ಮಂಗಳೂರು; ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಸುರೇಂದ್ರ ದೇವಾಡಿಗ (31) ನಾಪತ್ತೆಯಾದ ಯುವಕ. ಸುರೇಂದ್ರ ಅವರು ಅ.20ರಂದು ಕೆಲಕ್ಕೆ ಹೋಗುವುದಾಗಿ ಮನೆಯಿಂದ ತೆರಳಿರುವವರು ಮನೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ. ಅವರು ನಾಪತ್ತೆಯಾಗಿರುವ ಕುರಿತು ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದ್ದು. ಎಲ್ಲೂ ಪತ್ತೆಯಾಗಿಲ್ಲ. ನಾಪತ್ತೆಯಾದ ದಿನದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಅವರ ಅಣ್ಣ ಪ್ರಸಾದ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Check Also
ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ
ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ …