ತಾಜಾ ಸುದ್ದಿ

ಆಟೋ ರಿಕ್ಷಾ, ಪಿಕಪ್ ನಡುವೆ ಡಿಕ್ಕಿ- ಬಾಲಕ ಸಾವು

ಕಡಬ: ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬಾಲಕನೋರ್ವ ಮೃತಪಟ್ಟ ಘಟನೆ ಕಡಬ- ಪಂಜ ರಸ್ತೆಯ ಕೋಡಿಂಬಾಳ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ರಿಕ್ಷಾ ಹಾಗೂ ಪಿಕಪ್ ನಡುವೆ ಕೋಡಿಂಬಾಳ ಸಮೀಪದ ಮುರಚೆಡವು ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಂಜ ನಿವಾಸಿ ನವೀನ್ ಎಂಬುವರ ಪುತ್ರ ಹಾರ್ದಿಕ್ (4) ಗಂಭೀರ ಗಾಯಗೊಂಡಿದ್ದ. ತಕ್ಷಣವೇ ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು …

Read More »

ಮುರುಘಾ ಶ್ರೀಗಳ ಬಗ್ಗೆ ಹಳೆ ವಿದ್ಯಾರ್ಥಿನಿ ಬಿಚ್ಚಿಟ್ಟ ಸ್ಫೋಟಕ ಹೇಳಿಕೆ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ಬಗೆದಷ್ಟು, ಕಾಮಕೇಳಿ ಪ್ರಕರಣ ಒಂದೊಂದು ಬಯಲಾಗುತ್ತಿದೆ. ಹಾಸ್ಟೆಲ್‍ನಲ್ಲಿ ಹಿಂಸೆ ಅನುಭವಿಸಿದ ಹಳೆ ವಿದ್ಯಾರ್ಥಿನಿ ಕೂಡ ಇದೀಗ ಸ್ಫೋಟಕ ಮಾಹಿತಿ ನೀಡಿದ್ದಾಳೆ. 2012ರಲ್ಲಿ ನಾನು ಮಠದಲ್ಲಿ ಓದುತ್ತಿದ್ದೆ. 2012ರಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ಆಗ ಹಾಸ್ಟೆಲ್ ವಾರ್ಡನ್ ಆಗಿ ರಶ್ಮಿ ನೇಮಕಗೊಂಡರು. ರಶ್ಮಿ ಬಂದ ಮೇಲೆ ಹಾಸ್ಟೆಲ್ ಚಿತ್ರಣ ಬದಲಾಯಿತು. ನನ್ನನ್ನು ಬಲವಂತವಾಗಿ ಸ್ವಾಮೀಜಿ ಹತ್ತಿರ ಕಳುಹಿಸುತ್ತಿದ್ದರು. ಹಣ್ಣು ಕೊಡುತ್ತಾರೆ ಹೋಗು ಅಂತ ಹೇಳುತ್ತಿದ್ದರು. ನಾನು ಹಾಗೂ ನನ್ನ ಸ್ನೇಹಿತೆ ಹೋಗುತ್ತಿದ್ದೆವು ಎಂದಿದ್ದಾಳೆ. ಎಲ್ಲರೂ ಮಲಗಿದ ಮೇಲೆ …

Read More »

