ವಿಶೇಷ ವರದಿ

ಉಡುಗೋರೆ ಹಣದೊಂದಿಗೆ ಹೆಚ್ಚುವರಿ ರೂ. 1 ನೀಡುವುದೇಕೆ ಗೊತ್ತಾ..?!

ವೇಣೂರು, 5: ಯಾವುದೇ ಕಾರ್ಯಕ್ರಮವಿರಲಿ ವಸ್ತು ರೂಪದ, ಕಾಯಕದ ಸಹಕಾರ ಬೇಡುವ ಕಾಲವೊಂದಿತ್ತು. ಆದರೆ ಬರಬರುತ್ತಾ ಮನುಷ್ಯ ಸ್ವಾವಲಂಬಿಯಾಗಿದ್ದಾನೆ. ತಾನೇ ತಯಾರು ಮಾಡಿ ಇನ್ನೊಬ್ಬರ ಸಹಾಯವನ್ನು ಕಡಿಮೆ ಅಪೇಕ್ಷಿಸಿದಂತೆ ವಸ್ತು ಮತ್ತು ಕಾಯಕ ರೂಪದ ಸಹಕಾರಗಳು ವಿರಳವಾದವು. ಆಗ ಪ್ರಾರಂಭವಾದದ್ದೇ ಈ ಕವರ್ ಎನ್ನುವ ಧನರೂಪದ ಉಡುಗೋರೆ! ಕವರಿನ ಒಳಗಡೆ ನೂರು ರೂಪಾಯಿಯಾದರೂ ಸರಿ ಐನೂರು ರೂಪಾಯಿಯಾದರೂ ಸರಿ ಕೊಡುವವನ ಶಕ್ತಿಯನುಸಾರ ಮುಜುಗರವಿಲ್ಲದೆ ಕೊಡಬಹುದು. ಹಾಗೂ ಇನ್ನೊಬ್ಬರಿಗೆ ಅದರೊಳಗಿನ ಮೊತ್ತ ಗೊತ್ತಾಗದ ಕಾರಣ ಉಡುಗೋರೆಯ ಗಾತ್ರದಿಂದ ಪ್ರತಿಷ್ಠೆಯನ್ನು ಅಳೆದು ಉಪಚರಿಸುವ ಸಂಪ್ರದಾಯ ಇತಿಶ್ರೀ ಹೇಳಬಹುದಾದಂತಹ …

Read More »

ಮಹಿಮಾಸಾಗರ್ ಮುನಿಮಹಾರಾಜರ ಮಹಿಮೆಯಿಂದಲೇ ನಾವು ಬದುಕುಳಿದೆವು!

ವೇಣೂರು, ಮೇ 5: ಭಾರತ ದೇಶ ಇದುವರೆಗೆ ನೋಡಿರದಂತಹ ರೈಲು ದುರಂತವೊಂದನ್ನು ಕಂಡಿದೆ. ಒಡಿಶಾ ಬಾಲಾಸೂರ್ ಬಳಿ ತ್ರಿವಳಿ ರೈಲು ದುರಂತ ನಡೆದಿದ್ದು, ದೇಶವೇ ಬೆಚ್ಚಿಬಿದ್ದಿದೆ. ತ್ರಿವಳಿ ರೈಲು ಅಪಘಾತದಲ್ಲಿ ೨೭೫ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಮಿಕ್ಕಿ ಜನ ಗಾಯಗೊಂಡಿದ್ದಾರೆ.ದ.ಕ., ಉಡುಪಿ, ಸಂಸೆ, ಕಳಸ, ಹೊರನಾಡು ಸುತ್ತಮುತ್ತದ ಜೈನಬಂಧುಗಳು ಮಹಿಮಾಸಾಗರ ಮುನಿ ಮಹಾರಾಜರ ಸಂಕಲ್ಪದಂತೆ ೧೦೮ ಜನ ಜಾರ್ಖಂಡ್ ರಾಜ್ಯದಲ್ಲಿರುವ ಶಿಖರ್ಜಿ ಪವಿತ್ರ ಸ್ಥಳಕ್ಕೆ ತೀರ್ಥಯಾತ್ರೆಗೆ ಹೊರಟಿದ್ದರು. ಅದರಲ್ಲಿ ವೇಣೂರಿನ ಆಶಾಲತಾ ಜೈನ್, ಮಮತಾ ಜೈನ್ ಹಾಗೂ ದೀಪಾಶ್ರೀ ಜೈನ್ ಕತ್ತೋಡಿ ಅವರು …

