ವಿಶೇಷ ವರದಿ

ದ.ಕ. ಜಿಲ್ಲೆಗೆ ಇಂದು ಸಂಜೆ ಸಾಧಾರಣ ಮಳೆ ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಮೇ 06: ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ದಾಖಲಾಗುತ್ತಿದೆ. ಇದು ಭಾನುವಾರದಿಂದಲೂ ಮುಂದಿನ ನಾಲ್ಕು ದಿನಗಳವರೆಗೂ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.   ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆಗೆ ತುಂತುರು ಮಳೆ ಸಂಭವವಿದೆ. ಉಳಿದೆಡೆ ಸಹಜ ವಾತಾವರಣ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಂಜೆ ಮಳೆ ನಿರೀಕ್ಷೆ  …

Read More »

ಪೂಂಜರ ಅಭೂತಪೂರ್ವ ಗೆಲುವಿಗೆ ದೇವರ ಮೊರೆಹೋದ ಕಾರ್ಯಕರ್ತರು! ಗರ್ಡಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ

ಪಡಂಗಡಿ, ಮೇ 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಪ್ರಚಂಡ ಬಹುಮತದಿಂದ ಗೆಲುವು ಸಾದಿಸುವಂತೆ ಗರ್ಡಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಗರ್ಡಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Read More »

ಕಟಕದಲ್ಲಿ ಮಂಗಳ ಸಂಚಾರದಿಂದ ದರಿದ್ರ ಯೋಗ: ಮೇ 10 ರಿಂದ ಜುಲೈ 01 ರವರೆಗೆ ಈ 4 ರಾಶಿಯವರು ಎಚ್ಚರದಿಂದಿರಬೇಕು..!

ಜ್ಯೋತಿಷ್ಯದ ಪ್ರಕಾರ ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳವನ್ನು ಧೈರ್ಯ ಮತ್ತು ಶೌರ್ಯದ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ಒಂದು ರಾಶಿಯನ್ನು ಸಂಕ್ರಮಿಸಿದಾಗ, ಅದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಉಂಟಾಗುತ್ತದೆ. ಈ ಮಂಗಳ ಪ್ರಸ್ತುತ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದೆ. ಜೊತೆಗೆ ಮೇ 10ರಂದು ಮಂಗಳ ಕರ್ಕಾಟಕಕ್ಕೆ ಹೋಗಲಿದೆ. ಕಟಕ ರಾಶಿಯು ಮಂಗಳನ ದುರ್ಬಲ ರಾಶಿಯಾಗಿದೆ. ಮಂಗಳ ಈ ರಾಶಿಯನ್ನು ಸಂಕ್ರಮಿಸುವುದರಿಂದ ತುಂಬಾ ಕೆಟ್ಟದಾದ ದರಿದ್ರ ಯೋಗ ಉಂಟಾಗುತ್ತದೆ. ಈ ದರಿದ್ರ ಯೋಗದಿಂದಾಗಿ, ಕೆಲವು ರಾಶಿಚಕ್ರದವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. …

Read More »

ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಸಿಕ್ಕಿದ್ದೇನು?

ಬೆಂಗಳೂರು, ಮೇ 03: ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ಆ ಪ್ರಣಾಳಿಕೆಗಳಲ್ಲಿ ಮಕ್ಕಳ ಅಭಿವೃದ್ಧಿ-ರಕ್ಷಣೆಗೆ ಎಷ್ಟು ಆದ್ಯತೆ ಸಿಕ್ಕಿದೆಯೇ? ಎಂಬ ಪ್ರಶ್ನೆ ಹುಟ್ಟಿದೆ. ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಎಲ್ಲ ಪಕ್ಷಗಳು ಹೇಳಿಕೊಂಡಿವೆ. ಅಧಿಕಾರ ಪಡೆಯುವ ಸಂಬಂಧ ಮಹಿಳೆಯರ ಮತಗಳ ಮೇಲೆ ಎಲ್ಲ ಪಕ್ಷಗಳು ಕಣ್ಣಿಟ್ಟಿವೆ. ಅದಕ್ಕಾಗಿಯೇ ಗ್ಯಾಸ್ …

Read More »

ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದೇ?ಹಾಗಾದರೆ ಶೀಘ್ರವೇ ಅಪ್‌ಡೇಟ್ ಮಾಡಿಕೊಳ್ಳಿ..

ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದ್ದಾಗಿದ್ದರೆ, ನೀವು ಶೀಘ್ರವೇ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವುದಕ್ಕೆ ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ. ಹೌದು, ಆಧಾರ್ ದಾಖಲೆಗಳನ್ನು ಯುಐಡಿಎಐ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಕಾರ, ಲಕ್ಷಾಂತರ ಭಾರತೀಯರು ಈ ಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೂ ಕೂಡಾ ಉಚಿತ ಸೇವೆಗಳು …

Read More »

ಮೇ 6ಕ್ಕೆ ಅಪ್ಪಳಿಸಲಿದೆ ವರ್ಷದ ಮೊದಲ ಚಂಡಮಾರುತ, ಕರ್ನಾಟಕಕ್ಕೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಮೇ 02: ಮುಂದಿನ ಕೆಲವೇ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಿಗೆ ಮಳೆಯ ಆಘಾತ ಎದುರಾಗುವ ಸಂಭವವಿದೆ. ಹವಾಮಾನದಲ್ಲಿ ಬದಲಾಗೊಂಡ ವೈಪರಿತ್ಯ ತೀವ್ರ ಸ್ವರೂಪ ಪಡೆದಿರುವುದು ಖಚಿತವಾಗಿದೆ. ಮೇ 6ರಂದು ಬಂಗಾಳಕೊಲ್ಲಿಯಲ್ಲಿ ಈ ವರ್ಷದ ಮೊದಲ ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ. ತೀವ್ರತರ ಬದಲಾವಣೆ ಸಾಧ್ಯತೆ  ಮುಂದಿನ 120 ಗಂಟೆಗಳವರೆಗೆ ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಬಂಗಾಳಕೊಲ್ಲಿಯ ವಾಯುಭಾರತ ಕುಸಿತ ಮೇ 6ರ ವರೆಗೆ ದಿನೇ ದಿನೆ ತೀವ್ರಗೊಳ್ಳುತ್ತಾ ಸಾಗಲಿದೆ. …

Read More »

ದೇಲಂಪುರಿ ಕ್ಷೇತ್ರದಲ್ಲಿ ಮಳೆಗಾಗಿ ಪ್ರಾರ್ಥನೆಶ್ರೀ ಮಹಾದೇವ ಮಹಾಗಣಪತಿ ದೇವರಿಗೆ ಸಿಯಾಳಾಭಿಷೇಕ

ವೇಣೂರು, ಮೇ 1: ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ಶ್ರೀ ದೇವರಿಗೆ ಇಂದು ೧೫೦ ಸಿಯಾಳದ ಅಭಿಷೇಕ ಜರಗಿತು. ಕೆರೆ, ನದಿಗಳು ಬತ್ತಿಹೋಗಿವೆ. ಮಳೆಗಾಲ ರೈತರು, ಕೃಷಿಕರು ಮುಗಿಲತ್ತ ಮುಖ ಮಾಡಿದ್ದು, ಕೆಲವೆಡೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಊರಿನಲ್ಲಿ ಶೀಘ್ರ ಮಳೆ ಬಂದು ವರುಣ ಕೃಪೆತೋರುವಂತೆ ಶ್ರೀ ಮಹಾಗಣಪತಿ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಿಯಾಳದ ಅಭಿಷೇಕ ನೆರವೇರಿಸಲಾಯಿತು. ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು.

