ತಾಜಾ ಸುದ್ದಿ

‘HSRP’ ಬುಕ್ ಮಾಡಲು ಬಯಸುವ ವಾಹನ ಮಾಲೀಕರಿಗೆ ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

ಬೆಂಗಳೂರು ಪೊಲೀಸರು ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಬುಕ್ ಮಾಡಲು ಬಯಸುವ ವಾಹನ ಮಾಲೀಕರಿಗೆ ಸಲಹೆ ನೀಡಿದ್ದಾರೆ. ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ, ಪೊಲೀಸರು ಬುಕಿಂಗ್ ಗಾಗಿ ಅಧಿಕೃತ ವೆಬ್ ಸೈಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ನಕಲಿ ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಕಳೆದುಕೊಳ್ಳದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. “ನಿಮ್ಮ ವಾಹನದ #HSRP ನಂಬರ್ ಪ್ಲೇಟ್ ಅನ್ನು ಅಧಿಕೃತ ವೆಬ್ಸೈಟ್ಗಳ ಮೂಲಕ ಮಾತ್ರ ಬುಕ್ ಮಾಡಿ. ಅಧಿಕೃತ ವೆಬ್ಸೈಟ್ಗಳು https://transport.karnataka.gov.in https://siam.in, “ನಕಲಿ ಕ್ಯೂಆರ್ ಕೋಡ್ …

Read More »

ಉಡುಪಿ : ನಕಲಿ ಚಿನ್ನ ಅಡವಿಟ್ಟು ವಂಚನೆ, ಉತ್ತರ ಕನ್ನಡದ ನಾಲ್ವರ ಬಂಧನ

ಉಡುಪಿ ಜಿಲ್ಲೆಯ  ಪಡುಬಿದ್ರಿಯಲ್ಲಿ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣವನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಮತ್ತು ತಂಡ  ಬೇಧಿಸಿದ್ದಾರೆ. ರಾಜೀವ್‌ನಿಗೆ ಸಹಕರಿಸಿದ ಆರೋಪಿಗಳಾದ ಕುಮುಟಾದ ನಿತಿಲ್ ಭಾಸ್ಕರ್ ಶೇಟ್, ಸಂಜಯ್ ಶೇಟ್, ಮತ್ತು ಸಂತೋಷ್ ಶೇಟ್, ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ, ಎಂಬ ನಾಲ್ವರನ್ನು  ಬಂಧಿಸಿದ್ದಾರೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ …

Read More »

ಉಡುಪಿ: ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದ ಪ್ರತಿಭಟನಾಕಾರರು

ಕಾರ್ಕಳ : ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ಉಡುಪಿ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು. ದೇಶದ್ರೋಹ ಘೋಷಣೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಎಲೆ ಅಡಿಕೆ ತಿಂದು ಉಗುಳಿದ ಘಟನೆಯೂ ನಡೆಯಿತು. ಪ್ರತಿಭಟನಾ ಸಭೆಯ ಕೊನೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಸೇರಿದಂತೆ ಅನೇಕರು ಎಂ.ಜಿ. ಹೆಗಡೆ ಅವರ ಭಾವಚಿತ್ರಕ್ಕೆ ಉಗಿದು ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ರಾಜಕೀಯ …

Read More »

ಮಂಗಳೂರು: ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಮಂಗಳೂರು: ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಮೂರು ದಿನಗಳ ಬಳಿಕ ಉಪ್ಪಳ ಠಾಣಾ ವ್ಯಾಪ್ತಿಯ ಮೂಸೋಡಿಯಲ್ಲಿ ಸಮುದ್ರದಲ್ಲಿ ಬುಧವಾರ ಪತ್ತೆಯಾಗಿದೆ. ಪೊರ್ಕೋಡಿ ನಿವಾಸಿ ವಿದ್ಯಾರ್ಥಿ ಲಿಖಿತ್ (18) ಮೃತದೇಹ ಪತ್ತೆಯಾಗಿದೆ. ಈತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಕುತ್ತಿಗೆಯಲ್ಲಿ ಚೈನ್, ಒಳ ಉಡುಪು ಆಧಾರದಲ್ಲಿ ಲಿಖಿತ್ ಎಂದು ಗುರುತಿಸಲಾಗಿದೆ. ಲಿಖಿತ್ ಅವರ ಮೃತದೇಹವನ್ನು ಉಪ್ಪಳದ ಮೀನುಗಾರರು ದಡಕ್ಕೆ ತಲುಪಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರು ಮಂಗಲ್ಪಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಪಟ್ಟ ಪಣಂಬೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ಪೊರ್ಕೋಡಿಯ ಸ್ನೇಹಿತರಾದ …

