ತಾಜಾ ಸುದ್ದಿ

ಶೌಚಾಲಯಕ್ಕೆ ತೆರಳಿದ್ದ ಶಾಲಾ ಬಾಲಕಿಯನ್ನು ಅಪಹರಿಸಲು ಯತ್ನ

ಮೈಸೂರು : ಎರಡನೇ ತರಗತಿಯ ಶಾಲಾ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನ ನಡೆಸಿ ವಿಫಲರಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ನಿನ್ನೆ ಶೌಚಾಲಯಕ್ಕೆ ಕೇಳಿದ ವೇಳೆ ಇಬ್ಬರು ಅಪರಿಚಿತರಿಂದ ಈ ಅಪಹರಣ ಘಟನೆ ನಡೆದಿದ್ದು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆಶಾಲೆ ಮುಖ್ಯ ಶಿಕ್ಷಕರಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ. ಅಲ್ಲದೆ ಕಳೆದ ತಿಂಗಳು ಬೆಳಗಾವಿಯಲ್ಲಿ ಕೂಡ ಇದೇ …

Read More »

ಮಂಗಳೂರು: ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಆರೋಪಿಗಳು ಪೊಲೀಸ್ ಬಲೆಗೆ

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ‌ನಗರ ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಾಳೆಪುಣಿಯ ಮುಡಿಪು ಚರ್ಚ್ ಬಳಿಯ ನಿವಾಸಿ ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್, ಮಂಗಳೂರಿನ ಮನ್ನೂರು ಗ್ರಾಮದ ಮದನಿನಗರದ ಅಬ್ದುಲ್ ರಾಝೀಕ್ ಬಂಧಿತರು. ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್ ನನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಮಹಿಳಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈತ ಮಂಗಳೂರು ನಗರದ …

Read More »

ನಗ್ನ ವಿಡಿಯೋ ಕಾಲ್ ಮಾಡಲು ಬಲವಂತ ಪತಿಯ ವಿರುದ್ಧ ಪತ್ನಿ ದೂರು

ನೀಲೇಶ್ವರಂ: ತಮಗೆ ನಗ್ನವಾಗೊ ವೀಡಿಯೊ ಕರೆಗಳನ್ನು ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ನೀಲೇಶ್ವರಂ ಪೊಲೀಸರಿಗೆ ಶುಕ್ರವಾರ ದೂರು ನೀಡಿರುವ ಘಟನೆ ನಡೆದಿದೆ. ದೂರುದಾರ 20 ವರ್ಷದ ಮಹಿಳೆ. ಆಕೆಯ ಪತಿ ಬಂಕಲಂ ಮೂಲದವರಾಗಿದ್ದು, ಪಾಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ದೂರಿನ ಪ್ರಕಾರ, ವ್ಯಕ್ತಿಯು ಕೆಲವು ವ್ಯಕ್ತಿಗಳಿಂದ ಹಣವನ್ನು ತೆಗೆದುಕೊಂಡಿದ್ದಾನೆ ಮತ್ತು ಮಹಿಳೆಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವೀಡಿಯೊ ಕರೆ ಮಾಡಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ. ಏತನ್ಮಧ್ಯೆ, …

Read More »

ಸುಳ್ಯ: ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಸುಳ್ಯ : ಲಂಚ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುಳ್ಯದ ಸಂಪಾಜೆ- ಅರಂತೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿದ್ದಾರೆ. ಅರಂತೋಡಿನ ವ್ಯಕ್ತಿಯೊಬ್ಬರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಡತ ವಿಲೇವಾರಿಗಾಗಿ ಲೆಕ್ಕಾಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಇಂದು ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸುಳ್ಯ ತಾಲೂಕು ಕಚೇರಿಯಲ್ಲಿ ಇದೀಗ ಗ್ರಾಮ ಲೆಕ್ಕಾಧಿಕಾರಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಎಷ್ಟು ಹಣ ತೆಗೆದುಕೊಂಡಿದ್ದಾರೆ ಅನ್ನುವುದು ಇನ್ನೂ ಗೊತ್ತಾಗಿಲ್ಲ. …

