ನಟ ನವೀನ್ ಡಿ ಪಡೀಲ್ ಗೆ ಚಿತ್ರೀಕರಣ ವೇಳೆ ಗಾಯ! ವೈದ್ಯರು ಹೇಳಿದ್ದೇನು..?

ಕಿರುತೆರೆಯಲ್ಲಿ ಗುಂಡುಮಾಮನಾಗಿ ಫೇಮಸ್ ಆಗಿರುವ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂತಾರದಲ್ಲಿ ಲಾಯರ್ ಪಾತ್ರವನ್ನು ಮಾಡಿದ್ದ ಕೋಸ್ಟಲ್​ವುಡ್ ಸ್ಟಾರ್ ಪಡೀಲ್ ಅವರು ಚಿತ್ರೀಕರಣ ವೇಳೆ ಗಾಯಗೊಂಡಿದ್ದರು.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರಿಶೀಲಿಸಿದ ವೈದ್ಯರು ಮೂರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ತುಳು ಚಿತ್ರರಂಗದ ಖ್ಯಾತ ನಟ ನವೀನ್ ಡಿ ಪಡೀಲ್ ಅವರ ತೊಡೆಗೆ ಪೆಟ್ಟು ಬಿದ್ದಿದೆ. ಸದ್ಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಂತ್ಯಾರಿನಲ್ಲಿ ಸಿನಿಮಾ ಶೂಟಿಂಗ್ ಸಂದರ್ಭ ನಟನಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಶೂಟಿಂಗ್ ಮಾಡುವಾಗ ನವೀನ್ ಅವರು ಬಿದ್ದ ಕಾರಣ ತೊಡೆ ಮುರಿದ ಹಾಗಾಗಿದೆ. ಅವರು ಮೂರು ತಿಂಗಳು ರೆಸ್ಟ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ನವೀನ್ ಪಡೀಲ್ ಅವರು ಸದ್ಯ ನಟಿಸುತ್ತಿದ್ದ ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇದರಲ್ಲಿ ನವೀನಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಪ್ರಮುಖ ಸಿನಿಮಾ ಶೂಟಿಂಗ್ ಸಂದರ್ಭವೇ ಅವಘಡ ಸಂಭವಿಸಿದ್ದು ಇನ್ನು ಕನಿಷ್ಠ ಮೂರು ತಿಂಗಳು ನಟ ಶೂಟಿಂಗ್​ನಲ್ಲಿ ಭಾಗವಹಿಸುವುದಿಲ್ಲ.

Check Also

ಬಿಜೆಪಿಯ ಉಚ್ಚಾಟನೆಗೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ : ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ …

Leave a Reply

Your email address will not be published. Required fields are marked *

You cannot copy content of this page.