Read More »

ಕಾರ್ಕಳದಲ್ಲಿ ತ್ರಿಕೋನ ಸ್ಪರ್ಧೆ: ಬಿಜೆಪಿಗೆ ಬಂಡಾಯದ ಬಿಸಿ, ಕಾಂಗ್ರೆಸ್‌ ಗೆಲುವಿನ ಕನಸು ಮತ್ತಷ್ಟು ಹಸಿ

ಉಡುಪಿ, ಏಪ್ರಿಲ್‌ 30: ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಹಿಂದುತ್ವವೇ ಬಿಜೆಪಿಗೆ ಶಕ್ತಿಯಾಗಿತ್ತು. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮುಖಂಡರೇ ಬಿಜೆಪಿಗೆ ಬಿಸಿ ತುಪ್ಪವಾಗಿದ್ದಾರೆ. ಕಳೆದ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿನ ಅಸಮಧಾನ ಕರಾವಳಿಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದೆ. ಈ ಬಾರಿ ಬಿಜೆಪಿ 13 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಜೊತೆಗೆ ಎರಡು …

Read More »

ಬೇಸಿಗೆಯಲ್ಲಿ ಆಗಾಗ ಮೂತ್ರ ಸೋಂಕು ಉಂಟಾಗುತ್ತಿದೆಯೇ? ತಡೆಗಟ್ಟುವುದು ಹೇಗೆ?

ಬೇಸಿಗೆಕಾಲದಲ್ಲಿ ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ ಎಂದರೆ ಮೂತ್ರನಾಳದ ಸೋಂಕು, ಉರಿಮೂತ್ರ. ಬೇರೆ ಯಾವ ಸೀಸನ್‌ನಲ್ಲೂ ಕಾಡದ ಉರಿಮೂತ್ರ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಕಾರಣ ಒಣ ಹವೆ. ಇದು ಮೂತ್ರನಾಳದ ಸೋಂಕನ್ನು ಹೆಚ್ಚಿಸುತ್ತದೆ. ಡಿಹೈಡ್ರೇಷನ್‌, ಬೆವರು ಒದ್ದೆಯಾದ ಬಟ್ಟೆಗಳು ಸೋಂಕಿ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಿಸುತ್ತೆ. ಇದನ್ನು ತಡೆಗಟ್ಟಲು ಏನು ಮಾಡಬೇಕು, ಉರಿಮೂತ್ರ ಸಮಸ್ಯೆಗೆ ಪರಿಹಾರ ಏನು ಎನ್ನುವುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ನೋಡಿ. ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆ ತಡೆಗಟ್ಟಲು ಪರಿಹಾರಗಳು ನಿಮಗೆ ಸಾಮಾನ್ಯವಾಗಿ ಉರಿಮೂತ್ರದ ಸಮಸ್ಯೆ ಕಾಡುತ್ತೆ ಎಂದಾದಲ್ಲಿ ಈ …

Read More »

ಮೇ 1ರಂದು ದೇಲಂಪುರಿ ಮಹಾಗಣಪತಿ ಕ್ಷೇತ್ರದಲ್ಲಿ ಸಿಯಾಳಾಭಿಷೇಕ

ವೇಣೂರು, ಎ. 28: ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಕುಡಿಯಲು ಮಾತ್ರವಲ್ಲದೆ ಕೃಷಿ ನೀರಿಗೂ ಹಾಹಾಕಾರ ಉಂಟಾಗಿದೆ.ಊರಿನಲ್ಲಿ ಶೀಘ್ರ ಸಮೃದ್ಧಿ ಮಳೆಯಾಗಲಿ ಎಂದು ಕರಿಮಣೇಲು ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವರಿಗೆ ಮೇ 1 ರಂದು ಬೆಳಿಗ್ಗೆ 7-30ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಿ ಸಿಯಾಳಾಭಿಷೇಕ ನೆರವೇರಿಸಲು ಆಡಳಿತ ಸಮಿತಿ ನಿರ್ಧರಿಸಿದೆ.ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ಸ್ವಾಮಿಗೆ ಊರಿನ ಎಲ್ಲ ಭಕ್ತಾದಿಗಳಿಂದ ಎಳನೀರು ಅಭಿಷೇಕ ಸೇವೆ ಜರಗಲಿದ್ದು, ಆದುದರಿಂದ ಸಿಯಾಳ ಒಪ್ಪಿಸಲು ಇಚ್ಚಿಸುವ ಭಕ್ತಾಧಿಗಳು ಎ. 30ರಂದು ಅಥವಾ ಮೇ 1ರ ಮುಂಜಾನೆ ಶ್ರೀ …

Read More »

You cannot copy content of this page.