Uncategorized

ಇಂದು ರಾತ್ರಿ ವೇಣೂರು ಮಹಾಲಿಂಗೇಶ್ವರ ದೇಗುಲದ ಮಹಾರಥೋತ್ಸವ

ವೇಣೂರು, ಎ. 22: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ಇಲ್ಲಿಯ ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಎ. 14ರಿಂದ ಆರಂಭಗೊಂಡಿದ್ದು, ಇಂದು ರಾತ್ರಿ ಮಹಾ ರಥೋತ್ಸವ ಜರಗಲಿದೆ.ದೇವಸ್ಥಾನದಲ್ಲಿ ಇಂದು ಕವಾಟೋದ್ಘಾಟನೆ, ವಿಶೇಷ ಸೇವಾದಿಗಳು, ತುಲಾಭಾರ ಸೇವೆ, ಚೂರ್ಣೋತ್ಸವ ಜರಗಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡರು. ಇಂದು ರಾತ್ರಿ 8-30 ರಿಂದ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಬಳಿಕ ಗಂಟೆ 9 ಗಂಟೆಯಿಂದ ಮಹಾರಥೋತ್ಸವ ಜರಗಲಿದ್ದು, ಅವಭೃತ ಕಟ್ಟೆಪೂಜೆ, ಬಾಕಿಮಾರು ಗದ್ದೆಗೆ ಸವಾರಿ, ದೈವ-ದೇವರ ಭೇಟಿ, ಅವಭೃತ …

Read More »

ಶಿರ್ಲಾಲು, ಸುಲ್ಕೇರಿ, ಅಳದಂಗಡಿಯಲ್ಲಿ ರಂಜಾನ್ ಪ್ರಯುಕ್ತ ಪೊಲೀಸರ ರೂಟ್‌ಮಾರ್ಚ್

ಅಳದಂಗಡಿ, ಎ. 21: ರಂಜಾನ್ ಹಬ್ಬದ ಪ್ರಯುಕ್ತ ಪೊಲೀಸರ ರೂಟ್‌ಮಾರ್ಚ್ ಇಂದು ಶಿರ್ಲಾಲು, ಸುಲ್ಕೇರಿ ಹಾಗೂ ಅಳದಂಗಡಿ ಪರಿಸರದಲ್ಲಿ ಜರಗಿತು. ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ., ಪೊಲೀಸ್ ನಿರೀಕ್ಷಕ ಸತ್ಯನಾರಾಯಣ್, ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಹರೀಶ್, ವೇಣೂರು ಪೊಲೀಸ್ ಉಪನಿರೀಕ್ಷಕರುಗಳಾದ ಶ್ರೀಶೈಲಾ ಡಿ. ಮುರುಗೋಡು, ಆನಂದ್ (ತನಿಖೆ), ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಇದ್ದರು.

Read More »

ಮಾರೂರಿನಲ್ಲಿ ice cream ಸಾಗಿಸುತ್ತಿದ್ದ ಕ೦ಟೈನರ್ ಪಲ್ಟಿ

ಹೊಸ೦ಗಡಿ: ಮೂಡಬಿದಿರೆ-ವೇಣೂರು ರಾಜ್ಯ ಹೆದ್ದಾರಿಯ ಹೊಸ೦ಗಡಿ ಸಮೀಪದ ಮಾರೂರು ಬಳಿ ice cream ಹೊತ್ತೊಯ್ಯುತ್ತಿದ್ದ ಕ೦ಟೈನರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇ೦ದು ಮಧ್ಯಾಹ್ನ 3 ಗ೦ಟೆಯ ಸುಮಾರಿಗೆ ಹೆದ್ದಾರಿ ಬದಿಗೆ ಮಗುಚಿ ಬಿದ್ದಿದೆ. ಚಾಲಕ ನಿರ್ವಾಕರು ಪ್ರಾಣಾಪಾಯದಿ೦ದ ಪಾರಾಗಿದ್ದಾರೆ.

