ತಾಜಾ ಸುದ್ದಿ

BREAKING NEWS : ಅಕ್ರಮ ಎಸಗಿದ ‘ನ್ಯಾಯಬೆಲೆ ಅಂಗಡಿ’ ಲೈಸೆನ್ಸ್ ರದ್ದು ; ಸರ್ಕಾರದ ಕ್ರಮ ಎತ್ತಿ ಹಿಡಿದ ‘ಹೈಕೋರ್ಟ್’

ಬೆಂಗಳೂರು : ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಗೊಳಿಸಿ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರದ ಕ್ರಮವನ್ನ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಸಿಜೆ ಪಿ.ಬಿ ವರಾಳೆ, ನ್ಯಾ. ಅಶೋಕ್‌ಎಸ್ ಕಿಣಗಿರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ರಾಮನಗರದ ಸಂಜೀವಯ್ಯ ಎಂಬುವವರ ನ್ಯಾಯಬೆಲೆ ಅಂಗಡಿ ಲೈಸನ್ಸ್ ರದ್ದುಗೊಳಿಸಿದೆ. ಈ ಮೂಲಕ ರಾಮನಗರ ಜಿಲ್ಲಾಡಳಿತದ ಕ್ರಮ ಹೈಕೋರ್ಟ್ ಎತ್ತಿ ಹಿಡಿದಿದೆ. ಪಡಿತರ ಧಾನ್ಯ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಪಡಿತರ ಕಾರ್ಡ್‍ದಾರರಿಗೆ ಧಾನ್ಯ ನೀಡದಿರುವಂತಹ ಎಲ್ಲ ಪ್ರಕರಣಗಳು ಲೈಸನ್ಸ್ ರದ್ದು ಮಾಡಲು …

Read More »

BREAKING NEWS: ಸ್ಯಾಂಡಲ್‌ವುಡ್ ನಟಿಗೆ ಎರಡು ವರ್ಷ ಜೈಲು ಶಿಕ್ಷೆ….ಯಾಕೆ ಗೊತ್ತಾ..?

ಬೆಂಗಳೂರು: ‘ಅನುಭವʼ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ ಹೈಕೋರ್ಟ್ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ತಿ ಅವರ ಏಕಸದಸ್ಯ ಪೀಠ ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಈ ಆದೇಶವನ್ನು ಹೊರಡಿಸಿದೆ.   ನಟಿ ಅಭಿನಯ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಟಿ.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ`ಅನುಭವ’ದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Read More »

ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ 15 ವರ್ಷದ ಬಾಲಕಿ, ಸಾಕ್ಷ್ಯ ನಾಶಪಡಿಸಲು ಈ ಕೃತ್ಯ

ಗುಜರಾತ್ : ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕಿಯನ್ನು ಗುಜರಾತ್‌ನ ಸೂರತ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ 20 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದು, ಅದರಿಂದ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು, ಆಕೆ ಮಗುವನ್ನು ಎಸೆಸಿದ್ದಾಳೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ನಗರದ ಮಗ್ದಲ್ಲಾ ಪ್ರದೇಶದಲ್ಲಿ ರಸ್ತೆಯ ಮೇಲೆ ಬಿದ್ದಿರುವ ನವಜಾತ ಶಿಶುವನ್ನು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಮಗು ಸಾವನ್ನಪ್ಪಿರುವ ಬಗ್ಗೆ …

Read More »

ವಿಟ್ಲ: ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಪ್ರೇಮ ಪತ್ರ ಬರೆದ ಹಿಂದೂ ವಿದ್ಯಾರ್ಥಿನಿ-10 ವಿದ್ಯಾರ್ಥಿಗಳು ಡಿಬಾರ್!

ವಿಟ್ಲ;ಖಾಸಗಿ ಸಂಸ್ಥೆಯಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳಿಬ್ಬರ ಪ್ರೇಮಪ್ರಕರಣ ಬಯಲಾಗಿ ಉಂಟಾದ ಗೊಂದಲದಿಂದ ಪ್ರಾಂಶುಪಾಲರು 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ಬಗ್ಗೆ ವರದಿಯಾಗಿದೆ. ದ್ವಿತೀಯ ಪಿಯುಸಿಲ್ಲಿ ಓದುತ್ತಿದ್ದ ಕೇಪು ಮೂಲದ ವಿದ್ಯಾರ್ಥಿನಿ, ಕೆಲಿಂಜ ಮೂಲದ ಮುಸ್ಲಿಂ ವಿದ್ಯಾರ್ಥಿಗೆ ಪೇಮಪತ್ರ ಬರೆದಿದ್ದಳು ಎನ್ನಲಾಗಿದೆ. ಇದನ್ನು ತಿಳಿದು ಎರಡೂ ಕೋಮಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಿಸಿದ್ದರು ಎನ್ನಲಾಗಿದೆ.ಇದರಿಂದ ಪ್ರಾಂಶುಪಾಲರು ಶಿಸ್ತು ಕ್ರಮದ ಭಾಗವಾಗಿ ಎರಡೂ ಕಡೆಯ 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ ಆದೇಶ ನೀಡಿರುವ ಬಗ್ಗೆ ವರದಿಯಾಗಿದೆ. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ವಿಚಾರವನ್ನು ಕೆಲ ಸಂಘಟನೆಗಳು ಖಂಡಿಸಿದ್ದು, …

