ತಾಜಾ ಸುದ್ದಿ

ಉಡುಪಿ: ಸಿಂಡ್ ಬ್ಯಾಂಕ್, ಎಂಎಂಎನ್ಎಲ್ ನಿವೃತ್ತ ಅಧಿಕಾರಿ ಕೆ.ಎಲ್.ರಾವ್ ನಿಧನ

ಉಡುಪಿ: ಸಿಂಡಿಕೇಟ್ ಬ್ಯಾಂಕ್ ಮತ್ತು ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.,ನ ನಿವೃತ್ತ ಹಿರಿಯ ಅಧಿಕಾರಿ ಕೆ.ಎಲ್. ಲಕ್ಷ್ಮೀನಾರಾಯಣ ರಾವ್ (84) ವಿಧಿವಶರಾಗಿದ್ದಾರೆ. ಅಸೌಖ್ಯದಿಂದ ಬಳುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ನ. 3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಪೆ ಮೂಲದವರಾದ ಕೆ.ಎಲ್. ರಾವ್ ಅವರು ತಮ್ಮ ತಂದೆ ಕೃಷ್ಣಪ್ಪ ನಾಯಕ್ ಅವರು ಸ್ಥಾಪಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷ ಶಿಕ್ಷಕರಾಗಿದ್ದರು. ಬಳಿಕ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಸೇರಿದ ರಾವ್ ಅವರು ಮಣಿಪಾಲ, ಮಂಗಳೂರು, …

Read More »

ಮಂಗಳೂರು : ಕರಿಮಣಿಯೊಂದಿಗೆ ಹೋಂ ನರ್ಸ್ ಪರಾರಿ, ದೂರು ದಾಖಲು

ಮಂಗಳೂರು :  ಮಂಗಳೂರು ನಗರದ ಮನೆಯೊಂದಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬೆಲೆಬಾಳುವ ಕರಿಮಣಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ನಗರದ ಕದ್ರಿ ಬಿ ಗ್ರಾಮದ ಬಾರೆಬೈಲ್ ಎಂಬಲ್ಲಿನ ಮನೆಯೊಂದರಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬಾಕೆ ಕರಿಮಣಿ ಸರದೊಂದಿಗೆ ಪರಾರಿಯಾದ ಹೋಂ ನರ್ಸ್ ಆಗಿದ್ದಾರೆ. ಈ ಬಗ್ಗೆ ನಗರದ ಉರ್ವ  ಠಾಣೆಗೆ  ದೂರು ನೀಡಿದ್ದಾರೆ. ಅ.6 ರಿಂದ 30ರ ಮಧ್ಯೆ ಹೋಂ ನರ್ಸ್ ಆಗಿದ್ದ ಮಂಡ್ಯ ಜಿಲ್ಲೆಯ ಕಾವ್ಯ ಅನಾರೋಗ್ಯದ ನೆಪ ಹೇಳಿ ಹೋಗಿದ್ದರು. ಈ ಸಂದರ್ಭ ಸುಮಾರು …

Read More »

ವಿಟ್ಲ: ಯುವಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ- ಆರೋಪಿ ಅರೆಸ್ಟ್

ವಿಟ್ಲ: ಇನ್ ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡ ಬಾಲಕಿಯರಿಬ್ಬರಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧ ಪಟ್ಟಂತೆ ಯುವಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಾಲೆತ್ತೂರು ಮೂಲದ ಬಾಲಕಿಗೆ ಇನ್ ಸ್ಟಾಗ್ರಾಂನಲ್ಲಿ ಕೇರಳ ಮೂಲದ ಯುವಕನೋರ್ವ ಹುಡುಗಿಯ ಹೆಸರಿನಲ್ಲಿ ಪರಿಚಯವಾಗಿದ್ದನು. ಬಳಿಕ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆದು, ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಇನ್ನು ಇದೇ ರೀತಿ ಬಾಲಕಿಯ ಪಕ್ಕದ ಮನೆಯಲ್ಲಿ ವಾಸವಿದ್ದ ಇನ್ನೋರ್ವ ಬಾಲಕಿಗೂ ಇದೇ ವ್ಯಕ್ತಿಯ ಪರಿಚಯವಾಗಿದೆ. ನಂತರ ಬಾಲಕಿಯರಿಬ್ಬರೂ ಈ ವಿಷಯವಾಗಿ ಮಾತನಾಡಿಕೊಂಡಾಗ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕ ಒಬ್ಬನೇ …