Read More »

ನೋಡಬನ್ನಿ ಬಳಂಜ ಗ್ರಾಮ ಪಂಚಾಯತು!ಆಕರ್ಷಕ ಉದ್ಯಾನವನ, ಪೌಷ್ಠಿಕತೋಟ ಆದಾಯಕ್ಕೊಂದು ಅಡಿಕೆತೋಟ!

ಬಳಂಜ, ಎ. 21: ಚೊಕ್ಕದಾದ ಉದ್ಯಾನವನ.. ಪೌಷ್ಠಿಕ ತೋಟ.. 605 ಅಡಿಕೆ ಸಸಿ… ಇದು ಯಾವುದೋ ಮನೆಯ ಕತೆ ಎಂದು ಊಹಿಸಬೇಡಿ. ಇದು ವೇಣೂರು ಹೋಬಳಿಯ ಬಳಂಜ ಗ್ರಾಮ ಪಂಚಾಯತ್‌ನ ಹೊರಾಂಗಣದ ನೋಟ! ಹೌದು, ಬಳಂಜ ಗ್ರಾ.ಪಂ. ಕಚೇರಿಗೆ ಹೋದಾಗ ವಿಐಪಿಗಳ ಮನೆಗೆ ಹೋದ ಅನುಭವವಾಗುತ್ತದೆ. ಎದುರು ಭಾಗದಲ್ಲಿ ಚೊಕ್ಕದಾದ ಉದ್ಯಾನವನ ನಿರ್ಮಿಸಲಾಗಿದೆ. ಒಂದು ಬದಿಯಲ್ಲಿ ಪೌಷ್ಠಿಕ ತೋಟ, ಪಂಚಾಯತ್ ಹಿಂಬದಿಯಲ್ಲಿ ಬರೊಬ್ಬರಿ 605 ಅಡಿಕೆ ಗಿಡ ನಾಟಿ ಮಾಡಲಾಗಿದ್ದು, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಂಚಾಯತು ಕಚೇರಿಯೂ ಅಷ್ಟೆ. ಅಚ್ಚುಕಟ್ಟಾದ ಪಂಚಾಯತು ಕಚೇರಿ, …

Read More »

ವೇಣೂರು ಎಸ್‌ಡಿಎಂ ಐಟಿಐಯಲ್ಲಿ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ

ವೇಣೂರು, ಎ. 21: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ [ಐಟಿಐ]ಯಲ್ಲಿ ಹಲವರು ರಾಷ್ಟ್ರೀಯ/ಬಹುರಾಷ್ಟ್ರೀಯ ಉದ್ದಿಮೆಗಳಿಂದ ಕ್ಯಾಂಪಸ್ ಸಂದರ್ಶನಗಳು ನಡೆಯುತ್ತಿವೆ.ಮ್ಯಾಕಿನೋ ಇಂಡಿಯಾ, ನಂದಿ ಟೋಯೋಟಾ, ಅದೈತ್ ಹುಂಡೈ ಗಳಿಂದ ಈಗಾಗಲೇ ಕ್ಯಾಂಪಸ್ ಸಂದರ್ಶನಗಳು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಟೋಯೊಟಾ, ಎಲ್ ಎಂಡ್ ಟಿ, ವೋಲ್ವೋ, ಡೈರಿ ಡೇ, ಭವಾನಿ ಇಂಡಸ್ಟ್ರೀಸ್, ಭಾರತ್ ಆಟೋ ಕಾರ್‍ಸ್, ಭಾಷ್, ಸ್ನೈಡರ್ ಎಲೆಕ್ಟ್ರಿಕ್, ಅಥೇರ್ ಎಲೆಕ್ಟ್ರಿಕ್ ವೆಹಿಕಲ್, ಶೀಥಲ್ ರೆಫ್ರಿಜರೇಶನ್, ಮುಂತಾದ ರಾಷ್ಟ್ರದ ಪ್ರಖ್ಯಾತ ಕಂಪಗಳು ಕ್ಯಾಂಪಸ್ ಸಂದರ್ಶನಗಳ ದಿನ ನಿಗದಿಯಾಗಿದ್ದು, ಈ ವರ್ಷವೂ ಎಲ್ಲಾ …

