March 26, 2025
tgj

ಮಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ ಐ ಎ ತನಿಖೆಗೆ ನೀಡುವ ಬಗ್ಗೆ ಎರಡು ದಿನದಲ್ಲಿ ನಿರ್ಧರಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸ್ಪೋಟ ಪ್ರಕರಣ ಹಿನ್ನೆಲೆ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರ ಜೊತೆ ಮಾತನಾಡಿದರು.ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ತನಿಖೆಯನ್ನು ಎನ್ ಐ ಗೆ ನೀಡುವ ಕುರಿತು ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಕುಕ್ಕರ್ ಬಾಂಬ್ ಸರಿಯಾಗಿ ಸ್ಪೋಟಗೊಂಡಿದ್ದರೇ ಭಾರಿ ಅವಘಡ ನಡೆಯುತಿತ್ತುಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.ಮಂಗಳೂರು ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಗಾಯಾಳು ಆಟೋ ಚಾಲಕ ಪುರುಷೋತ್ತಮ್ ನನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಸಚಿವರು ಕುಕ್ಕರ್ ಬಾಂಬ್ ಸರಿಯಾಗಿ ಸ್ಪೋಟಗೊಂಡಿದ್ದರೇ ಭಾರಿ ಅವಘಡ ನಡೆಯುತಿತ್ತು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಮಂಗಳೂರು ಸ್ಪೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪುರುಷೋತ್ತಮ್ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ , ಸದ್ಯ ಕೇವಲ ಬೆಂಕಿ ಮಾತ್ರ ಬಂದಿದೆ. ಆರೋಪಿ ಗುಣಮುಖನಾದ ಬಳಿಕ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ ಎಂದರು.

ಮಂಗಳೂರು ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಗಾಯಾಳು ಆಟೋ ಚಾಲಕ ಪುರುಷೋತ್ತಮ್ ನನ್ನು ಭೇಟಿ ಮಾಡಿದ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಸಚಿವರು ಗಾಯಾಳು ಪುರುಷೋತ್ತಮ್ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ , ಪ್ರಕರಣ ಸಂಬಂಧ ಹಲವರನ್ನು ವಿಚಾರಣೆಗೊಳಪಡಿಸಿದ್ದೇವೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *

You cannot copy content of this page.