ ಭಾಗದ ಈ ಪರಿಸರ ಆಕರ್ಷಣೀಯವಾಗಲಿದೆ.

Read More »

ಮುದ್ದಾಡಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ವಿಲೇವಾರಿರೂರಲ್‌ನ್ಯೂಸ್ ಎಕ್‌ಪ್ರೆಸ್ ವರದಿಗೆ ವೇಣೂರು ಗ್ರಾ.ಪಂ. ಸ್ಪಂದನೆ

ವೇಣೂರು, ಎ. 19: ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮುದ್ದಾಡಿ-ಸಿದ್ದಕಟ್ಟೆ ರಸ್ತೆಯ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯನ್ನು ವೇಣೂರು ಗ್ರಾ.ಪಂ. ವಿಲೇವಾರಿ ಮಾಡಿಸಿದೆ.ಮುದ್ದಾಡಿಯ ಜನವಸತಿ ಪ್ರದೇಶದ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾರೋ ಸುರಿದು ಸ್ವಚ್ಛ ಭಾರತ್ ಪರಿಕಲ್ಪನೆಗೆ ಸವಾಲು ಎಸೆದಿರುವ ಬಗ್ಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಪಂಚಾಯತ್‌ನ ಘನತ್ಯಾಜ್ಯ ವಿಲೇವಾರಿ ಘಟಕದ ಅಣತಿ ದೂರದಲ್ಲೇ ಈ ಪಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ಬಂದಿತ್ತು. ಇದೀಗ ವರದಿಯ ಬೆನ್ನಲ್ಲೇ ವೇಣೂರು ಗ್ರಾ.ಪಂ. ಆಡಳಿತ ಸೂಕ್ತ ಕ್ರಮ ಕೈಗೊಂಡಿದ್ದು, ಸ್ಥಳೀಯವಾಗಿ ತ್ಯಾಜ್ಯವನ್ನು ರಸ್ತೆ …

Read More »

ವೇಣೂರು ದೇವಸ್ಥಾನ: ವೀಕ್ಷಕರ ಮನಸೋರೆಗೊಳಿಸಿದ ತುಳುನಾಡ ವೈಭವ

ವೇಣೂರು, ಎ. 19: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜರಗುತ್ತಿದ್ದು, ನಿನ್ನೆ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡ ಕಲಾವಿದರು ವೇಣೂರು ಅವರಿಂದ ನಡೆದ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರನ್ನು ಮನಸೋರೆಗೊಳಿಸಿತು.

Read More »

ಮಂಗಳೂರು ಪ್ರೆಸ್‌ಕ್ಲಬ್ ಆಂತರಿಕ ಲೆಕ್ಕಪರಿಶೋಧಕರಾಗಿ ಜಿತೇಂದ್ರ ಕುಂದೇಶ್ವರ ಆಯ್ಕೆ

ಮಂಗಳೂರು, ಎ. 19: ಮಂಗಳೂರು ಪ್ರೆಸ್‌ಕ್ಲಬ್ ಆಂತರಿಕ ಲೆಕ್ಕಪರಿಶೋಧಕರಾಗಿ ಜಿತೇಂದ್ರ ಕುಂದೇಶ್ವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಪದಾಧಿಕಾರಿಗಳ ಚುನಾವಣಾ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಜಿತೇಂದ್ರ ಕುಂದೇಶ್ವರ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.ಕಾರ್ಕಳ ಹಿರ್ಗಾನ ಮೂಲದವರರಾದ ಜಿತೇಂದ್ರ ಕುಂದೇಶ್ವರ ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿ ಮತ್ತು ಪತ್ರಕರ್ತರ ಗೃಹನಿರ್ಮಾಣ  ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಯ್ಕೆಗೆ ಸಹಕರಿಸಿದ್ದಕ್ಕೆ ಅಭಿನಂದನೆ:  ಕುಂದೇಶ್ವರ್ ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ …

Read More »

ದಿ| ರಾಮ್‌ಪ್ರಸಾದ್ ಮರೋಡಿ ಮನೆಗೆ ತೆರಳಿ ಹೆತ್ತವರ ಆಶೀರ್ವಾದ ಪಡೆದ ಹರೀಶ್ ಪೂಂಜ

ಮರೋಡಿ, ಎ. 19: ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದುಕೊಂಡು ಎಲ್ಲರ ಪ್ರೀತಿ ಗಳಿಸಿದ್ದ ಮರೋಡಿಯ ರಾಮ್‌ಪ್ರಸಾದ್ ಅವರ ಮನೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹರೀಶ್ ಪೂಂಜ ಅವರು ಭೇಟಿ ನೀಡಿ ಹೆತ್ತವರ ಆಶೀರ್ವಾದ ಪಡೆದರು. ಸಂಘಟನೆಯಲ್ಲಿ ದಿ| ರಾಮ್‌ಪ್ರಸಾದ್ ಅವರ ಸೇವೆಯನ್ನು ಸ್ಮರಿಸಿದ ಶಾಸಕರು ಅವರ ಹೆತ್ತವರ ಜತೆ ಕೆಲವೊತ್ತು ಸಮಾಲೋಚನೆ ನಡೆಸಿದರು. ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಜತೆಗಿದ್ದರು.

