ತಾಜಾ ಸುದ್ದಿ

ಮೂಡುಬಿದಿರೆಯಲ್ಲಿ ಯುವಕ ಆತ್ಮಹತ್ಯೆ,,!

ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುಮಂತ್ (21) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ನಿನ್ನೆ ರಾತ್ರಿ ಮೂಡುಬಿದ್ರೆಯ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ.

Read More »

ಭಾರೀ ಮಳೆ ಹಿನ್ನೆಲೆ: ದ.ಕ. ಜಿಲ್ಲೆಯ ಹಲವು ಶಾಲೆಗಳಿಗೆ ಇ೦ದು ರಜೆ

ಮಂಗಳೂರು, ಜು. 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ. ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 4 ದಿನ ಆರು ಜಿಲ್ಲೆಗಳಲ್ಲಿ ಭಾರತೀಯ ಹವಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ದ.ಕ.ದಲ್ಲಿ ತಹಶೀಲ್ದಾರ್‌ಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, …

Read More »

ಮಂಗಳೂರು : ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ಜಲಾವೃತ..!

ಮಂಗಳೂರು: ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ನಿಂತಿದ್ದು ನಗರದ ಕಡೆ ಸಂಚರಿಸುವ ವಾಹನಗಳು ಜಂಕ್ಷನ್‌ನಲ್ಲಿ ಸಿಲುಕಿಕೊಂಡಿವೆ.ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದುರಸ್ತಿಗಾಗಿ ಮ್ಯಾನ್ ಹೋಲ್ ಅಗೆದಿಟ್ಟುರುವುದ್ದರಿಂದ ಭಾರೀ ಮಳೆಯಿಂದಾಗಿ ಗಲೀಜು ನೀರಿನ ಜತೆ ಮಳೆ ನೀರು ಸುತ್ತಮುತ್ತಲಿನ ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಇಂಡಿಯನ್ …

Read More »

ಚಾಕುವಿನಿಂದ ಇರಿದು ಪಿಯುಸಿ ವಿದ್ಯಾರ್ಥಿ ಬರ್ಭರವಾಗಿ ಹತ್ಯೆ..!

ಬೆಂಗಳೂರು: ನಗರದಲ್ಲಿ ಇಂದು ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಈ ಮೂಲಕ ರಾಜ್ಯ ರಾಜಧಾನಿ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರಿನ ಮಂಜುನಾಥನಗರದಲ್ಲಿನ ಗೌತಮ್ ಕಾಲೇಜು ಬಳಿಯಲ್ಲಿ ಪಿಯು ವಿದ್ಯಾರ್ಥಿ ಸುಹೇಲ್(18) ಎಂಬಾತನನ್ನು ಚಾಕುನಿಂದ ಇರಿದು ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದಂತ ಸುಹೇಲ್ ಗೌತಮ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದನು ಎಂಬುದಾಗಿ ತಿಳಿದು ಬಂದಿದೆ. ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದು ಯಾರು ಎನ್ನುವುದು ತಿಳಿದು ಬಂದಿಲ್ಲ. ಅಲ್ಲದೇ ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು …

Read More »

ಬಂಟ್ವಾಳ: ರೈಲಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಬಂಟ್ವಾಳ: ರೈಲಿನ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಹಾಸನದಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಂಟ್ವಾಳ ಬೈಪಾಸ್‌ ನಿವಾಸಿ ಜನಾರ್ದನ ಕುಲಾಲ್‌ ಮೃತಪಟ್ಟವರು. ಜನಾರ್ದನ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂಜೆ ರೈಲಿನ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಾಸನ ತಲುಪುತ್ತಿದ್ದಂತೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹಾಸನ ರೈಲು ನಿಲ್ದಾಣದಿಂದ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕಾರು ಚಾಲಕರಾಗಿದ್ದ ಅವರು ಬಿಎಂಎಸ್‌ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.

Read More »

ಫ್ರೀಜರ್‌ನಲ್ಲಿತ್ತು ಪತ್ನಿಯ ಶವ. ಮಗನ ಬರುವಿಕೆಗಾಗಿ ಹೀಗೆ ಮಾಡ್ದೆ ಎಂದ ವ್ಯಕ್ತಿ!

ರೇವಾ : ಮಧ್ಯಪ್ರದೇಶದ ರೇವಾ ನಗರದ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವವನ್ನು ಆಕೆಯ ಮನೆಯ ಫ್ರೀಜರ್‌ನಿಂದ ಪೊಲೀಸರು ಹೊರತೆಗೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ವಿಜಯ್ ಸಿಂಗ್ ಮಾತನಾಡಿ, ‘ಸುಮಿತ್ರಿ ಮಿಶ್ರಾ ಅವರ ಶವವನ್ನು ಅವರ ಮನೆಯ ಫ್ರೀಜರ್‌ನಿಂದ ಹೊರತೆಗೆಯಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಪತಿ ಭರತ್ ಮಿಶ್ರಾ ನಮ್ಮ ಮಗಳನ್ನು ಕೊಂದು ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದಾನೆ …

Read More »

ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿ

ತುಮಕೂರು:ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರಥಸಂದ್ರ ಗ್ರಾಮದಲ್ಲಿ ನಡೆದಿದೆ. ಮನು (30) ಸಾವನ್ನಪ್ಪಿದ ಮಹಿಳೆ. ಮನು ತನ್ನ ಇಬ್ಬರು ಮಕ್ಕಳ ಜೊತೆ ಬಟ್ಟೆ ತೊಳೆಯಲೆಂದು ಕೆರೆಗೆ ಬಳಿ ಹೋಗಿದ್ದರು.ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಕೆರೆಗೆ ಬಿದ್ದಿದ್ದಾರೆ.ಈಜು ಬಾರದ ಮನು ತನ್ನ ಜೀವವನ್ನು ಲೆಕ್ಕಿಸದೆ ಕರೆಗೆ ಹಾರಿ ಕರುಳಕುಡಿಗಳನ್ನು ರಕ್ಷಿಸಿ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ ಇಬ್ಬರು ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ʻಕೇದಾರನಾಥʼ ದೇಗುಲ ಆವರಣದಲ್ಲಿ ಪ್ರಿಯಕರನಿಗೆ ಯುವತಿ ಪ್ರಪೋಸ್. ನೆಟ್ಟಿಗರಿಂದ ಕ್ಲಾಸ್

ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್‌ ಮಾಡಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ಸುಮಾರು ಎರಡು ದಿನಗಳ ಹಳೆಯದಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಯುವತಿ ಮತ್ತು ಆಕೆಯ ಗೆಳೆಯ ಇಬ್ಬರೂ ಹಳದಿ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದು. ಯುವತಿ ತನ್ನ ಮಂಡಯೂರಿ ಪ್ರಿಯಕರನಿಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್‌ ಮಾಡಿದ್ದಾಳೆ. ಆ ನಂತರ ಇಬ್ಬರೂ ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ.‌ ಈ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಪ್ರೀತಿಯ ಅಭಿವ್ಯಕ್ತಿಯನ್ನು ಬಹಳ ಸುಂದರ ಎಂದು …

Read More »

‘ವಿದ್ಯುತ್ ಬಿಲ್‌’ನ ಹಿಂಬಾಕಿ ಇದ್ದರೂ ದೊರಕಲಿದೆ ‘ಗೃಹಜ್ಯೋತಿ ಯೋಜನೆ’ಯ ಪ್ರಯೋಜನ

ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎನ್ನುವಂತೆ ಗೃಹ ಜ್ಯೋತಿ ಯೋಜನೆಯಡಿ ( Gruha Jyoti Scheme ) ಹಿಂಬಾಕಿ ಇದ್ದರೂ ದೊರಕಲಿದೆ ಯೋಜನೆಯ ಪ್ರಯೋಜನ ದೊರೆಯಲಿದೆ ಎಂಬುದಾಗಿ ಇಂಧನ ಇಲಾಖೆ ಮಾಹಿತಿ ನೀಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಂಧನ ಇಲಾಖೆಯೂ, ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಹಿಂಬಾಗಿ ಪಾವತಿಸುವುದು ಕಡ್ಡಾಯಗೊಳಿಸಲಾಗಿತ್ತು. ಮೂರು ತಿಂಗಳ ಕಾಲಾವಕಾಶ ಇರುವ ಕಾರಣ ಅದರೊಳಗೆ ಹಿಂಬಾಕಿ ಪಾವತಿಸಿದ್ರೇ, ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತ …

Read More »

ಮಂಗಳೂರು ಮೂಲದ ವಿದ್ಯಾರ್ಥಿ ತಿರುಪತಿಯಲ್ಲಿ ಶವವಾಗಿ ಪತ್ತೆ

ಮಂಗಳೂರು: ತಿರುಪತಿಯ ತಲಕೋನಾ ಜಲಪಾತದಲ್ಲಿ ಮಂಗಳೂರು ಮೂಲದ ವಿದ್ಯಾರ್ಥಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಸುಮಂತ್ ಸ್ನೇಹಿತರ ಜತೆಗೆ ಟ್ರಿಪ್ಗೆಂದು ಹೋಗಿದ್ದ, ತಲಕೋಣ ಜಲಪಾತಕ್ಕೆ ಧುಮುಕುತ್ತಿರುವರುವುದನ್ನು ಸ್ನೇಹಿತರು ವಿಡಿಯೋ ಮಾಡುತ್ತಿದ್ದರು. ಆದರೆ, ಬಹಳ ಸಮಯವಾದರೂ ಆತ ಕಾಣಿಸಿದ ಕಾರಣ ಆತಂಕಗೊಂಡು ಸಮೀಪದ ಪೊಲೀಸ್ ಠಾಣೆ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸುಮಂತ್‌ನ ತಲೆಯು ನೀರಿನ ಅಡಿಯಲ್ಲಿ ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದ್ದು, ಮೃತದೇಹವನ್ನು ಜಲಪಾತದಿಂದ ಹೊರತೆಗೆಯಲಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಮಂತ್ ಚೆನ್ನೈನ ರಾಜೀವ್ ಗಾಂಧಿ …

Read More »

You cannot copy content of this page.