ಕರಾವಳಿ

ಉಡುಪಿ: ಮೆದುಳು ಜ್ವರ-7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ

ಉಡುಪಿ/ಮಂಗಳೂರು: ಭವಿಷ್ಯದಲ್ಲಿ ಮಕ್ಕಳಿಗೆ ಮೆದುಳು ಜ್ವರ ಬಾಧಿಸದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಮುನ್ನೆಚ್ಚರಿಕೆ ಲಸಿಕೆ ಅಭಿಯಾನ ನಡೆಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಡಿ. 5ರಿಂದ 25ರ ವರೆಗೆ ಅಭಿಯಾನ ನಡೆಯಲಿದ್ದು, 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 2,17,707 ಮಕ್ಕಳಿಗೆ ಹಾಗೂ ಮಂಗಳೂರು ಪಾಲಿಕೆ ಮತ್ತು ಗ್ರಾಮಾಂತರ ಭಾಗದ 2.20 ಲಕ್ಷ ಸೇರಿದಂತೆ ಜಿಲ್ಲೆಯ ಸುಮಾರು 5 ಲಕ್ಷ ಮಕ್ಕಳು ಲಸಿಕೆ ಪಡೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಬಾಗಲಕೋಟೆ, ಗದಗ, ಹಾಸನ, …

Read More »

ಕೆಲಸ ಹುಡುಕಿಕೊಂಡು ಗುಜರಾತ್ ನಿಂದ ಉಡುಪಿಗೆ ಬಂದಿದ್ದ ವ್ಯಕ್ತಿ ಸಾವು!

ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ ಗುಜರಾತ್ ಮೂಲದ ವ್ಯಕ್ತಿಯೊಬ್ಬರು‌ ಅನಾರೋಗ್ಯದಿಂದ ಮೃತಪಟ್ಟ ಘಟನೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೃತರನ್ನು ಗುಜರಾತ್ ನ ನವಸಾರಿ ನಿವಾಸಿ 58ವರ್ಷದ ಬಲವಂತ ಬಾಯ್ ತಾಂಡೇಲ ಎಂದು ಗುರುತಿಸಲಾಗಿದೆ. ಇವರು ಹಾಗೂ ಇವರ ಮಗ ಮುಂಬೈನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಹತ್ತು ದಿನಗಳ ಹಿಂದೆ ಊರಿಗೆ ಹೋಗುವುದಾಗಿ ಮುಂಬೈಯಿಂದ ಹೊರಟ್ಟಿದ್ದರು. ಆದರೆ, ತನ್ನ ಊರಾದ ಗುಜರಾತ್ ಗೆ ಹೋಗುವ ಬದಲು ಉಡುಪಿಯ ಮಲ್ಪೆಗೆ ಬಂದಿದ್ದರು ಎನ್ನಲಾಗಿದೆ. ಮಲ್ಪೆಗೆ ಬಂದಿದ್ದ ಬಲವಂತ ಬಾಯ್, ವಸತಿ ಗೃಹವೊಂದರಲ್ಲಿ ತಂಗಿದ್ದರು. ನಾಲ್ಕು ದಿನಗಳ ಹಿಂದೆ …

Read More »

ಬೆಳ್ತಂಗಡಿ: ಗುರುವಾಯನಕೆರೆ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಶಂಕೆ

ಬೆಳ್ತಂಗಡಿ: ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯ ರಿಕ್ಷಾ ಡ್ರೈವರ್ ಒಬ್ಬರ ಕೆಲವು ದಾಖಲೆಗಳು ಕೆರೆ ಬಳಿ ಪತ್ತೆಯಾಗಿದ್ದು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಅಗ್ನಿಶಾಮಕ ದಳ ಬೆಳಾಲು ವಿಪತ್ತು ನಿರ್ವಹಣಾ ತಂಡದವರು ಶೋಧ ಕಾರ್ಯ ನಡೆಸುತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Read More »

ಬೈಂದೂರು: ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವು!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಂಕೇಶ್ವರದಲ್ಲಿ ರೈಲು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ. ಮೃತ ಯುವಕನನ್ನು ಸಂತೋಷ್ (28 ) ಎಂದು ಗುರುತಿಸಲಾಗಿದೆ. ಇವರು ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿದ್ದು ,ದೇಹವು ಛಿದ್ರಗೊಂಡಿದೆ. ಯುವಕನ ಮೃತದೇಹವನ್ನು ಸ್ಥಳೀಯ ಸರಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಂಗಳೂರು: ಸ್ಫೋಟದ ಶಂಕಿತ ಉಗ್ರ ಶಾರೀಕ್‌ ಚೇತರಿಕೆ: ಆಸ್ಪತ್ರೆಗೆ ಬಿಗಿ ಭದ್ರತೆ..!

ಮಂಗಳೂರು : ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು, ವಿಚಾರಣೆ ತೀವ್ರಗೊಳಿಸಲು ಪೊಲೀಸರು ವೈದ್ಯರ ಅನುಮತಿಗಾಗಿ ಕಾಯುತ್ತಿದ್ದಾರೆ. ಆತನ ಶ್ವಾಸಕೋಶದೊಳಗೆ ಹೊಗೆ ತುಂಬಿದ್ದರಿಂದ ಆರೋಗ್ಯ ಹದಗೆಟ್ಟಿತ್ತು. ಆತನ ಕಣ್ಣಿಗೂ ಹಾನಿಯಾಗಿತ್ತು. ಇದೀಗ ಚಿಕಿತ್ಸೆಯಲ್ಲಿ ತುಸು ಚೇತರಿಸಿಕೊಂಡಿದ್ದು, ತನಿಖಾಧಿಕಾರಿಗಳು ತನಿಖೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಎನ್‌ಐಎ ತನಿಖೆ ಕೈಗೆತ್ತಿಕೊಳ್ಳಲಿದ್ದು ಇದರಿಂದ ಆತನ ಉದ್ದೇಶ, ಹಿಂದಿರುವ …