Read More »

ಬೆಳ್ತಂಗಡಿ : ವಿವಾಹಿತ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಬಾವಿಗೆ ತಳ್ಳಿ ಕೊಲೆಗೈದ ಗಂಡ ಅರೆಸ್ಟ್

ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆಯ ಬಾವಿಯಲ್ಲಿ ಸಿಕ್ಕ ವಿವಾಹಿತ ಮಹಿಳೆಯ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ ಹೆಂಡತಿಯನ್ನೇ ಗಂಡ ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಎಂದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದು ಆರೋಪಿ ಸುಧಾಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಾಲು ಗ್ರಾಮದಲ್ಲಿ ಈ ಪ್ರಕೃಣ ನಡೆದಿದ್ದು ಶುಕ್ರವಾರ ವಿವಾಹಿತ ಮಹಿಳೆ ಶಶಿಕಲರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿತ್ತು. ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಹೇಳಿದ್ದರು. ಆದರೆ, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಅಗ್ನಿಶಾಮಕ …

Read More »

ಬಂಟ್ವಾಳ : ಎ.ಎಂ‌ಆರ್.ಡ್ಯಾಂ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಬಂಟ್ವಾಳ: ತಾಲೂಕಿನ  ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ನೇತ್ರಾವತಿ ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದು, ಎ.ಎಂ‌.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ನೀಡಿದ ಮಾಹಿತಿ ಪ್ರಕಾರ ಶವ ಸಂಪೂರ್ಣ ಕೊಳೆತು ಹೋಗಿದ್ದು ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿ ಇದ್ದು, ಕೈಯಲ್ಲಿ ಫ್ಯಾನ್ಸಿಯ ಬ್ರೈಸ್ ಲೈಟ್ ಒಂದು ಕಂಡು ಬಂದಿದೆ. ಸದ್ಯ …

Read More »

ಪರೀಕ್ಷೆ ಹಾಲ್‌ಗೆ ಕಾಲಿಟ್ಟಾಗಲೇ ಹೃದಯಾಘಾತ. 9ನೇ ತರಗತಿ ಬಾಲಕಿ ಸ್ಥಳದಲ್ಲೇ ಸಾವು

ನವದೆಹಲಿ: ಇತ್ತೀಚೆಗಿನ ವರದಿಯೊಂದರಲ್ಲಿ ಗುಜರಾತ್‌ನಲ್ಲಿ 15 ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯ ಪರೀಕ್ಷೆ ಹಾಲ್‌ಗೆ ಪ್ರವೇಶಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಯುವಕರಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತದ ಪ್ರವೃತ್ತಿ ದಿನದಿಂದ ದಿನಕ್ಕೆ ಏರುತ್ತಿದೆ. ಜಡ ಜೀವನಶೈಲಿ ಮತ್ತು ಕಳಪೆ ಆಹಾರದ ಆಯ್ಕೆಗಳು, ಒತ್ತಡ ಮತ್ತು ಆತಂಕ ಸೇರಿದಂತೆ ಹಲವಾರು ಅಪಾಯಕಾರಿ ಅಂಶಗಳನ್ನು ತಜ್ಞರು ಸೂಚಿಸಿದ್ದಾರೆ. ಒತ್ತಡ ಮತ್ತು ಆತಂಕವು ಹೃದಯಕ್ಕೆ ಅಪಾಯವಾಗಿದೆ ಅದು ಅಪಾಯಕಾರಿ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಆತಂಕದ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಹೃದಯ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ವೇಗದ ಹೃದಯ …

