ತಾಜಾ ಸುದ್ದಿ

ಚೆಕ್‌ ಡ್ಯಾಮ್‌ಗೆ ಪ್ರಧಾನಿ ತಾಯಿ ಹೀರಾಬೆನ್‌ ಹೆಸರು ನಾಮಕರಣ

ಗುಜರಾತ್‌: ಚೆಕ್‌ಡ್ಯಾಮ್‌ವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್‌ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಗಿರ್‌ ಗಂಗಾ ಪರಿವಾರ್ ಟ್ರಸ್ಟ್‌ ವತಿಯಿಂದ ರಾಜ್‌ಕೋಟ್‌–ಕಲವಾಡ ರಸ್ತೆಯ ವಗುಡಾಡ್‌ ಗ್ರಾಮದ ಬಳಿ ನ್ಯಾರಿ ನದಿಗೆ ₹15 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗುತ್ತಿದೆ. ತಾಯಿ ನೆನಪಿಗಾಗಿ ಹಾಗೂ ಗೌರವ ಸಲ್ಲಿಸುವ ಸದುದ್ದೇಶದಿಂದ ಚೆಕ್‌ ಡ್ಯಾಮ್‌ಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಇದು ಇತರರಿಗೂ ಪ್ರೇರಣೆ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದಿಲೀಪ್ ಸಖಿಯಾ ತಿಳಿಸಿದ್ದಾರೆ.

Read More »

ಸುಬ್ರಹ್ಮಣ್ಯ: ಹಿಂದೂ ಹುಡುಗಿ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕ- ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿತ

ಸುಬ್ರಹ್ಮಣ್ಯ:  ಹಿಂದೂ ಹುಡುಗಿ ಜೊತೆ ತಿರುಗಾಡುತ್ತಿದ್ದಾನೆಂದು ಆರೋಪಿಸಿ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಆಸ್ಪತ್ತೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾನೆ. ಹಲ್ಲೆಗೊಳಗಾದ ಯುವಕ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದ್ದು, ಗಂಭೀರ ಗಾಯಗೊಂಡ ಈತ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯದ ಬಸ್ ಸ್ಟ್ಯಾಂಡ್ ನಲ್ಲಿ ಹುಡುಗ ಮತ್ತು ಹುಡುಗಿ ಕಂಡು ಬಂದಿದ್ದು, ಬಳಿಕ ಈ ಜೋಡಿ ಕುಮಾರಧಾರ ಬಳಿ ಬಂದಾಗ ಯುವಕರ ಗುಂಪೊಂದು ಯುವಕನಿಗೆ …

Read More »

ಯುಪಿ ಸಿಎಂ ಯೋಗಿ ಮೊರೆ ಹೋದ ನಟ ಸುನೀಲ್ ಶೆಟ್ಟಿ

ನವದೆಹಲಿ: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಪ್ರವೃತ್ತಿಯನ್ನು ತಡೆಯಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಅವರನ್ನು ಒತ್ತಾಯಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಂತೆ ಕೋರಿದ್ದಾರೆ.   ಪ್ರವೃತ್ತಿಯ ಬಗ್ಗೆ ಮಾತನಾಡಿದ ನಟ ಸುನೀಲ್ ಶೆಟ್ಟಿ, ʻ#ಬಾಲಿವುಡ್ ಅನ್ನು ಬಹಿಷ್ಕರಿಸಿʼ ಇಂತಹ ಟ್ರೆಂಡ್ ಬಾಲಿವುಡ್‌ಗೆ ಒಳ್ಳೆಯದಲ್ಲ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟ್ಟರ್‌ನಲ್ಲಿನ ಟ್ರೆಂಡ್‌ಗಳನ್ನು ನಿಲ್ಲಿಸಬಹುದು. ಯುಪಿ ಜನರ ಬಗ್ಗೆ ಮಾಡಿರುವ ಗ್ರಹಿಕೆಗೆ ನನಗೆ ಬೇಸರವಾಗಿದೆ. ನಮ್ಮ ಸಂಗೀತ ಮತ್ತು ಕಲೆಯಿಂದ ಭಾರತವನ್ನು ವಿಶ್ವದಲ್ಲಿ …

Read More »

‘ನನಗೆ ಕ್ಯಾನ್ಸರ್ ಇದೆ ಎಂದು ಅಪ್ಪ ಅಮ್ಮನಿಗೆ ಹೇಳಬೇಡಿ…’: 6ವರ್ಷದ ಬಾಲಕನ ಮಾತಿಗೆ ವೈದ್ಯರು ಭಾವುಕ|

6ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಗುವೊಂದು ತನ್ನ ಪೋಷಕರಿಗೆ ಈ ವಿಷಯ ಹೇಳಬೇಡಿ ಎಂದು ವೈದ್ಯರಲ್ಲಿ ಮನವಿ ಮಾಡಿರುವ ಬಗ್ಗೆ ತೆಲಂಗಾಣದ ಹೈದರಾಬಾದ್​ನ ನರತಜ್ಞರು ಮಾಡಿರುವ ಟ್ವೀಟ್​ ವೈರಲ್ ಆಗಿದೆ. ಹೈದರಾಬಾದ್ (ತೆಲಂಗಾಣ) : ‘ನನಗೆ ಕ್ಯಾನ್ಸರ್ ಬಂದಿದೆ. ಕೊನೆಯ ಹಂತದಲ್ಲಿದ್ದೇನೆ. ಹೆಚ್ಚು ಕಾಲ ಬದುಕುವುದಿಲ್ಲ. ದಯವಿಟ್ಟು ಈ ವಿಷಯವನ್ನು ನನ್ನ ಪೋಷಕರಿಗೆ ಹೇಳಬೇಡಿ. ಅವರಿಗೆ ಸಹಿಸಲಾಗುವುದಿಲ್ಲ’ ಎಂದು ಆರು ವರ್ಷದ ಬಾಲಕನೊಬ್ಬ ವೈದ್ಯರಿಗೆ ಹೇಳಿದ ಮಾತುಗಳಿವು. ಕ್ಯಾನ್ಸರ್ ಬಂದರೆ ದೊಡ್ಡವರೂ ಸಹ ಭಯಪಡುತ್ತಾರೆ. ಎಳೆ ವಯಸ್ಸಿನ ಹೃದಯ ಇಂಥದ್ದನ್ನು ಸಹಿಸಬಹುದೇ? ಆದರೆ, ಈ ಬಾಲಕ …

Read More »

ಲಾರಿ -ಬಸ್ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿ ದುರ್ಮರಣ

ಬಾಗಲಕೋಟೆ: ಕ್ಯಾಂಟರ್‌ ಲಾರಿ ಹಾಗೂ ಕೆಎಸ್‌ ಆರ್‌ ಟಿಸಿ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 14 ಮಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆಯ ಗದ್ದನಕೇರಿ ಬಳಿ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್ ಸಾವನ್ನಪ್ಪಿದ್ದಾನೆ. ಬಸ್‌ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಕ್ಯಾಂಟರ್‌ ಲಾರಿ ಹೊರಟಿತ್ತು. ಆದರೆ ಕ್ಯಾಂಟರ್‌ ಲಾರಿ ಚಾಲಕ ಅತೀ …

Read More »

ಲಿಂಗ ಪರಿವರ್ತಿಸಿಕೊಂಡು ಹೆಣ್ಣಾದ ಮುಸ್ಲಿಂ ಯುವಕ: ದೇರಳಕಟ್ಟೆ ಹೆಸರು ದುರ್ಬಳಕೆಗೆ ಆಕ್ರೋಶ

ಮಂಗಳೂರು: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಲಿಂಗ ಪರಿವರ್ತನೆ (Gender change) ಮಾಡಿಸಿಕೊಂಡು ಹೆಣ್ಣಾಗಿದ್ದಾನೆ. ಈ ನಡುವೆ ಆತ ತಾನು ಈ ರೀತಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ದೇರಳಕಟ್ಟೆಯ ಗೆಳೆಯನೊಬ್ಬ ಕಾರಣ ಎಂದು ಹೇಳಿದ್ದು, ಆ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಆತ ವಿಡಿಯೊ ಕ್ಲಿಪ್‌ ಒಂದರಲ್ಲಿ ಹೇಳಿಕೊಂಡಿದ್ದಾನೆ. ಯೂಟ್ಯೂಬ್‌ ಕ್ಲಿಪ್‌ನಲ್ಲಿ ಏನಿದೆ? ತುಮಕೂರಿನ ನಿಝಾಂ ಎಂಬ ಯುವಕ ಮನೆಗೆ ಬಾರದೇ ಹಲವು ತಿಂಗಳುಗಳು ಕಳೆದಿದೆ. ಇದರಿಂದ ತಾಯಿ ಸಂಬಂಧಿಕರ ಮೂಲಕ ಯುವಕನ ಮೊಬೈಲ್‌ಗೆ ಕರೆ ಮಾಡಿದಾಗ, ತಾನು ಹುಡುಗಿಯಾಗಲು ಬಯಸಿದವನು. ಇದೀಗ …