Read More »

ವಿಶಾಖಪಟ್ಟಣದಲ್ಲಾದ ಆ ಒಂದು ಬದಲಾವಣೆಯಿಂದ ನಾವಿಂದು ಜೀವಂತವಾಗಿದ್ದೇವೆ..!

ನೀರಿಗಾಗಿ ಪರದಾಡಿದರು…. ಖಾಲಿ ಬಾಟಲಿ ಸಂಗ್ರಹಿಸಿದರು…ಗಾಯಾಳು ಯಾತ್ರಿಗಳು ನಮ್ಮ ಬೋಗಿಗೆ ಬಂದರು, ಅಂಗಿ ಪ್ಯಾಂಟ್ ರಕ್ತಸಿಕ್ತವಾಗಿತ್ತು….!ಬ್ಯಾಂಡೇಡ್, ನೋವಿನ ಮಾತ್ರೆ, ತಿಂಡಿ, ಫ್ರುಟ್ಸ್ ಕೊಟ್ಟೆವು, ಮಲಗಲು ನಮ್ಮ ಸೀಟ್ ಬಿಟ್ಟುಕೊಟ್ಟೆವು ಯಾತ್ರಿ ವೇಣೂರು ದೀಪಾಶ್ರೀ ಜೈನ್ ಕತ್ತೋಡಿ ಬಿಚ್ಚಿಟ್ಟ ಘಟನೆಯ ರೋಚನ ಕಥನನಿರೀಕ್ಷಿಸಿ ರೂರಲ್ ನ್ಯೂಸ್ ಎಕ್ಸ್‌ಪ್ರೆಸ್‌ನಲ್ಲಿ…..

Read More »

ಸುರಕ್ಷಿತವಾಗಿ ಯಾತ್ರೆ ಮುಂದುವರಿಸಿದ ಜಿಲ್ಲೆಯ 21 ಯಾತ್ರಾತ್ರಿಗಳು. ಸುಮೇದ್ ಸಿಖರ್ಜಿಯಲ್ಲಿ ದೇವರ ದರ್ಶನ, ದ.ಕ. ಟೀಂ.ನ ಎಕ್ಸ್‌ಕ್ಲೂಸಿವ್ ಫೊಟೋ ಇಲ್ಲಿದೆ ನೋಡಿ

ವೇಣೂರು, ಜೂ. 4: ಒರಿಸ್ಸಾ ರಾಜ್ಯದ ಬಹನಾಗದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ವೇಣೂರು ಸಹಿತ ದ.ಕ. ಜಿಲ್ಲೆಯ 21 ಮಂದಿ ಜನರು ಸಿಲುಕಿಕೊಂಡಿದ್ದರು. ಆದರೆ ಇದೀಗ ಯಾತ್ರಿಗಳು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ಕೊಲ್ಕತ್ತ ನಗರದಿಂದ ಸುಮೇದ್ ಸಿಖರ್ಜಿಗೆ ತಲುಪಿ ದೇವರ ದರ್ಶನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ವೇಣೂರಿನ ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ದ.ಕ. ಜಿಲ್ಲೆಯ ವೇಣೂರು, ಮಂಗಳೂರು, ಉಜಿರೆ, ಧರ್ಮಸ್ಥಳದಿಂದ ಒಟ್ಟು 21 ಮಂದಿ, ಕಳಸ ತಾಲೂಕಿನ ಸಂಸೆ, ಹೊರನಾಡು, ಕುದುರೆಮುಖ ಗ್ರಾಮಗಳ …

Read More »

ಜೂ. 1: ವಿಶ್ವ ಹಾಲು ದಿನ ; ಪ್ರತಿದಿನ ಹಾಲು ಕುಡಿಯುವುದರಿಂದ ಪ್ರಯೋಜನಗಳೇನು?