Read More »

ಒಂದೆಡೆ ಮದುವೆ, ಮತ್ತೊಂದೆಡೆ ಮಾರಾಮಾರಿ- ವೈರಲ್ ವಿಡಿಯೋ ನೋಡಿ

ಮುಂಬೈ: ವೇದಿಕೆಯಲ್ಲಿ ಮದುವೆ ಕಾರ್ಯಕ್ರಮ ಒಂದೆಡೆ ನಡೆಯುತ್ತಿದ್ದು, ಮತ್ತೊಂದು ಕಡೆ ಬಂಧು ಮಿತ್ರರ ನಡುವೆ ಗಲಾಟೆಯಾಗುತ್ತಿದೆ. ಮದುವೆ ಮಂಟಪದಲ್ಲಿ ಬಂಧುಗಳ ನಡುವೆ ಕೈ-ಕೈ ಮಿಲಾಯಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಆರ್ ಕೆ ರಾಜ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ವೇದಿಕೆಯಲ್ಲಿ ವಧು ವರರು ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ವೇದಿಕೆಯ ಕೆಳಗೆ ಜನಸಂದಣಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಂಪೊಂದು ಹೊಡೆದಾಟದಲ್ಲಿ ತೊಡಗಿರುವುದನ್ನು ಕಾಣಬಹುದು. ಈ ಅತಿಥಿಗಳು ದೈಹಿಕವಾಗಿ ನೂಕಾಟ- ತಳ್ಳಾಟಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಇನ್ನು ಈ ಗಲಾಟೆ ಮದುವೆ ಎಲ್ಲಿ …

Read More »

ಮಂಗಳೂರು ಲಾಡ್ಜ್ ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಾಪಾರಿಯ ನಿಗೂಢ ಸಾವು …!! ಸಿಸಿಟಿವಿಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆ ಪತ್ತೆ

ಮಂಗಳೂರು:  ಪಂಪ್ ವೆಲ್ ಬಳಿ ಲಾಡ್ಜ್ ವೊಂದರಲ್ಲಿ ವ್ಯಾಪಾರಿಯೊಬ್ಬರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನುಮಾನಾಸ್ಪದ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಗಳೂರು:ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಕಾಸರಗೋಡಿನ ವ್ಯಕ್ತಿಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಪೈವಳಿಕೆ ನಿವಾಸಿ ಅಬ್ದುಲ್ ಕರೀಂ (55)ಮೃತರು.‌ಮೃತದೇಹದ ಬಳಿ ಇದ್ದ ಲೈಸನ್ಸ್ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿದೆ.ಮೃತರನ್ನು ಮೂಲತಃ ಕುಂಬಳೆ ನಿವಾಸಿ ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ. ನಗರದಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದ ಇವರು ಸೋಮವಾರ ಪಂಪ್ ವೆಲ್ ಬಳಿ ಲಾಡ್ಜ್ …

Read More »

SHOCKING NEWS: ಪ್ರೇಮಿಗಳು ಒಟ್ಟಿಗೆ ಸಾಯಲು ನಿರ್ಧಾರ: ನೇಣಿಗೆ ಕೊರಳೊಡ್ಡಿದ ವ್ಯಕ್ತಿ ಸಾವು, ಕೊನೆ ಕ್ಷಣದಲ್ಲಿ ತನ್ನ ಪ್ರಾಣ ಉಳಿಸಿಕೊಂಡ ಪ್ರೇಯಸಿ

 ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ 31 ವರ್ಷದ ವ್ಯಕ್ತಿ ಹಾಗೂ ಆತನ ಪ್ರೇಯಸಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದು, ದುರಾದೃಷ್ಟವೆಂಬಂತೆ ನೇಣಿಗೆ ಕೊರಳೊಡ್ಡಿದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಭಯದಿಂದ ಹಿಂದೆ ಸರಿದ ಪ್ರೇಯಸಿ ಕೊನೆ ಕ್ಷಣದಲ್ಲಿ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.   ಈ ಇಬ್ಬರು ಪ್ರೇಮಿಗಳು ಒಟ್ಟಿಗೆ ಸಾಯಲು ನಿರ್ಧರಿಸಿ ಹೋಟೆಲೊಂದರಲ್ಲಿ ರೂಮ್‌ ಬುಕ್‌ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಒಂದಷ್ಟು ಔಷಧಿಯನ್ನೂ ಸೇವಿಸಿ ಸಾಯಲು ಮುಂದಾಗಿದ್ದಾರೆ. ನೇಣಿಗೆ ಕೊರಳೊಡ್ಡಿದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿಗೆ ಹೆದರಿ ಹಿಂದೆ ಸರಿದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸೋಮವಾರ …

Read More »

ಉಡುಪಿ :ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಉಡುಪಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವು ಡಿಸೆಂಬರ್ 14 ಮತ್ತು 15 ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಡಿ. 14 ರಂದು ಬೆಳಗ್ಗೆ 9 ಘಂಟೆಗೆ ಕ್ರೀಡಾಕೂಟ ಆರಂಭವಾಗಲಿದ್ದು, ನೌಕರರಿಗೆ ಅಥ್ಲೆಟಿಕ್ಸ್, ಗುಂಪು ಸ್ಪರ್ಧೆ, ಸಾಂಸ್ಕೃತಿಕ ಹಾಗೂ ಇತ್ಯಾದಿ ಕ್ರೀಡೆಗಳು ನಡೆಯಲಿದ್ದು, ಒಂದು ಸ್ಪರ್ಧೆಯಲ್ಲಿ ಐದಕ್ಕಿಂತ ಕಡಿಮೆ ಸ್ಪರ್ಧಾಳುಗಳಿದ್ದಲ್ಲಿ ಅಂತಹ ಸ್ಪರ್ಧೆಗೆ ರಾಜ್ಯ ಮಟ್ಟಕ್ಕೆ ನೇರವಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು …

Read More »

ಪಂಪ್ ವೆಲ್ ನಲ್ಲಿ ನೋಟಿನ ಬಂಡಲ್ ಪತ್ತೆ ಪ್ರಕರಣ;ವಾರಸುದಾರ ಪೊಲೀಸ್ ಠಾಣೆಗೆ ಹಾಜರ್

ಮಂಗಳೂರು: ಪಂಪ್‌ವೆಲ್‌ನಲ್ಲಿ ಪತ್ತೆಯಾಗಿದ್ದ ನೋಟಿನ ಬಂಡಲ್‌ನ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದ್ದು, ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಪಂಪ್‌ವೆಲ್ ಬಸ್ ನಿಲ್ದಾಣದ ಬಳಿ ನೋಟಿನ ಬಂಡಲ್‌ಗಳು ನವಂಬರ್ 26ರಂದು ಶಿವರಾಜ್ ಮತ್ತು ತುಕಾರಾಮ್ ಎಂಬವರಿಗೆ ಸಿಕ್ಕಿದ್ದು, ಶಿವರಾಜ್ …

Read More »

ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದು ತಂದೆ ಮೃತ್ಯು

ಉತ್ತರಖಂಡ್: ಸಂಭ್ರಮದಲ್ಲಿರುವಾಗಲೇ ಹಠಾತ್‌ ಹೃದಯಾಘಾತಗಳು ಸಂಭವಿಸಿ ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಇಂಥದ್ದೇ ಮತ್ತೊಂದು ಘಟನೆ ಉತ್ತರಾಖಂಡ್‌ ನ ಅಲ್ಮೋರಾದಲ್ಲಿ ಭಾನುವಾರ (ಡಿ.11 ರಂದು) ನಡೆದಿದೆ. ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ವಧುವಿನ ತಂದೆ ಸಂತಸದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡು ಕುಟುಂಬಸ್ಥರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವೈದ್ಯರು ಹೇಳಿದ್ದಾರೆ. ಕೆಲವು ಕುಟುಂಬಸ್ಥರು ಮದುವೆ ನಡೆಯಲಿದ್ದ ಹಲ್ದ್ವಾನಿ ಪ್ರದೇಶಕ್ಕೆ ತೆರಳಿದ ಬಳಿಕ ಈ ಘಟನೆ ನಡೆದಿದೆ. …

Read More »

You cannot copy content of this page.