Read More »

ಮರೋಡಿ ಉಮಾಮಹೇಶ್ವರ ದೇಗುಲ: ಏ.22ರಂದು ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ-ಧಾರ್ಮಿಕ ಸಭೆ

ಮರೋಡಿ, ಎ.20: ಇಲ್ಲಿಯ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ (ರಿ) ಇದರ ವತಿಯಿಂದ ಸುಬ್ರಹ್ಮಣ್ಯ ಪ್ರಸಾದ್ ನೇತೃತ್ವದಲ್ಲಿ ೯ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯು ಏ.೨೨ರಂದು ಶನಿವಾರ ಸಂಜೆ ೪ರಿಂದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಜರುಗಲಿದೆ.ಈ ಪ್ರಯುಕ್ತ ರಾತ್ರಿ ೭.೩೦ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಂಗಳೂರಿನ ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸುವರು. ಕಂಬಳ ಕ್ಷೇತ್ರದ …

Read More »

ಕೊಕ್ರಾಡಿ: ಅಡ್ಡಬಿದ್ದ ಮಾರ್ಗಸೂಚಿ ಫಲಕ!

ಅಂಡಿಂಜೆ, ಎ. 20: ಅಂಡಿಂಜೆ ಗ್ರಾ.ಪಂ. ವ್ಯಾಪ್ತಿಯ ವೇಣೂರು-ನಾರಾವಿ ಸಂಪರ್ಕದ ಕೊಕ್ರಾಡಿ ಸರಕಾರಿ ಪ್ರೌಢಶಾಲೆ ಬಳಿ ಇದ್ದ ಸೂಚನಾ ಫಲಕವೊಂದು ಅಡ್ಡಬಿದ್ದಿದೆ.ಇದು ರಸ್ತೆ ಅಗಲೀಕರಣದ ವೇಳೆ ತೆಗೆದು ಇಟ್ಟದ್ದೋ ಅಥವಾ ನಿರ್ಮಿಸಿದ ಫಲಕ ಇತರ ಕಾರಣಗಳಿಗೆ ಅಡ್ಡಬಿದ್ದದ್ದೋ ಗೊತ್ತಿಲ್ಲ. ಆದರೆ ದಾರಿ ತೋರಿಸಬೇಕಾದ ಫಲಕ ಈಗ ದಾರಿ ತಪ್ಪಿಸುವ ಫಲಕವಾಗಿ ಮಾರ್ಪಟ್ಟಿದೆ. ಸ್ಥಳೀಯ ಜನರಿಗೆ ಮಾರ್ಗಸೂಚಿ ಗೊತ್ತಿದೆ. ಆದರೆ ದೂರ ಊರಿನಿಂದ ಬರುವ ಸಾರ್ವಜನಿಕರು, ಪ್ರಯಾಣಿಕರಿಗೆ ಕೊಕ್ರಾಡಿ ಜಂಕ್ಷನ್‌ನಲ್ಲಿ ದಾರಿಯ ಗೊಂದಲ ಆದಾಗ ಮಾಹಿತಿಗಾಗಿ ಸ್ಥಳೀಯ ಅಂಗಡಿಗಳನ್ನು ಆಶ್ರಯಿಸಬೇಕಾಗಿದೆ. ಈ ಬಗ್ಗೆ ಅಂಡಿಂಜೆ ಗ್ರಾ.ಪಂ.ನ …

Read More »

ಆರಂಬೋಡಿ ಗ್ರಾ.ಪಂ. ಕಚೇರಿ ಎದುರಿನ ರಸ್ತೆ ಬದಿಯಲ್ಲೇ ಮದ್ಯದ ಬಾಟಲಿ ತ್ಯಾಜ್ಯ! ಪ್ರಧಾನಿಯವರ ಸ್ವಚ್ಛ ಭಾರತ್ ಪರಿಕಲ್ಪನೆಗೆ ಸವಾಲು?!

