ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ

ಬೆಂಗಳೂರು: ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಇಂದು ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಹೊಸ ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಿಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

 

ಹೀಗಿದೆ ನಂದಿನ ಹಾಲು, ಮೊಸರಿನ ಪರಿಷ್ಕೃತ ನೂತನ ದರಪಟ್ಟಿ

  • ಪ್ರಸ್ತುತ ಟೋಲ್ ಹಾಲಿನ ದರ ರೂ.37 ಇತ್ತು. ಇದೀಗ 2 ರೂ ಹೆಚ್ಚಳದ ನಂತ್ರ ರೂ.39ಕ್ಕೆ ತಲುಪಿದೆ.
  • ಹೋಮೋಜಿನೈಸ್ಡ್ ಟೋನ್ಡ್ ಹಾಲು ರೂ.38ರಿಂದ ರೂ.40ಕ್ಕೆ ಹೆಚ್ಚಳ
  • ಹೋಮೋಜಿನೈಸ್ಡ್ ಹಸುವಿನ ಹಾಲು ರೂ.42 ರಿಂದ 44ಕ್ಕೆ ಹೆಚ್ಚಳ
  • ಸ್ಪೆಷಲ್ ಹಾಲು ರೂ.43 ರಿಂದ 45ಕ್ಕೆ ಹೆಚ್ಚಳ
  • ಶುಭಂ ಹಾಲು ರೂ.43 ರಿಂದ 45ಕ್ಕೆ ಏರಿಕೆ
  • ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ರೂ.44 ರಿಂದ 46ಕ್ಕೆ ಹೆಚ್ಚಳ
  • ಸಮೃದ್ಧಿ ಹಾಲು ರೂ.48 ರಿಂದ 50ಕ್ಕೆ ಹೆಚ್ಚಳ
  • ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) ರೂ.50 ರಿಂದ 52ಕ್ಕೆ ಹೆಚ್ಚಳ
  • ಡಬಲ್ ಟೋನ್ಡ್ ಹಾಲು ರೂ.36 ರಿಂದ 38ಕ್ಕೆ ಏರಿಕೆ
  • ಇನ್ನೂ ಮೊಸರು ಪ್ರತಿ ಕೆಜಿಗೆ ರೂ.45 ರಿಂದ 47 ಹೆಚ್ಚಳ ಮಾಡಲಾಗಿದೆ.

ಈ ಮೇಲ್ಕಂಡ ನಂದಿನ ಹಾಲು, ಮೊಸರಿನ ಪರಿಷ್ಕೃತ ದರ ಪಟ್ಟಿಗಳು ನಾಳೆಯಿಂದ ಜಾರಿಗೆ ಬರಲಿದೆ ಎಂಬುದಾಗಿ ಕೆಎಂಎಫ್ ತಿಳಿಸಿದೆ.

Check Also

ಸುಳ್ಯ: ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಢಿಕ್ಕಿ- ಕಾರು ಜಖಂ

ಸುಳ್ಯ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಡಿರುವ ಘಟನೆ ಸುಳ್ಯ ಗಾಂಧಿನಗರ …

Leave a Reply

Your email address will not be published. Required fields are marked *

You cannot copy content of this page.