Read More »

ಸೌಜನ್ಯ ಪ್ರಕರಣ ಮರುತನಿಖೆ ಅಸಾಧ್ಯ ಎಂದ ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ಸಂಭವಿಸಿದ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರಕಾರ ಮರು ತನಿಖೆ ಅಸಾಧ್ಯ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸೌಜನ್ಯಾ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಶುಕ್ರವಾರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪರಮೇಶ್ವರ್ ಪ್ರಕರಣದ ಮರುತನಿಖೆ ಅಸಾಧ್ಯ ಎಂದು ಹೇಳಿದ್ದಾರೆ. ಪ್ರಕರಣವನ್ನು ಪುನಃ …

Read More »

ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗಾಗಿ ಗನ್ ಮ್ಯಾನ್ ಒದಗಿಸಲು ಮುಂದಾದ ರಾಜ್ಯ ಸರಕಾರ

ಮಂಗಳೂರು: ಸುಮಾರು 11 ವರ್ಷಗಳ ಹಿಂದೆ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ನ್ಯಾಯಕ್ಕಾಗಿ ಹೋರಾಡುತ್ತಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗಾಗಿ ರಾಜ್ಯ ಸರಕಾರವು ಗನ್ ಮ್ಯಾನ್ ಒದಗಿಸಲು ಮುಂದಾಗಿದೆ. ಮಹೇಶ್ ಶೆಟ್ಟಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸರಕಾರದ ಗಮನಕ್ಕೆ ತಂದ ಬಳಿಕ ಈ ಬೆಳವಣಿಗೆ ನಡೆದಿದೆ. ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವಸಂತ ಬಂಗೇರ ಮಹೇಶ್ ಶೆಟ್ಟಿ ಅವರಿಗೆ ಇಬ್ಬರು ಗನ್ ಮ್ಯಾನ್ ಒದಗಿಸುವಂತೆ …

Read More »

ನಾಗರ ಪಂಚಮಿಯಂದು ಉಡುಪಿ ಹಾಗೂ ದ.ಕ ಜಿಲ್ಲೆಗಳಿಗೆ ರಜೆ ಘೋಷಣೆಗೆ ಶಾಸಕ ಸುನೀಲ್ ಕುಮಾರ್ ಮನವಿ

ಕಾರ್ಕಳ: ನಾಗರ ಪಂಚಮಿಯ ವಿಶೇಷ ದಿನ ಆ.21ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಬೇಕೆಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.ಕರಾವಳಿ ಬಾಗದಲ್ಲಿ ಭಕ್ತಯಿಂದ ಆಚರಿಸುವ ದೈವ ದೇವರುಗಳ ಆರಧಾನೆಯಲ್ಲಿ ನಾಗರಾಧನೆಯು ಪ್ರಮುಖವಾಗಿದೆ.ಹಾಗಾಗಿ ಕುಟುಂಬಗಳು ಶ್ರೀ ನಾಗ ದೇವರ ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವ ದೃಷ್ಠಿಯಿಂದ ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಬೇಕೆಂದು ಶಾಸಕ.ಸುನೀಲ್ ಕುಮಾರ್ ಅವರು ಮನವಿ ಮಾಡಿದ್ದಾರೆ.

Read More »

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್: ಸೌಜನ್ಯ ಕೊಲೆ ಹಿಂದೆ ಜಾಗದ ಮೋಹ

ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಿಂದೆ ಜಾಗದ ಮೋಹ ಇದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಸಂತ ಬಂಗೇರ, ಧರ್ಮಸ್ಥಳ ಹೆಗಡೆ ಪರಿವಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇ ಬಾರದು, ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ತಂದೆಯೂ ಜಮೀನ್ದಾರ ಆಗಿದ್ದರು, ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ …

Read More »

ಮಲ್ಪೆ ಬಂದರಿನಲ್ಲಿ ರಾಶಿ ರಾಶಿ ಬೊಂಡಾಸ್ ಮೀನು !

