ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮತ್ತೆ ಮುಂದುವರೆದಿದೆ. ಜಿಲ್ಲೆಯಲ್ಲಿ ಸಿನಿಮಾ ವೀಕ್ಷಿಸಲು ಬಂದಿದ್ದ ಅನ್ಯಕೋಮಿನ ಜೋಡಿಗೆ ತಡೆ ಹಿಡಿದಿದ್ದಾರೆ.
ಮಂಗಳೂರಿನ ಬಿಜೈ ಬಳಿಯ ಭಾತರ್ ಚಿತ್ರಮಂದಿರದ ಬಳಿ ಘಟನೆ ನಡೆದಿದೆ. ಅನ್ಯಕೋಮಿನ ಜೋಡಿಯನ್ನು ತಡೆದು ಬಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಹೀಗಾಗಿ ಉರ್ವಾ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.ಈ ವೇಳೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರಿಂದ ಆ ಜೋಡಿಯ ರಕ್ಷಣೆ ಮಾಡಿದ್ದಾರೆ. ಕೂಡಲೇ ಆ ಜೋಡಿಯನ್ನು ಉರ್ವಾ ಪೊಲೀಸರು ಠಾಣೆಗೆ ಕರೆತಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.