ಗುಜರಾತ್: ಚೆಕ್‌ಡ್ಯಾಮ್‌ವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.
ಗಿರ್ ಗಂಗಾ ಪರಿವಾರ್ ಟ್ರಸ್ಟ್ ವತಿಯಿಂದ ರಾಜ್‌ಕೋಟ್–ಕಲವಾಡ ರಸ್ತೆಯ ವಗುಡಾಡ್ ಗ್ರಾಮದ ಬಳಿ ನ್ಯಾರಿ ನದಿಗೆ ₹15 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗುತ್ತಿದೆ.
ತಾಯಿ ನೆನಪಿಗಾಗಿ ಹಾಗೂ ಗೌರವ ಸಲ್ಲಿಸುವ ಸದುದ್ದೇಶದಿಂದ ಚೆಕ್ ಡ್ಯಾಮ್‌ಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಇದು ಇತರರಿಗೂ ಪ್ರೇರಣೆ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದಿಲೀಪ್ ಸಖಿಯಾ ತಿಳಿಸಿದ್ದಾರೆ.