Read More »

ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ ಪ್ರಪಾತಕ್ಕೆ ಮಹಿಳೆ ಸಾವು, ಐವರು ಗಂಭೀರ

ಮೂಡಿಗೆರೆ: ಧರ್ಮಸ್ಥಳಕ್ಕೆ ಹೊರಟ್ಟಿದ್ದ ಪ್ರವಾಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟ್ಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಗ್ಗೆ ಸುಮಾರು 4.45 ರ ಹೊತ್ತಿಗೆ ಮೂಡಿಗೆರೆ ತಾಲೂಕಿನ ಚೀಕನ ಹಳ್ಳಿ ಕ್ರಾಸ್ ಬಳಿ ಬಸ್ ಪ್ರಪಾತಕ್ಕೆ ಉರುಳಿದೆ. ಪರಿಣಾಮ ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ(45) ಸಾವನ್ನಪ್ಪಿದ್ದುಐವರು ಗಂಭೀರ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹಾಸನ …

Read More »

ಸುಳ್ಯ : ಏಕಾ ಏಕಿ ಭೂಕುಸಿತ- ನೆಲಕ್ಕಪ್ಪಳಿಸಿದ ವಿದ್ಯುತ್ ಟ್ರಾನ್ಸ್ ಫಾರ್ಮರ್

ಸುಳ್ಯ : ಸುಳ್ಯ ಪೇಟೆಯಲ್ಲಿ ಏಕಾ ಏಕಿ ಭೂಕುಸಿತವುಂಟಾದ ಘಟನೆ ನಡೆದಿದೆ. ಸುಳ್ಯ ಪೇಟೆಯ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಬಳಿ ಭೂಕುಸಿತ ಉಂಟಾಗಿದ್ದು, ಭೂಕುಸಿತವಾದ ಸ್ಥಳದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಒಂದು ನೆಲಕ್ಕಪ್ಪಳಿಸಿದೆ. ಆದರೆ ವಿದ್ಯುತ್ ಕಂಬ ಬೀಳುವ ಸಂದರ್ಭ ಕರೆಂಟ್ ಇಲ್ಲದ ಕಾರಣ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆ ಮಾಡಿದ್ದಾರೆ. ಏಕಾಏಕಿ ಉಂಟಾದ ಭೂಕುಸಿತಕ್ಕೆ ಸುಳ್ಯದ …

Read More »

ಪಡುಬಿದ್ರೆ: ಟ್ಯಾಂಕರ್ ಮೈಮೇಲೆ ಹರಿದು ಬೈಕ್ ಸವಾರ ಸಾವು

ಪಡುಬಿದ್ರೆ: ಟ್ಯಾಂಕರ್ ಹರಿದ ಪರಿಣಾಮ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರೆ ಪೇಟೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ. ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಗೆ ತೆರಳುವ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಪ್ರಜ್ವಲ್ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ವೇಳೆ ಟ್ಯಾಂಕರ್ ಅವರ ಮೇಲೆ ಹರಿದ ಪರಿಣಾಮ ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪಡುಬಿದ್ರೆ …

Read More »

ಉಡುಪಿ: ತುಲಾಭಾರದ ವೇಳೆ ಕಳಚಿದ ಹಗ್ಗ: ಪೇಜಾವರ ಸ್ವಾಮೀಜಿಗೆ ಗಾಯ

ಉಡುಪಿ: ಪೇಜಾವರ ಸ್ವಾಮೀಜಿಯ ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದ ಘಟನೆ ನಡೆದಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ, ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಭಕ್ತರು ಸ್ವಾಮೀಜಿಯವರಿಗೆ ತುಲಾಭಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಕ್ಕಡಿಯ ಹಗ್ಗ ಕಳಚಿಬಿದ್ದಿದೆ. ಸ್ವಾಮೀಜಿಯ ತಲೆಗೆ ತರಚಿದ ಗಾಯವಾಗಿದ್ದು, ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Read More »

You cannot copy content of this page.