Read More »

ಪುತ್ತೂರು: ಆ್ಯಸಿಡ್ ದಾಳಿ – ವಿಧ್ಯಾರ್ಥಿನಿಯರಿಗೆ ಕೇರಳ ಸರಕಾರ ಪರಿಹಾರ ನೀಡಬೇಕು

ಪುತ್ತೂರು: ಕಡಬದಲ್ಲಿ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಮೇಲೆ ನಡೆದ ಆ್ಯಸಿಡ್ ದಾಳಿ ನಡೆಸಿದ ಆರೋಪಿ ಕೇರಳದ ನಿವಾಸಿಯಾಗಿದ್ದು, ಈ ಹಿನ್ನಲೆ ಕೇರಳ ಸರಕಾರ ವಿಧ್ಯಾರ್ಥಿನಿಯರಿಗೆ ಪರಿಹಾರ ನೀಡಬೇಕೆಂದು ದುರ್ಗಾವಾಹಿನಿ ಆಗ್ರಹಿಸಿದೆ. ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣವನ್ನು ವಿಶ್ವಹಿಂದೂ ಪರಿಷತ್, ದುರ್ಗಾವಾಹಿನಿ ಖಂಡಿಸಿದ್ದು, ಆರೋಪಿ ಅಬಿನ್ ಸಿಬಿ ಕೇರಳ ಮೂಲದವನಾಗಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಸರಕಾರ ಆನೆ ದಾಳಿಯಲ್ಲಿ ಸಾವನಪ್ಪಿದ ಕೇರಳದವರಿಗೆ ಪರಿಹಾರ ನೀಡಿದೆ. ಆ ರೀತಿಯಲ್ಲಿ ಇದೀಗ ಕೇರಳ ಸರಕಾರವೂ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃತ್ಯ ನಡೆದ …

Read More »

ಕಡಬ ಆ್ಯಸಿಡ್‌ ದಾಳಿ: ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ 4 ಲಕ್ಷ ರೂ.ಪರಿಹಾರ

ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಅ್ಯಸಿಡ್‌ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ ಸರ್ಕಾರ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಕೂಡಲೇ ನೀಡಲಾಗುವುದು. ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

Read More »

ಮುಲ್ಕಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

ಮುಲ್ಕಿ: ಕಿನ್ನಿಗೋಳಿಯ ಬಸ್ ನಿರ್ವಾಹಕರೊಬ್ಬರು ಬಸ್ಸಿನಲ್ಲಿ ಸಿಕ್ಕಿದ ಮಹಿಳೆಯೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾರೆ. ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಸಂಚರಿಸುತ್ತಿದ್ದ ನವದುರ್ಗ ಬಸ್ ನಲ್ಲಿ ಕಟೀಲು ನಿವಾಸಿ ವಾರಿಜಾ ಎಂಬವರ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣಗಳ ಸಣ್ಣ ಬ್ಯಾಗ್ ನಿರ್ವಾಹಕ ಸಂತೋಷ್ ಶೆಟ್ಟಿ ಸಂಕಲಕರಿಯ ಎಂಬವರಿಗೆ ದೊರೆತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅವರು ವಾಟ್ಸಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಚಿನ್ನಾಭರಣ ಕಳೆದುಕೊಂಡ ವಾರೀಸುದಾರರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದರು. ಇತ್ತ ಚಿನ್ನ ಕಳೆದುಕೊಂಡ ಮಹಿಳೆ ವನಜ ರವರು ಕಂಗಾಲಾಗಿ ಕೊನೆಗೂ ಸಾಮಾಜಿಕ …

Read More »

ಬಂಟ್ವಾಳ: ಪರಂಗಿಪೇಟೆಯಲ್ಲಿ ಅರಣ್ಯ ಇಲಾಖೆ ವಾಹನ ಡಿಕ್ಕಿ, ಪಾದಚಾರಿ ಮೃತ್ಯು..!

