ತಾಜಾ ಸುದ್ದಿ

ಕರಾವಳಿಯಲ್ಲಿ ‘ಧರ್ಮ ದಂಗಲ್’ : ಕುಕ್ಕೆ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ

ಮಂಗಳೂರು : ಮಂಗಳೂರು ಸ್ಪೋಟ ಘಟನೆ ಬಳಿಕ ರಾಜ್ಯದ ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗಿದೆ. ಈ ಬಾರಿ ಕುಕ್ಕೆ ಸುಬ್ರಮಣ್ಯದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸದಂತೆ ನಿಷೇಧ ಹೇರಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಈ ಬಾರಿ ಷಷ್ಟಿ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸದಂತೆ ನಿಷೇಧ ಹೇರಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಅಲ್ಲದೇ ಹಿಂದೂ ಸಂಘಟನೆಯ ಮುಖಂಡ ಹರಿಪ್ರಸಾದ್ ಎಂಬವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಕ್ಷೇತ್ರದ ಪಾವಿರ್ತ್ಯತೆ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. ಪ್ರತೀ ವರ್ಷ ಕುಕ್ಕೆ …

Read More »

ನಾಳೆಯಿಂದ ಓಟಿಟಿಯಲ್ಲಿ ಕಾಂತಾರ….!!

ಬೆಂಗಳೂರು : ಸಿನೆಮಾ ಮಂದಿರಗಳಲ್ಲಿ ಕೋಟಿಗಟ್ಟಲೇ ಹಣ ಬಾಚಿದ್ದ ಕಾಂತಾರ ಸಿನೆಮಾ ನಾಳೆಯಿಂದ ಓಟಿಟಿಯಲ್ಲಿ ಬರಲಿದೆ. ಅಮೆಜಾನ್ ಪ್ರೈಮ್ ನಲ್ಲಿ ನಾಳೆಯಿಂದ ಅಭಿಮಾನಿಗಳಿಗೆ ಕಾಂತಾರ ಸಿನೆಮಾ ಸಿಗಲಿದೆ. ರಿಷಬ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ ವಿಶ್ವದ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಮಂದಿರದಲ್ಲಿ ಲೂಟಿ ಮಾಡುತ್ತಿರುವ ಈ ಸಿನಿಮಾ ಈಗ ಒಟಿಟಿಯತ್ತ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ನವೆಂಬರ್ 24ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಬರಲಿದೆ. ಈ ಮೂಲಕ ಒಟಿಟಿ ಪ್ರಿಯರಿಗೆ ಕಾಂತಾರ ತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Read More »

ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ

ಬೆಂಗಳೂರು: ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಇಂದು ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಹೊಸ ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) …

Read More »

ಮಂಗಳೂರು :ಕುಕ್ಕರ್ ಬಾಂಬ್ ಸ್ಪೋಟ ; ಆಟೋಚಾಲಕನಿಗೆ ಗೃಹಸಚಿವರಿಂದ ಹಣಕಾಸಿನ ನೆರವು…!!

ಮಂಗಳೂರು :ಕುಕ್ಕರ್ ಬಾಂಬ್ ಸ್ಪೋಟ ಸಂದರ್ಭ ಗಾಯಗೊಂಡಿದ್ದ ಆಟೋ ಚಾಲಕನನ್ನು ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ಯಾಗಿ ಆರೋಗ್ಯ ವಿಚಾರಿಸಿದ್ದು, ಈ ವೇಳೆ ವೈಯುಕ್ತಿಕವಾಗಿ 50 ಸಾವಿರ ಧನ ಸಹಾಯ ಮಾಡಿದ್ದಾರೆ. ಆಟೋ ರಿಕ್ಷಾದಲ್ಲಿ ಬಾಂಬ್ ಸ್ಪೋಟ ನಡೆದ ಸ್ಥಳಕ್ಕೆ ಪೊಲೀಸ್ ಆಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹ ಸಚಿವರು ಬಳಿಕ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋಚಾಲಕನನ್ನು ಬೇಟಿ ಮಾಡಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಗೃಹ ಸಚಿವರು ವೈಯಕ್ತಿಕವಾಗಿ 50 ಸಾವಿರ …

Read More »

‘ಅಫ್ತಾಬ್ ನನ್ನನ್ನು ಕೊಂದು ಪೀಸ್‌ ಮಾಡಿ ಎಸೆಯುತ್ತಾನೆ’: 2 ವರ್ಷದ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ..!