ಜೂ. 1 ವಿಶ್ವ ಹಾಲು ದಿನ 2022ನ್ನು ಆಚರಿಸಲಾಗುತ್ತಿದೆ. ನಿಮ್ಮ ಹೃದಯದ ಆರೋಗ್ಯ, ಮೂಳೆಗಳ ಆರೋಗ್ಯ ಮತ್ತು ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಹಾಲು ಕುಡಿಯುವುದು ಪ್ರತಿ ಒಬ್ಬರಿಗೂ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ವಿಟಮಿನ್ ಎ ನಂತಹ ಅಗತ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ವಿಶ್ವ ಹಾಲು ದಿನದ ಪ್ರಯುಕ್ತ, ಪ್ರಮಾಣೀಕೃತ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಮತ್ತು ಸಲಹೆಗಾರರಾದ ಹಿಮಾಂಶಿ ಭಾಟಿಯಾ, ಹಾಲನ್ನು ಸೇವಿಸುವುದರಿಂದ ಆಗು ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ.. …

Read More »

ಮಂಗಳೂರಿನಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ, ಯಾಕೆ? ಇಲ್ಲಿದೆ ವಿವರ

ಮಂಗಳೂರು, ಮೇ, 30: ಕೇರಳ ರಾಜ್ಯಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಲಿದೆ. ನಂತರ ರಾಜ್ಯಕ್ಕೂ ಮುಂದಿನ ಏಳೆಂಟು ದಿನದಲ್ಲಿ ಮುಂಗಾರು ಪ್ರವೇಶ ಆಗಲಿದೆ. ಇನ್ನು ಜೂನ್ 1ರಿಂದ ಭಾರೀ ಮಳೆ ಮುನ್ಸೂಚನೆ ಇರುವುದರಿಂದ, ಮತ್ತು ನಷ್ಟ ಅನುಭವಿಸಿದ ಹಿನ್ನೆಲೆ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಏರಲಾಗಿದೆ. ಇದರಿಂದ ಮೂರು ತಿಂಗಳುಗಳ ಕಾಲ ಮೀನುಗಾರಿಕೆಗೆ ವಿರಾಮ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸಕ್ತ ಋತುವಿನ ಆರಂಭದಲ್ಲಿ ಸಮುದ್ರದಲ್ಲಿ ಹೇರಳ ಪ್ರಮಾಣದಲ್ಲಿ ಮತ್ಸ್ಯ ದೊರಕಿದ್ದರೂ, ಫೆಬ್ರವರಿ – ಮಾರ್ಚ್‌ನಲ್ಲಿಯೇ ಮತ್ಸ್ಯ ಕ್ಷಾಮ ತಲೆದೂರಿತ್ತು. ಪರಿಣಾಮ ಮೀನುಗಾರರು ಅವಧಿಗೆ …

Read More »

ಸೋಮವಾರ ಕದ್ರಿ ಕ್ಷೇತ್ರದಲ್ಲಿ ಸಾಮೂಹಿಕ ಸೀಯಾಳಾಭಿಷೇಕ

ಮಂಗಳೂರು, ಮೇ 27: ಇಲ್ಲಿಯ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮೇ 29ರ ಸೋಮವಾರ ಬೆಳಿಗ್ಗೆ 9-30ಕ್ಕೆ ಸಾಮೂಹಿಕ ಸೀಯಾಳಾಭಿಷೇಕ ಜರಗಲಿದೆ.ಲೋಕ ಕಲ್ಯಾಣಾರ್ಥ, ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕ ಆಯೋಜಿಸಲಾಗಿದ್ದು, ತಂತ್ರಿಗಳು, ಅರ್ಚಕರು ಮತ್ತು ಸಿಬ್ಬಂದಿಗಳು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಆಡಳಿತಾಧಿಕಾರಿಗಳು, ಹತ್ತು ಸಮಸ್ತರು ಮತ್ತು ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಭಿಷೇಕ್ಕೆ ಬೇಕಾಗುವ ಸೀಯಾಳವನ್ನು ಮುಂಚಿತವಾಗಿ ದೇವಳಕ್ಕೆ ತಂದೊಪ್ಪಿಸಬಹುದು ಎಂದು ಕಲ್ಕೂರ ಪ್ರತಿಷ್ಠಾನದ …