ಉಡುಪಿ:ನೀರಿಗೆ ಬಿದ್ದ ಅಂಡರ್ ವೇರ್:ಸಮುದ್ರಕ್ಕೆ ಧುಮುಕಿ ನಗೆಪಾಟಲೀಗೀಡಾದ ಯುವಕ…

ಉಡುಪಿ: ನೀರಿಗೆ ಬಿದ್ದ ಚಡ್ಡಿಯನ್ನು ತೆಗೆಯಲು ಇಳಿದ ಯುವಕನೊಬ್ಬ ಮೇಲಕ್ಕೆ ಬಾರಲಾಗದೇ ನಗೆಪಾಟಲೀಗೀಡಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೀರಿಗೆ ಇಳಿದ ಯುವಕನನ್ನು ಬೋಟಿನಲ್ಲಿದ್ದ ಯುವಕರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಮೇಲ್ಭಾಗದಲ್ಲಿದ್ದವರು ಎಂತಾ ಕರ್ಮ ಮಾರಾಯ…ಚಡ್ಡಿ ತೆಗೆಯಲು ಯಾರಾದರು ನೀರಿಗೆ ಹಾರ್ತಾರಾ…ಅದು ನೂರು ರೂಪಾಯಿಗೆ ಸಿಗುತ್ತದೆ….ಎಂದು ಹೇಳುವುದು ಕೂಡಾ ವಿಡಿಯೋದಲ್ಲಿ ಕೇಳುತ್ತಿದೆ. ಕರಾವಳಿಯ ಮೀನುಗಾರಿಕಾ ಬಂದರೊಂದರಲ್ಲಿ ನಡೆದ ಪ್ರಸಂಗ ಇದು. ಮೀನುಗಾರಿಕೆ ದೋಣಿಯ ಕಾರ್ಮಿಕರೊಬ್ಬರ ಅಂಡರ್ ವೇರ್ ನೀರಿಗೆ ಬಿದ್ದಿದ್ದು, ಅದನ್ನು ತೆಗೆಯಲು ನೀರಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬರಲಾಗದೇ …

Read More »

ಅನಾರೋಗ್ಯದಲ್ಲಿರುವ ಲಾಲುಗೆ ಮೂತ್ರಪಿಂಡ ದಾನ ಮಾಡಲಿದ್ದಾರೆ ಸಿಂಗಪುರದಲ್ಲಿರುವ ಮಗಳು ರೋಶಿನಿ

ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿರುವ ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಪುರದಲ್ಲಿರುವ ಮಗಳು ರೋಶಿನಿ ಯಾದವ್ ಕಿಡ್ನಿ ದಾನ ಮಾಡಲಿದ್ದಾರೆ ಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ. ಸಿಂಗಪುರದಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ 74 ವರ್ಷದ ಲಾಲು, ಕಳೆದ ತಿಂಗಳು ಸ್ವದೇಶಕ್ಕೆ ವಾಪಸ್ ಆಗಿದ್ದರು. ಆರೋಗ್ಯದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಆರ್‌ಜೆಡಿ ಅಧ್ಯಕ್ಷರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗಪುರದಲ್ಲಿರುವ ಅವರ ಮಗಳು ರೋಶಿನಿ ಯಾದವ್, ತಮ್ಮ ತಂದೆಗಾಗಿ ಮೂತ್ರಪಿಂಡ ನೀಡಲು ಮುಂದೆ ಬಂದಿದ್ದಾರೆ …

Read More »

ಖಾಸಗಿ ಬಸ್ ನಲ್ಲಿ ಮಹಿಳೆ ಎದುರು ಪ್ಯಾಂಟ್ ಜೀಪ್ ಜಾರಿಸಿದ ಬಸ್ ಕ್ಲೀನರ್; ಆರೋಪಿಯ ಬಂಧನ

ಮಂಗಳೂರು : ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೈದ್ಯೆಗೆ ಗುಪ್ತಾಂಗ ತೋರಿಸಿದ ಬಸ್ ಕ್ಲೀನರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್(26) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಮಹಿಳಾ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ‌ರು. ಬಸ್ ಇಂದು ಮುಂಜಾನೆ ಉಳ್ಳಾಲ ತಲುಪಿದಾಗ ಬಸ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ಧ ಮಹಮ್ಮದ್ ಇಮ್ರಾನ್ ತನ್ನ ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. …

Read More »

ಕರಾವಳಿಗರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಈ ಜಿಲ್ಲೆಗಳಲ್ಲಿ ಶೀಘ್ರವೇ `ಕುಚಲಕ್ಕಿ’ ವಿತರಣೆ

ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ಯೋಜನೆಯಡಿ ಕುಚಲಕ್ಕಿ ವಿತರಣೆ ಮಾಡಲಾಗುವುದು. ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಖರೀದಿಸುವ ಪ್ರತಿ ಕ್ವಿಂಟಲ್ ಕುಚಲಕ್ಕಿ ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ. …

Read More »

ಪುತ್ತೂರು: ಅನಾರೋಗ್ಯದಿಂದ ಅಸುನೀಗಿದ ಪ್ರೌಢಶಾಲಾ ವಿದ್ಯಾರ್ಥಿನಿ

ಪುತ್ತೂರು: ಪುತ್ತೂರಿನ ರಾಮಕೃಷ್ಣ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಅನಾರೋಗ್ಯದಿಂದಾಗಿ ಇಂದು ಮೃತಪಟ್ಟಿದ್ದಾರೆ. ಬನ್ನೂರು ಗ್ರಾಮದ ಸೇಡಿಯಾಪು ಕಂಜೂರಿನ ಆನಂದ ಕುಲಾಲ್‌ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕೃತಿಕಾ (13) ಮೃತ ದುರ್ದೈವಿ. ಕೃತಿಕಾ ಪುತ್ತೂರಿನ ರಾಮಕೃಷ್ಣ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಮೃತರು ತಂದೆ-ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Read More »

BREAKING NEWS : ಚೀನಾದಲ್ಲಿ ಮತ್ತೆ ಮಹಾಮಾರಿ ಕೊರೊನಾ ಅಟ್ಟಹಾಸ : ಲಾಕ್ ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ಮತ್ತೆ ಮಾಹಾಮಾರಿ ಕೊರೊನಾ ಅಟ್ಟಹಾಸ ಶುರುಮಾಡಿದ್ದು, ಚೀನಾದ ದಕ್ಷಿಣ ಉತ್ಪಾದನಾ ಕೇಂದ್ರವಾದ ಗುವಾಂಗ ಝೌ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಚೀನಾದಾದ್ಯಂತದ ಕೊರೊನಾ ಪ್ರಕರಣಗಳು ಕೆಲ ದಿನಗಳಿಂದ ಹೆಚ್ಚಳವಾಗುತ್ತಿದ್ದು, 50 ಲಕ್ಷ ಜನಸಂಖ್ಯೆ ಇರುವ ಗುವಾಂಗ್ ಝೌ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಕಳೆದ 6 ತಿಂಗಳಿನಿಂದ ಗುವಾಂಗ್ ಝೌ ನಗರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿವೆ. ಗುವಾಂಗ್ ಝೌ ನಲ್ಲಿ ನಿನ್ನೆ ಒಂದೇ ದಿನ 2,637 ಮಂದಿಗೆ …

Read More »

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ (10-11-2022)

 ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು …

Read More »

ಪ್ರಧಾನಿ ಮೋದಿಯಿಂದ KIA ಟರ್ಮಿನಲ್ 2 ನಾಳೆ ಉದ್ಘಾಟನೆ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಬೃಹತ್ ವಿಸ್ತರಣೆಯ ಅಂಗವಾಗಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿದ್ದು, ಸುಮಾರು 13,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಸಿದ್ಧವಾಗಿರುವ ಈ ಟರ್ಮಿನಲ್ 2 ಉದ್ಯಾನ ನಗರಿ ಖ್ಯಾತಿಗೆ ಮತ್ತೊಂದು ಗರಿಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಉದ್ಘಾಟಿಸುತ್ತಿದ್ದು, ಈ ಟರ್ಮಿನಲ್ 2 ಉದ್ಯಾನನಗರಿಯ ಕೀರ್ತಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇಷ್ಟಕ್ಕೂ ಈ ಟರ್ಮಿನಲ್ 2ನ …

Read More »

You cannot copy content of this page.