ಬಂಟ್ವಾಳ: ಸರಕಾರಿ ಇಲಾಖೆಗೆ ಸೇರಿದ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬಿಸಿರೋಡು ಕಡೆಯಿಂದ ಮಂಗಳೂರು ‌ಕಡೆಗೆ ಸಂಚಾರ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪುತ್ತೂರು ಅರಣ್ಯ ಇಲಾಖೆಯ ಆರ್.ಎಫ್.ಓ ಸಂಚಾರ ಮಾಡುತ್ತಿದ್ಧ ಬೊಲೆರೋ ವಾಹನ ಪರಂಗಿಪೇಟೆಯ ರಿಕ್ಷಾ ಪಾರ್ಕ್ ನ ಎದುರು ಪಾದಚಾರಿಗೆ ಡಿಕ್ಕಿಹೊಡೆದಿದೆ. ಕೂಡಲೇ ಆತನನ್ನು ಮಂಗಳೂರು …

Read More »

ಮಂಗಳೂರು: ವಿಮಾನ ನಿಲ್ದಾಣ, ಇ-ಸಿಗರೇಟ್ ಬಿಡಿ ಭಾಗ ಸಾಗಾಟ ಯತ್ನ- ವ್ಯಕ್ತಿಯ ಸೆರೆ

ಮಂಗಳೂರು: ವಿಮಾನ ನಿಲ್ದಾಣಕ್ಕೆ ದುಬ್ಬಾಯಿಂದ ಆಗಮಿಸಿದ ಪ್ರಯಾಣಿಕ ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಈ ಒಳಪಡಿಸಿದಾಗ 9,92,940 ಮೌಲ್ಯದ ಇ ಸಿಗ ರೇಟ್‌ಗೆ ಸಂಬಂಧಿಸಿದ ವಿವಿಧ ವಸ್ತುಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರ ಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆ ಆತನ ಬ್ಯಾಗ್‌ನಲ್ಲಿ 240 ಪ್ಯಾಕೆಟ್ ನ್ಯಾಚುರಲ್ ಅಮೆರಿಕನ್ – ಸ್ಪಿರಿಟ್, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಪಿಒಡಿ ಕಾಟ್ರಿಡ್ಜ್ 20 ಪ್ಯಾಕೆಟ್ * ಕ್ಯಾಲಿಬರ್ನ್ ಎ2 ರಿಲೈಯಬಲ್ ಪಿಒಡಿ, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಎ2 ಸೈಡ್ ರಿಫಿಲ್ಲಿಂಗ್ ಪಿಒಡಿ …

Read More »

ಕಡಬ: ಆ್ಯಸಿಡ್ ದಾಳಿ ಪ್ರಕರಣ; ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಪತ್ತೆ

ಕಡಬ: ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಂಬಿಎ ವಿದ್ಯಾರ್ಥಿ ಅಬಿನ್ ಸಿಬಿ ಕೃತ್ಯ ಎಸಗಲೆಂದು ಭಾನುವಾರ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಾನೆ. ಬಳಿಕ ಕಡಬಕ್ಕೆ ಬಂದಿದ್ದ ಆತನ ಚಲನವಲನ ಅಲ್ಲಿನ ಬೇಕರಿಯೊಂದರ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿಯಾಗಿರುವ ಅಬಿನ್, ಭಾನುವಾರ ರಾತ್ರಿ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಸೋಮವಾರ ಬೆಳಿಗ್ಗೆಯವರೆಗೆ ರೈಲು ನಿಲ್ದಾಣದಲ್ಲೇ ಕಾಲ ಕಳೆದ ಆತ, ಬಳಿಕ ಮಂಗಳೂರಿನಿಂದ ಬಸ್ಸಿನ ಮೂಲಕ ಕಡಬಕ್ಕೆ ಆಗಮಿಸಿದ್ದಾನೆ. ಅಬಿನ್ ಸರ್ಕಾರಿ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ …

Read More »

You cannot copy content of this page.