Read More »

ಹೊಕ್ಕಾಡಿಗೋಳಿ ರೋ| ರಾಘವೇಂದ್ರ ಭಟ್‌ರವರ ಮಾನವೀಯ ಕಾರ್ಯ ಮನೆಗಳಿಗೆ ಉಚಿತ ಕುಡಿಯುವ ನೀರು ಪೂರೈಕೆ..!

ಆರಂಬೋಡಿ, ಮೇ 13: ಈ ಬಾರಿ ಕುಡಿಯುವ ನೀರಿಗೆ ವ್ಯಾಪಕ ಹಾಹಾಕಾರ ಕಂಡು ಬಂದಿದೆ. ಕೃಷಿ ನೀರಿಗೂ ತೊಂದರೆ ಎದುರಾಗಿ ಅಡಿಕೆ ಮರಗಳು ಒಣಗಲು ಆರಂಭಿಸಿದೆ. ಆದರೆ ಕಳೆದ ಎರಡು ಮೂರು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಿಂದ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಕುಡಿಯುವ ನೀರಿಗೆ ಭರ ಇನ್ನೂ ಕಡಿಮೆಯಾಗಿಲ್ಲ. ಕುಡಿಯುವ ನೀರೇ ಇಲ್ಲದ ಸಂದರ್ಭ ಆರಂಬೋಡಿ ಸನಿಹ ಹೊಕ್ಕಾಡಿಗೋಳಿಯ ರೋ| ರಾಘವೇಂದ್ರ ಭಟ್ ಅವರು ಎಲಿಯನಡುಕೋಡು ಗ್ರಾಮದ ಉಪ್ಪಿರ ಪರಿಸರದ ಸರಿಸುಮಾರು ೪೦ ಮನೆಗಳಿಗೆ ಹಲವು ದಿನಗಳಿಂದ ಉಚಿತವಾಗಿ ವಾಹನದ ಮೂಲಕ ನೀರು …

Read More »

ರಾಜ್ಯ ಚುನಾವಣೆಗೆ ಹಿಂದೆಂದೂ ಕಂಡಿರದ ಬಿಗಿ ಭದ್ರತೆ; ಎಡಿಜಿಪಿ ಅಲೋಕ್ ಕುಮಾರ್ ಕೊಟ್ಟರು ಅಂಕಿಅಂಶ

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿದ್ದು, ರಾಜ್ಯದೆಲ್ಲೆಡೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭದ್ರತಾ ಕಾರ್ಯದಲ್ಲಿ 304 ಡಿವೈಎಸ್‌ಪಿ, 991 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 2610 ಪಿಎಸ್‌ಐ, 5803 ಎಎಸ್‌ಐ ಸೇರಿದಂತೆ 84,000 …

Read More »

SSLC: ಹೋಬಳಿ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ವೇಣೂರು! 9 ಶಾಲೆಗಳಿಗೆ ಶೇ. 100 ಫಲಿತಾಂಶ

ವೇಣೂರು: 2023ರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು (ಸೋಮವಾರ, ಮೇ 8) ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾ 83.89 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಲ್ಲದೇ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇಕಡಾ 86.74. ಫಲಿತಾಂಶ ಬಂದಿದ್ದರೆ, ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಯಲ್ಲಿ ಶೇ.85.64ರಷ್ಟು ಫಲಿತಾಂಶ ಬಂದಿದೆ. 14,983 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125ಕ್ಕೆ 125 …

Read More »

You cannot copy content of this page.