ಆರಂಬೋಡಿ, ಎ. 20: ಆರಂಬೋಡಿ ಗ್ರಾ.ಪಂ. ಕಚೇರಿಯ ಎದುರಿನ ರಸ್ತೆಯ ಅಣತಿ ದೂರದಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ಬಂದಿದ್ದು, ಪಂಚಾಯತ್ ಆಡಳಿತ ಸ್ವಚ್ಛತೆಯ ಬಗ್ಗೆ ಜಾಣಕುರುಡು ಪ್ರದರ್ಶಿಸಿದೆಯೇ ಅನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಒಂದೆಡೆ ಸ್ವಚ್ಛ ಭಾರತ್ ಪರಿಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಸ್ವಚ್ಛತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದ್ದರೆ ಇತ್ತ ಕೆಲ ಪಂಚಾಯತ್‌ಗಳು ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಸ್ಥಳೀಯ ಕೇವಲ 20, 25 ಮೀ. ಅಂತರದಲ್ಲೇ ಪುಟಾಣಿಗಳ ಅಂಗನವಾಡಿ ಕೇಂದ್ರವಿದ್ದು, ಈ ಬಾಟಲಿ ತ್ಯಾಜ್ಯಗಳ 100 …

Read More »

ಪಡಂಗಡಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಲಾರಿ ಡಿಕ್ಕಿ, ಯುಕ್ಲಾಂಪ್ ಕಟ್!

ಪಡಂಗಡಿ, ಎ. 19: ಹೆದ್ದಾರಿ ಬದಿ ನಿಂತಿದ್ದ ಈಚರ್ ಟಿಪ್ಪರ್‌ಗೆ ಹಿಂಬದಿಯಿಂದ ಬಂದ ಈಚರ್ ಲಾರಿ ಡಿಕ್ಕಿಯೊಡೆದು ಟಿಪ್ಪರ್ ಮುಂದಕ್ಕೆ ಚಲಿಸಿ ಚರಂಡಿಗೆ ಬಿದ್ದ ಪರಿಣಾಮ ಯುಕ್ಲಾಂಪ್ ತುಂಡಾಗಿ ಟಯರ್‌ನ ಆಕ್ಸೆಲ್ ಹಿಂದಕ್ಕೆ ಜಾರಿದೆ.ಗುರುವಾಯನಕೆರೆ ಕಡೆಯಿಂದ ಬಂದಿದ್ದ ಟಿಪ್ಪರ್ ಪಡಂಗಡಿ ನಂದಿಬೆಟ್ಟದ ಬಳಿ ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ಗುರುವಾಯನಕೆರೆ ಕಡೆಯಿಂದ ಕೋಲ್ಡ್‌ಡ್ರಿಂಕ್ಸ್ ತುಂಬಿಸಿಕೊಂಡು ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಡಿಕ್ಕಿಯೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Read More »

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆಯವರಿಂದ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ ಮಾಹಿತಿ ಕರಪತ್ರದ ಬಿಡುಗಡೆ

ವೇಣೂರು, ಎ. 19: ರೂರಲ್‌ನ್ಯೂಸ್‌ಎಕ್ಸ್‌ಪ್ರೆಸ್ ಕನ್ನಡ ವೈಬ್‌ಸೈಟ್‌ನ ಮಾಹಿತಿ ಕರಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದು ಸಂಜೆ ಉಜಿರೆಯ ಸಿದ್ದವನದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮೂಡಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಹಾಗೂ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಉಪಸ್ಥಿತರಿದ್ದರು.

Read More »

You cannot copy content of this page.