Read More »

ಓವರ್‌ಲೋಡ್ ಸಮಸ್ಯೆ ಎದುರಿಸುತ್ತಿರುವ ವೇಣೂರು ಮೆಸ್ಕಾಂ! ಅಗತ್ಯವಿರುವ 12.5 ಮೆಗಾವ್ಯಾಟ್ ಟಿ.ಸಿ.ಗೆ ಅನುಮೋದನೆ

ವೇಣೂರು, ಎ. 18: ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ವಿದ್ಯುತ್ ಕೊರತೆ. ಮೊದಲೇ ಬಿಸಿಲಿನ ಬೇಗೆಯಿಂದ ಬಸವಳಿದಿರುವ ಜನ ಈ ಎಲ್ಲದರ ಸಮಸ್ಯೆಯಿಂದ ಅಕ್ಷರಶಃ ಕಂಗಲಾಗಿದ್ದಾರೆ.ಆದರೆ ಸಮಸ್ಯೆ ಇರುವುದು ಮೆಸ್ಕಾಂ ಅಧಿಕಾರಿಗಳಲ್ಲಿ ಅಲ್ಲ. 33 ಕೆ.ವಿ. ವಿದ್ಯುತ್ ಬರುತ್ತಿರುವ ವೇಣೂರು ಮೆಸ್ಕಾಂ ಗರಿಷ್ಠ ಪ್ರಮಾಣದಲ್ಲಿ ತನ್ನ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ. ಬೇಡಿಕೆಯ ಸಾಮಾರ್ಥ್ಯಕ್ಕೆ ಅನುಗುಣವಾಗಿ ವೇಣೂರು ಶಾಖೆಯಲ್ಲಿ ಟಿ.ಸಿ. ಇಲ್ಲದಿರುವುದು ವಿದ್ಯುತ್ ಕಣ್ಣಾಮಚ್ಚಾಲೆ ಆಟವಾಡಲು ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು. 2018ರಲ್ಲಿ ಆರಂಭವಾದ ವೇಣೂರು ಮೆಸ್ಕಾಂ ಉಪಕೇಂದ್ರಕ್ಕೆ ಅಂದು ಸಾಮಾರ್ಥ್ಯಕ್ಕೆ ಅನುಗುಣವಾಗಿ ೫ …

Read More »

ಎ.23-24: ಮುದ್ದಾಡಿ ಕ್ಷೇತ್ರದ ವಾರ್ಷಿಕಜಾತ್ರೆ

ವೇಣೂರು, ಎ. 18: ಬಜಿರೆ ಶ್ರೀ ಕ್ಷೇತ್ರ ಮುದ್ದಾಡಿ ಶ್ರೀ ಮಾರವಾಂಡಿ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ಹಾಗೂ ಧಾರ್ಮಿಕಸಭೆಯು ಎ. 23ರಿಂದ 24ರವರೆಗೆ ಜರಗಲಿದೆ.ಎ. 23ರಂದು ಬೆಳಿಗ್ಗೆ 10 ಗಂಟೆಯಿಂದ ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಶುದ್ಧ ಕಲಶ, ಪ್ರತಿಷ್ಠೆ, ಸಂಜೆ  ಮಾರವಾಂಡಿ ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಲುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಎ. 24ರಂದು ಸಂಜೆ 7 ರಿಂದ ಬಲಿ ಉತ್ಸವ, ರಾತ್ರಿ 8 ಗಂಟೆಯಿಂದ ಧಾರ್ಮಿಕಸಭೆ ಜರಗಲಿದೆ. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ …

Read More »

ಮರೋಡಿಯಲ್ಲಿ ಕುಸಿದ ರಸ್ತೆ; ವಾಹನ ಸವಾರರೇ ಹುಷಾರ್!

ಮರೋಡಿ, ಎ. 17: ಮರೋಡಿ-ಪೆರಾಡಿ ಸಂಪರ್ಕ ರಸ್ತೆಯ ಮರೋಡಿ ಕಿರುಸೇತುವೆಯ ಬಳಿ ರಸ್ತೆ ಕುಸಿದು ಸಂಚಾರಕ್ಕೆ ತೀರಾ ಅಪಾಯ ತಂದೊಡ್ಡಿದೆ. ಕಿರುಸೇತುವೆಗೆ ತಾಗಿಕೊಂಡೇ ರಸ್ತೆ ಬದಿ ಕುಸಿದಿದ್ದು, ಅಲ್ಪ ಪ್ರಮಾಣದಲ್ಲಿದ್ದ ಕುಸಿತ ಇಂದು ಡಾಮಾರು ರಸ್ತೆಯನ್ನೇ ನುಂಗಿದೆ. ಸೇತುವೆ ಬದಿ ತಡೆಗೋಡೆಯಾಗಿ ಕಟ್ಟಲಾದ ಕಲ್ಲುಗಳು ಜರಿದಿದ್ದು, ಅಲ್ಪ ತಿರುವು ಪ್ರದೇಶದಲ್ಲಿರುವ ಈ ಕುಸಿತ ರಾತ್ರಿ ಸಂಚಾರದಲ್ಲಂತೂ ಅಪಾಯ ತಪ್ಪಿದ್ದಲ್ಲ. ಮಳೆಗಾಲದ ಮೊದಲು ದುರಸ್ತಿ ಕಾರ್ಯ ನಡೆಯದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಸಂಚಾರ ಕಡಿತಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಅಥವಾ ಸೂಚನಾ …

Read More »

You cannot copy content of this page.