Read More »

ಮುಡಿಪು: ಬೀಫ್ ಬಿರಿಯಾನಿ ಇದೆ ಎಂದ ಹೊಟೇಲ್ ಮೇಲೆ ದಾಳಿ

ಮುಡಿಪು: ಗೋಮಾಂಸದ ಖಾದ್ಯ ಇದೆ ಎಂದ ಹೊಟೇಲ್ ಮೇಲೆ ದಾಳಿ ಮಾಡಿರುವ ಘಟನೆ ಮುಡಿಪು ಎಂಬಲ್ಲಿ‌ ನಡೆದಿದೆ. ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ ಇದೆ ಎಂದು ಗ್ರಾಹಕರನ್ನು ಸೆಳೆಯಲು ಮಾಡಿದ ವಿಡಿಯೋದಲ್ಲಿ ಹೇಳಲಾಗಿದೆ ಎನ್ನಲಾಗಿದೆ. ಇದನ್ನು ನೋಡಿದ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೊಟೇಲ್ ಗೆ ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌.ಈ ವೇಳೆ ಗೋಮಾಂಸದ …

Read More »

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ ಕುಂಬ್ಳೆ ಸುಂದರ ರಾವ್ ನಿಧನ

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88) ಅವರು ಬುಧವಾರ ನಿಧನರಾಗಿದ್ದಾರೆ. ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಅವರು ಸುರತ್ಕಲ್, ಧರ್ಮಸ್ಥಳ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು. 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ …

Read More »

ಉಡುಪಿ ಮಠಕ್ಕೂ ಬಂದು ಹೋಗಿದ್ದ ಶಾರೀಖ್ : ದೇವಾಲಯದ ಸುತ್ತಮುತ್ತ ಬಿಗಿಭದ್ರತೆ

ಮಂಗಳೂರು : ಮಂಗಳೂರು ಆಟೋ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಇತ್ತೀಚೆಗೆ ಉಡುಪಿ ಮಠಕ್ಕೆ ಕೂಡ ಬಂದಿದ್ದನು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಕ್ಟೋಬರ್ 16 ರಂದು ಉಡುಪಿಯ ಕಾರ್ ಸ್ಟ್ರೀಟ್ ಪ್ರದೇಶಕ್ಕೆ ಬಂದು ಕಾರ್ಕಳ ಮತ್ತು ಬಂಟ್ವಾಳಕ್ಕೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಕೃಷ್ಣಮಠದ ಕಾರ್ ಸ್ಟ್ರೀಟ್ ಪ್ರದೇಶದ ಅಂಗಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶಾರೀಖ್ ಉಡುಪಿ ಮಠಕ್ಕೆ ಬಂದು ಹೋಗಿರುವ ಕುರಿತು ಗೊತ್ತಾಗಿದೆ. ಅಕ್ಟೋಬರ್ 16 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ …

Read More »

ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ವರ್ಗಾವಣೆ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣಾ ನಿರೀಕ್ಷಕ ರಾಗಿ ವರ್ಗಾವಣೆಗೊಂಡಿದ್ದಾರೆ. ಕರಾವಳಿ ಕಾವಲು ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ರಾಮಕೊಂಡಾಡಿ ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾಗಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ನಾಗರಾಜ್ ಟಿ.ಡಿ. ಕಾರ್ಕಳ ವೃತ್ತ ಪೊಲೀಸ್ ನಿರೀಕ್ಷಕರಾಗಿ ಹಾಗೂ ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ. ಕರಾವಳಿ ಕಾವಲು ಪೊಲೀಸ್ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದಾರೆ.

Read More »

ಉಡುಪಿ: ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಓಡಿಸಿದ ಗ್ರಾಮಸ್ಥರು

ಉಡುಪಿ: ಇತ್ತೀಚ್ಚಿಗೆ ಧಾರ್ಮಿಕ ಸಂಘರ್ಷಗಳು ಹೆಚ್ಚುತ್ತಿದ್ದು ಈ ನಡುವೆ ವ್ಯಾಪರಕ್ಕೂ ಧರ್ಮದ ರೋಗ ಅಂಟಿಸಲಾಗುತ್ತಿದೆ. ಈತನ್ಮಧ್ಯೆ ಉದ್ಯಾವರದ ಕುತ್ಪಾಡಿಯ ಜಾತ್ರೆಯಲ್ಲಿ ಅನ್ಯ ಧರ್ಮದವರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದು ಕಾರ್ಯಕರ್ತರನ್ನು ಗ್ರಾಮಸ್ಥರು ಓಡಿಸಿದ ಘಟನೆ ವರದಿಯಾಗಿದೆ. ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ದೇವಸ್ಥಾನದಲ್ಲಿ ಪ್ರತಿ ವರ್ಷ ಎಲ್ಲ ಧರ್ಮೀಯರು ಅಂಗಡಿಯಿಡುವುದು ವಾಡಿಕೆ. ಈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಸೌಹರ್ದದ ನೆಲೆವೀಡಾದ ಇಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಬಂದ ಹಿಂದು ಕಾರ್ಯಕರ್ತರನ್ನು ವಾಪಸು ಕಳುಹಿಸಿ ಸುದ್ದಿಯಾಗಿದೆ. ಹಿಂದೂ ಮುಖಂಡನೋರ್ವ ತನ್ನ …

Read More »

You cannot copy content of this page.