ಉಡುಪಿ: ಉಡುಪಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿ, ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರು ಬೀಸುವ ಬಲೆಗೆ ಯಥೇಚ್ಛವಾಗಿ ಬೋಂಡಾಸ್ ಮೀನುಗಳು ಬೀಳುತ್ತಿದ್ದು, ಬೊಂಡಾಸ್‌ನಿಂದ ಮೀನುಗಾರಿಗೆ ಬಂಪರ್ ಹೊಡೆದಿದೆ. ಆಳ ಸಮುದ್ರಕ್ಕೆ ತೆರಳಿದ ಬೋಟ್‌ಗಳು ಆಕ್ಟೊಪ್ಲಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿದೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಗಳೇ ಕಾಣ‌‌ಸಿಗುತ್ತದೆ. ಕಳೆದ ಬಾರಿ ಇದೇ ರೀತಿ ಬಂಗುಡೆ ಮೀನಿಗಳು ಸಿಗುತ್ತಿದ್ರೆ, ಈ ಬಾರಿ ಬೊಂಡಾಸ್ ಮೀನುಗಳು ಹೇರಳ ಪ್ರಮಾಣದಲ್ಲಿ ಸಿಗುತ್ತಿದೆ. ಇತರೆ ಮೀನುಗಳಿಗಿಂತ ನೋಡಲು ಆಕಾರದಲ್ಲಿ ಭಿನ್ನವಾಗಿದ್ದು, ಆಕ್ಟೊಪಸ್ ರೀತಿ ಹೋಲುತ್ತದೆ. ಸಾಮಾನ್ಯ ದಿನಗಳಲ್ಲಿ …

Read More »

ಕರ್ತವ್ಯದಲ್ಲಿರುವಾಗಲೇ ಹೃದಯಾಘಾತ; ಯುವ ವೈದ್ಯೆ ನಿಧನ

ಗೋವಾ  :ಯುವ ವೈದ್ಯೆಯೊಬ್ಬರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದ ಘಟನೆ ಶಿರೋಡಾದಲ್ಲಿ ನಡೆದಿದೆ. 2011 ರಿಂದ ಶಿರೋಡಾ ಪಿಎಚ್‌ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ವೈದ್ಯಾಧಿಕಾರಿ ಡಾ. ಅಕ್ಷಯ ಮಧುಕರ್ ಪಾವಸ್ಕರ್ (38) ಹೃದಯಾಘಾತದಿಂದ ಸಾವನಪ್ಪಿದವರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಕರ್ತವ್ಯದಿಂದಾಗಿ ಕೋವಿಡ್ ವಾರಿಯರ್ ಎಂದು ಅವರನ್ನು ಕರೆಯಲಾಗಿತ್ತು. ಅಲ್ಲದೆ ಅವರ ಸೇವಾಮನೋಭಾವದಿಂದಾಗಿ ಭಾರೀ ಜನಪ್ರೀಯರಾಗಿದ್ದು, ಸರಕಾರ ಅವರಿಗೆ ಸನ್ಮಾನ ಕೂಡ ಮಾಡಿತ್ತು.   ಡಾ ಅಕ್ಷಯಾ ಮಂಗಳವಾರ ರಾತ್ರಿ ಕರ್ತವ್ಯದಲ್ಲಿದ್ದರು ಮತ್ತು 17 ರೋಗಿಗಳ ವೈದ್ಯಕೀಯ ತಪಾಸಣೆಯನ್ನು ಸಹ ನಡೆಸಿದರು, ನಂತರ ಅವರು ರಾತ್ರಿ …

Read More »

You cannot copy content of this page.