ಮುಂಬೈ: 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕುಕೊಂಡಿದ್ದು, ಬಗೆದಷ್ಟೂ ಭೀಕರ ವಿಚಾರಗಳು ಹೊರಬರುತ್ತಿವೆ. ಅಫ್ತಾಬ್ ನನ್ನನ್ನು ಪೀಸ್‌ ಪೀಸ್‌ ಮಾಡಿ ಎಸೆಯುತ್ತಾನೆ ಎಂದು ಶ್ರದ್ಧಾ ವಾಲ್ಕರ್ 2 ವರ್ಷದ ಹಿಂದೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳಂತೆ. ಹೌದು. ಮಹಾರಾಷ್ಟ್ರದ ಪಲ್ಗರ್‌ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 23 ನವೆಂಬರ್ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದಿದೆ. ಅದರಲ್ಲಿ ಅಫ್ತಾಬ್ ತನಗೆ ಹೊಡೆಯುತ್ತಿದ್ದು ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದಾನೆ ಎಂದು ಶ್ರದ್ಧಾ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೆ …

Read More »

ಮಂಗಳೂರು ಸ್ಪೋಟ ಪ್ರಕರಣ ‘NIA’ ತನಿಖೆಗೆ : ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?

ಮಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ ಐ ಎ ತನಿಖೆಗೆ ನೀಡುವ ಬಗ್ಗೆ ಎರಡು ದಿನದಲ್ಲಿ ನಿರ್ಧರಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸ್ಪೋಟ ಪ್ರಕರಣ ಹಿನ್ನೆಲೆ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರ ಜೊತೆ ಮಾತನಾಡಿದರು.ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಯನ್ನು ಎನ್ ಐ ಗೆ ನೀಡುವ ಕುರಿತು ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು. ಕುಕ್ಕರ್ ಬಾಂಬ್ ಸರಿಯಾಗಿ ಸ್ಪೋಟಗೊಂಡಿದ್ದರೇ ಭಾರಿ ಅವಘಡ …

Read More »

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ‌ ಗೃಹ ಸಚಿವರ‌ ಭೇಟಿ

ಮಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಅವರು ಗರೋಡಿ ಬಳಿಯ ಆಟೋರಿಕ್ಷಾ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಅಲ್ಲಿಯೇ ಇರಿಸಲಾಗಿರುವ ಆಟೋರಿಕ್ಷಾವನ್ನು ವೀಕ್ಷಿಸಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ‌ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನಲ್ಲಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ …

Read More »

‘ಹಣಕ್ಕಾಗಿ ದೈವರಾಧನೆ ದುರುಪಯೋಗ’ : ‘ತುಳುನಾಡ ದೈವಾರಾಧಕʼರಿಂದ ಎಚ್ಚರಿಕೆ..! ಏನಿದು ಪ್ರಕರಣ ….ಈ ಸುದ್ದಿ ಓದಿ