Read More »

ಕಾಂಗ್ರೆಸ್ ಸಭೆಯಲ್ಲಿ ಹೊಡೆದಾಟ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ಇಬ್ಬರ ಬಂಧನ

ಹೊಸಪೇಟೆ; ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ದೂರು, ಪ್ರತಿದೂರು ದಾಖಲಾದ ಹಿನ್ನೆಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಟಿಕೆಟ್ ಆಕಾಂಕ್ಷಿಗಳ ಸಭೆಯ ವೇಳೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಯೋಗಲಕ್ಷ್ಮೀ ಮತ್ತು ಬೆಂಬಲಿಗ ಸಂದೀಪ್ ಅವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 2ರಂದು ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ. ಶಿಲ್ಪಾ ಎಂಬವರ ದೂರಿನ …

Read More »

BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಗೃಹ ಸಚಿವಾಲಯ ಗುರುವಾರ ನಿಷೇಧಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರ ಮೇಲೆ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲಿನ ಹೆಚ್ಚಿನ ದಾಳಿಗಳ ಹಿಂದೆ TRF ಇತ್ತು. ಟಿಆರ್‌ಎಫ್ ಕಮಾಂಡರ್ ಸಜ್ಜದ್ ಗುಲ್ ಅವರನ್ನು ಭಾರತ ಸರ್ಕಾರ ಈಗಾಗಲೇ ಭಯೋತ್ಪಾದಕ ಎಂದು ಘೋಷಿಸಿದೆ. ಗುರುವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಯುಎಪಿಎಯ ಮೊದಲ …

Read More »

ಉಡುಪಿ: ಅಂಬಲಪಾಡಿ ಬಳಿ ಸರಣಿ ಅಪಘಾತ ; ಮಹಿಳೆ ಸ್ಥಿತಿ ಗಂಭೀರ

ಉಡುಪಿ: ಮೂರು ಕಾರು ಹಾಗು ಒಂದು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿ ಕರಾವಳಿ ಬೈಪಾಸ್‌ನ ಅಂಬಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಪಘಾತಕ್ಕೆ ಒಳಗಾದ 3 ಕಾರುಗಳ ಪೈಕಿ ಒಂದು ಕಾರು ನೋಂದಣಿಯಾಗದ ಹೊಚ್ಚಹೊಸ ಕಾರು ಆಗಿದ್ದು, ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದೆ. ಹಾಗೂ ಇತರ ಎರಡು ಕಾರು ಹಾಗೂ ಲಾರಿಗೂ ಹಾನಿಯಾಗಿದೆ. ಅಪಘಾತ ಬಗ್ಗೆ ಹೆಚ್ಚಿನ ಮಾಹಿತಿ …

Read More »

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿವೃತ್ತಿ

ನವದೆಹಲಿ:  ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಭೂವಿವಾದ, ಆಧಾರ್‌ ಸಿಂಧುತ್ವ, ತ್ರಿವಳಿ ತಲಾಕ್‌ ನಿಷೇಧ , ನೋಟು ಆಮಾನ್ಯೀಕರಣ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸಿ, ಐತಿಹಾಸಿಕ ತೀರ್ಪು ನೀಡಿದ್ದ ಕರ್ನಾಟಕದ ಮೂಡುಬಿದಿರೆ ಮೂಲದ ನ್ಯಾ. ಎಸ್‌. ಅಬ್ದುಲ್‌ ನಜೀರ್‌ ಅವರು ಬುಧವಾರ ನಿವೃತ್ತರಾಗಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ಪಂಚ ಸದಸ್ಯ ನ್ಯಾಯಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಮೂರ್ತಿಯಾಗಿ ವಿಶೇಷ ಗಮನ ಸೆಳೆದಿದ್ದರು. 1956ರ ಜ. 5 ರಂದು ಮೂಡುಬಿದಿರೆಯಲ್ಲಿ ಜನಿಸಿದ ನ್ಯಾ. ನಜೀರ್‌ ಅವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ …

Read More »

You cannot copy content of this page.