ಮಂಗಳೂರು : ಕಾಂತಾರ ಸಿನಿಮಾ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳು ಕೆಲವೊಂದು ವಿವಾದಾತ್ಮಕ ಪೋಸ್ಟ್​ಗಳು ಹರಿದಾಡುತ್ತಿದ್ದು, ಈ ರೀತಿ ಮಾಡುತ್ತಿರುವವರಿಗೆ ತುಳುನಾಡ ದೈವಾರಾಧಕರು ಖಡಕ್ ವಾರ್ನಿಂಗ್ (Warning) ಕೊಟ್ಟಿರುವ ಪ್ರಕಟಣೆಯ ಎಂಬ ಮಾಹಿತಿ ಲಭ್ಯವಾಗಿದೆ ದೈವರಾಧನೆ ಹೆಚ್ಚಾಗಿ ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ ಎನ್ನಲಾಗುತ್ತಿದ್ದು, ಇದೀಗ, ಜನರ ದೈವಗಳ ಮೇಲಿನ ನಂಬಿಕೆಯನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆಂಬ ಆರೋಪವು ಕೇಳಿ ದೈವದ ಹೆಸರಲ್ಲಿ ಅನೇಕರು ‘ಹಣ ಲೂಟಿ ಮಾಡುವ ಪ್ರಯತ್ನ’ ನಡೆಸುತ್ತಿದ್ದಾರೆ ಎನ್ನುವ ಆರೋಪ ಜೋರಾಗಿ ಸದ್ದು ಮಾಡುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಕೆಲವೊಂದು ಪೋಸ್ಟ್​ಗಳು …

Read More »

‘ಹಿಂದೂ’ ವ್ಯಕ್ತಿಯಂತೆ ವೇಷ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ : ಸ್ಪೋಟಕ ಮಾಹಿತಿ ಬಯಲು

ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣ ರಾಜ್ಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಹಿಂದೂ ವ್ಯಕ್ತಿಗಳ ವೇಷ ಧರಿಸಿ ರಾಜ್ಯದಲ್ಲಿ ದೊಡ್ಡ ಅನಾಹುತ ನಡೆಸಲು ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಮಂಗಳೂರು ಸ್ಪೋಟ ಪ್ರಕರಣದಲ್ಲೂ ಶಾರೀಕ್ ಹಿಂದೂ ವ್ಯಕ್ತಿ ವೇಷ ಧರಿಸಿ ಕೃತ್ಯ ನಡೆಸಲು ಸಂಚು ರೂಪಿಸಿದ್ದಾನೆ ಎನ್ನುವ ಮಾಹಿತಿ ಬಯಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟಿಸಿ ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಶಾರೀಕ್ ಭಾರೀ ಸಂಚು ರೂಪಿಸಿದ್ದನು ಎನ್ನಲಾಗಿದೆ. ಹುಬ್ಬಳ್ಳಿ ಮೂಲದ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಬಳಸಿಕೊಂಡ ಈತ ಸಂಪೂರ್ಣವಾಗಿ …

Read More »

ಈಕೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣ ಎಷ್ಟೆಂದರೆ, ಖಂಡಿತ ಬೆರಗಾಗ್ತೀರಾ!

ಮಲಪ್ಪುರಂ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್​​ ಮಾಡುವ ವ್ಲಾಗರ್​ ಮತ್ತು ಆಕೆಯ ಪತಿ, ಹನಿಟ್ರ್ಯಾಪ್​ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರಿಂದ ಬಂಧನವಾಗಿದ್ದಾರೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್​ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವ್ಲಾಗರ್​ ರಶೀದಾ (28) ಮತ್ತು ಆಕೆಯ ಪತಿ ನಿಶಾದ್​ ಬಂಧಿತ ಆರೋಪಿಗಳು. ಇಬ್ಬರು ಕೂಡ ತ್ರಿಸ್ಸೂರ್​ನ ಕುನ್ನಮಕುಲಮ್​ ಮೂಲದವರು. ವ್ಲಾಗರ್​ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಈಕೆಯ ವಿಡಿಯೋ ನೋಡಿಯೇ ಆಕೆಯ ಹನಿಟ್ರ್ಯಾಪ್​ ಬಲೆಗೆ 68 ವರ್ಷದ …

Read More »

You cannot copy content of this page.